ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ

ವಿಜಯಪುರ: ಶಾಂತಿ ಸೇನೆಯನ್ನು ಭಾರತದೇಶದಲ್ಲಿ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಅನುಯಾಯಿಗಳ ಸ್ವಯಂ ಸೇವಕರ ಸೇವಾ ಸೇನೆ ಮಾಡಿದೆ ಎಂದು ವಾರಣಾಸಿ ಯ ಅಖಿಲ ಭಾರತ ಸರ್ವೋದಯ ಮಂಡಳಿಯ ಪ್ರಧಾನ ಪ್ರಕಾಶಕ ಅಶೋಕ್ ಭಾರತ್ ತಿಳಿಸಿದರು.

ವಿಜಯಪುರ ಪಟ್ಟಣದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಯುವ ಕೋಶ ಹಾಗೂ ರಾಜ್ಯದ ವಿವಿಧ ಕಾಲೇಜುಗಳ ಸ್ವಯಂಸೇವಕರ ತಂಡ ಮಹಾರಾಷ್ಟ್ರ ರಾಜ್ಯದ ವಾರ್ದ ಜಿಲ್ಲೆಯ ಸೇವಾಗ್ರಾಮದಲ್ಲಿ ಆಯೋಜಿಸಲಾದ ಶಾಂತಿ ಸೇನಾ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಈ ದೇಶದಿಲ್ಲಿ ಕೋಮುಗಲಭೆಯನ್ನು ಕಡಿಮೆ ಮಾಡಲು ಹಾಗೂ ಸ್ವಯಂ ಸೇವಕರಿಗೆ ಅಹಿಂಸಾತ್ಮಕ ಶಾಂತಿಪಾಲನಾ ತರಬೇತಿಯನ್ನು ನೀಡುವುದು ಶಾಂತಿ ಸೇನಾ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ವಿ.ಪ್ರಶಾಂತ ಮಾತನಾಡಿ ಮಹಾತ್ಮ ಗಾಂಧಿಜಿ ಅವರು ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಅದು ಶಾಂತಿ ಎಂದರ್ಥ ವಾಗಿದ್ದು ಈ ಮಹಾನ್ ಸಂದೇಶವನ್ನು ವಿಶ್ವಕ್ಕೆ ಸಾರಿದ ಇವರು ಮೊದಲಿಗರು. ಆದ್ದರಿಂದ ಇಂತಹ ಶಿಬಿರಗಳಲ್ಲಿ ಭಾಗವಹಿಸು ವ ಯುವ ಸ್ವಯಂ ಸೇವಕರಿಗೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಶಾಂತಿ ಸದ್ಭಾವನೆಯ ಹರಿವು ಮೂಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಅಖಿಲ ಭಾರತ ಸರ್ವೋದಯ ಮಂಡಳಿಯ ಯುವ ಕೋಶದ ರಾಷ್ಟ್ರೀಯ ಸಂಯೋಜಕ ಭೂಪೇಶ್ ಬೂಷಣ್, ಬೆಂಗಳೂರಿನ ಕೇಂಬ್ರಿಡ್ಜ್ ಕಾಲೇಜಿನ ಬಿ.ಸಿ. ಯಶ್ವಂತ್,ಆರ್.ತೇಜಸ್, ಪ್ರಣಮ್ ಶೆಟ್ಟಿ,ಜಿ.ಎಸ್,ಕೇದಾರ್, ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಡಿ.ಮಾರುತಿ,ಎ.ಜೆ. ಪ್ರಜ್ವಲ್,ಎಂ.ನವೀನ್ ಕುಮಾರ್, ಎಚ್.ಕೆ.ಗುರುಪ್ರಸಾದ್, ಆರ್. ಹರ್ಷಿತ,ಜಿ.ಟಿ.ಭೂಮಿಕಾ, ಎಂ. ಮುಷರಿಫಾ ರಮ್ಶಿ, ಎಂ.ಲತ, ಎಂ. ಖುಷಿ,ಎಸ್.ಹೃಷಿತಾ,ಕೆ.ಪಿ.ಸಿಂಧು ಹಾಗೂ ಕೆ.ಎ.ದಿವ್ಯ ಹಾಜರಿದ್ದರು.