ಲೆಜೆಂಡ್ಸ್ ಪಬ್ಲಿಕ್ ಶಾಲೆಯ ನೂತನ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ
ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ಲೆಜೆಂಡ್ಸ್ ಪಬ್ಲಿಕ್ ಶಾಲೆಯ ನೂತನ ಡ್ಯಾನ್ಸ್ ಕ್ಲಾಸ್ ಕಚೇರಿ ಉದ್ಘಾಟನಾ ಸಮಾರಂಭವನ್ನು ಸಂಸ್ಥೆಯ ಮುಖ್ಯಸ್ಥರಾದ ಯರೇಗೌಡ ರವರು ಉದ್ಘಾಟಿಸಿದರು.
ನಂತರ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ತಮ್ಮ ಏಕಾಗ್ರತೆಗೆ ಸಹಕಾರ ವಾಗುತ್ತದೆ ಅದೇ ರೀತಿ ಶಾಲೆಯ ಅವಧಿಯಲ್ಲಿ ಕೆಲ ಸಮಯ ನೃತ್ಯದ ತರಗತಿಯು ಸಹ ನಮ್ಮ ಶಾಲೆಯಲ್ಲಿ ಇಂದಿನಿಂದ ಪ್ರಾರಂಭ ಗೊಂಡಿದ್ದು ಇದರಿಂದ ಮಕ್ಕಳ ಮುಂದಿನ ತಮ್ಮ ಉಜ್ವಲ ಭವಿಷ್ಯಕ್ಕೆ ಉಪಯೋಗವಾಗುತ್ತದೆ ಎಂದು ತಿಳಿದು ಈ ನೃತ್ಯ ತರಗತಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.