ಸ್ನೇಹಿತರ ದಿನಾಚಾರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ
ತುಮಕೂರು : ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿ ಹಿರೇ ದೊಡ್ಡವಾಡಿ ಶ್ರೀ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ನಿವೃತ್ತ ಶಿಕ್ಷಕರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶ್ರೀ ಉಮಾ ಪ್ರಗತಿ ಪ್ರೌಢಶಾಲೆ ಹಿರೇ ದೊಡ್ಡವಾಡಿ 1991ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೂ ಅಂದರೆ 2025ರ ವರೆಗೆ 35 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಪ್ರಾರಂಭದಲ್ಲಿ ಈ ಶಾಲೆಗೆ ಬನಾದಿಯಾಗಿ 1991 ರಿಂದ 2025 ರ ವರೆಗೆ ಸುಮಾರು 35 ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ವೃಂದದವರಿಗೆ 1991 ರಿಂದ 2006ರ ವರೆಗಿನ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮವನ್ನು ಮಾಡಿ ಕೊಡಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಹೂವು, ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಿಕ್ಷಕರ ಸೇವೆಯನ್ನು ಗುರುತಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ.
ಇದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಮತ್ತು ಶಿಕ್ಷಣದ ಮಹತ್ವವನ್ನು ಸಾರುತ್ತದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಳೆಯ ವಿದ್ಯಾರ್ಥಿ ನರಸಿಂಹರಾಜು ಹಿರೇ ದೊಡ್ಡವಾಡಿ ನಾನು ವೃತ್ತಿಯಲ್ಲಿ ಲೆಕ್ಕೀಗ ವೃತ್ತಿಯನ್ನು ಮಾಡುತ್ತಿದ್ದು ಸುಮಾರು 12 ವರ್ಷಗಳ ಕಾಲ ನಮ್ಮ ನಮ್ಮ ಗುರುಗಳು ಯಾವುದೇ ಸಂಬಳದ ನಿರೀಕ್ಷೆ ಇಟ್ಟುಕೊಳ್ಳದೆ ನಮ್ಮೆಲ್ಲರಿಗೂ ಶಿಕ್ಷಣ ಕೊಟ್ಟಂತ ಶಿಕ್ಷಕರಿಗೆ ಹಳೆಯ ಸ್ನೇಹಿತರಲ್ಲ ಸೇರಿ ಗುರುವಂದನ ಕಾರ್ಯಕ್ರಮವನ್ನು ಮತ್ತು ಸ್ನೇಹಿತರ ದಿನಾಚರಣೆಯನ್ನು ಮಾಡುತ್ತಿದ್ದೇವೆ ಪ್ರಸ್ತುತ ದಿನಗಳಲ್ಲಿ ಮನೆಗಳಲ್ಲಿ ಜೀವನದ ಮೌಲ್ಯಗಳನ್ನು ಕಲಿಸುತ್ತಿಲ್ಲ ಅಂತಹ ಸಂದರ್ಭದಲ್ಲಿ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಬುನಾದಿ ಹಾಕಲು ಅವರಿಂದ ಮಾತ್ರ ಸಾಧ್ಯವಾಗುವಂಥದ್ದು ಪ್ರತಿ ಹಂತದಲ್ಲಿ ಮಾರ್ಗದರ್ಶನವನ್ನು ಕೊಡುತ್ತಾರೆ ಹಾಗೂ ನಮಗೆ ಹಿಂದೆ ಮಾರ್ಗದರ್ಶನ ಕೊಟ್ಟಿದ್ರು. ಇದರ ಫಲವಾಗಿ ಇಂಥ ಕಾರ್ಯಕ್ರಮ ಮಾಡುವ ಯೋಚನೆ ನಮಗೆ ಬಂತು.
ಈ ಕಾರ್ಯಕ್ರಮದ ಮೂಲಕ 15 ವರ್ಷದ ಹಿಂದಿನ ಸ್ನೇಹಿತರು ಹಾಗೂ ಶಿಕ್ಷಕರು ಸಿಕ್ಕಿರುವುದು ಸಂತೋಷ ತಂದಿದೆ ಈಗಿನ ಪರಿಸ್ಥಿತಿಯನ್ನು ನೋಡುವುದಾದರೆ ಸರ್ಕಾರಿ ಶಾಲೆಗೆ ಸೇರಿಸುವ ಮನೋಭಾವ ಬದಲಾಗಿದೆ ಇಂತಹ ಕಾರ್ಯಕ್ರಮಗಳು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮನಸ್ಸನ್ನು ಉತ್ತೇಜವನ್ನ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಏಕೆಂದರೆ ನಾವು ಸರ್ಕಾರಿ ಶಾಲೆಗಳಲ್ಲಿ ಓದಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿರುವುದನ್ನು ಇಲ್ಲಿ ನೋಡಬಹುದು ಎಂದು ತುಳಸಿ ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀ ಮಂಜುನಾಥ ಸಿಡಿ ಪದ್ಮಾವತಿ ನಟರಾಜು ಜಯಚಂದ್ರ ರೆಡ್ಡಿ. ಮರಿಯಣ್ಣ. ಹನುಮಂತರಾಯಪ್ಪ. ಕೆಂಪರಾಜು ಮೈದಾಳ. ನಾಗರಾಜು ಕ್ಯಾಸಂದ್ರ ಚಿಕ್ಕಣ್ಣ ಬೆಳಧರ. ಪ್ರಸನ್ನ ಕುಮಾರ್. ಪ್ರಭಾ ಡಿಎಸ್ ಶ್ರೀನಿವಾಸ್ ಹಾಗೂ ಹಿರೇ ದೊಡ್ಡವಾಡಿ ಗ್ರಾಮದ ಅಕ್ಕಪಕ್ಕದ ಗ್ರಾಮದ ಹಳೆ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ವರದಿ : ಭರತ್ ಕೆ