ದಲಿತರ ಗೋಳನ್ನ ಆಲಿಸಿ ದೊಡ್ಡೇನಹಳ್ಳಿ ಕಾಲೋನಿಯ ಮೂಲಭೂತ ಸೌಕರ್ಯದ ಕೊರತೆ.
ಎಷ್ಟೇ ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ ಯಾಕೆ?
ತುರುವೇಕೆರೆ. ತಾಲ್ಲೂಕಿನ ಕಸಬಾ ಹೋಬಳಿಯ ಮುನಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇನಹಳ್ಳಿ ದಲಿತ ಕಾಲೋನಿಯಲ್ಲಿ ಚರಂಡಿಗಳ ಅಸ್ತವ್ಯಸ್ತತೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರತೆ ಎದುರಾಗಿದೆ. ಚರಂಡಿಗಳು ಕಸ ಮತ್ತು ಕಡ್ಡಿಯಿಂದ ತುಂಬಿ ಕೊಳಚೆ ನೀರು ಶೇಖರಣೆಯಾಗಿ ಇರುವ ಕಾರಣ ಸೊಳ್ಳೆಗಳ ಪ್ರಮಾಣ ಉಲ್ಬಣಗೊಂಡಿದ್ದು, ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸೋಂಕುಗಳ ಅಪಾಯ ಎದುರಾಗಿ ದಲಿತ ಕಾಲೋನಿ ದುರ್ನಾಥ ಬೀರುತ್ತಿದೆ.
ದೊಡ್ಡೇನಹಳ್ಳಿ ಕಾಲೋನಿಯ ಕುಮಾರ್ ಡಿ ಮಾತನಾಡಿ ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಿದರೂ ಯಾವುದೇ ರೀತಿಯ ದಲಿತ ಕಾಲೋನಿಯನ್ನು ಸ್ವಚ್ಛಗೊಳಿಸದೆ ಬೀದಿ ದೀಪಗಳ ನಿರ್ವಹಣೆ ಮಾಡದೆ ನಿರ್ಲಕ್ಷ ಮಾಡುತ್ತಿದ್ದಾರೆ “ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಮಕ್ಕಳು, ವೃದ್ಧರು ಬಾಧೆಪಟ್ಟು ಆಸ್ಪತ್ರೆಗಳಿಗೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ,”.
ದಲಿತ ಮಹಿಳಾ ಅಧ್ಯಕ್ಷರಾದ ಹೇಮಲತಾ ಮಾತನಾನೋಡಬೇಕಾಗಿದೆಲೋನಿಯ ಪರಿಸ್ಥಿತಿ ಅತ್ಯಂತ ಹೀನಾಯವಾಗಿದ್ದು, ಬೀದಿ ದೀಪಗಳು ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ
ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಅನಾರೋಗ್ಯದ ಹೊರೆ ಜತೆಯಾಗಿದೆ. ಈ ರೀತಿಯಾಗಿ ನಮ್ಮ ದಲಿತ ಕಾಲೋನಿಯನ್ನು ಕಡೆಗಾನಿಸಲು ಕಾರಣವೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ CEO ಅವರು ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಮತ್ತು ತುರುವೇಕೆರೆ ತಾಲ್ಲೂಕು E.O ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೆ ಈ ನತದೃಷ್ಟ ದಲಿತ ಕಾಲೋನಿವಾಸಿಗಳಿಗೆ ಮಾನವೀಯತೆ ನೆಲೆಸುವಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
“ದೈನಂದಿನ ಜೀವನವೇ ಬಯದಭೀತಿಯಾಗಿದೆ. ಸರ್ಕಾರದ ನಡವಳಿಕೆಯು ಪ್ರಜಾಪ್ರಭುತ್ವಕ್ಕೆ ನಿಲ್ಲುವ ಪ್ರಶ್ನೆಯಾಗಿದೆ” ಎಂಬುದು ಜನತೆಯ ತೀವ್ರ ಬೇಸರ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊ0ಡು ದೊಡ್ಡೇನಹಳ್ಳಿ ದಲಿತ ಕಾಲೋನಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಿಕೊಡುತಾರೋ. ಎಂಬುದನ್ನು
ಕಾದು ನೋಡಬೇಕಾಗಿದೆ
ವರದಿ:ಮಂಜು ಗುರುಗದಹಳ್ಳಿ.