ಭೂ ಗಳ್ಳರ ಜತೆ ಶಾಮೀಲಾಗಿ ಕೋಟ್ಯಾಂತರ ರೂ ಆಸ್ತಿಗೆ ಶಾಮೀಲಾದ ವಿಜಯಪುರ ಸರ್ಕಲ್ ಇನ್ಸ್ಪೆಕ್ಟರ್ ಅಮಾನತ್ತಿಗೆ ಬಿಎಸ್ಪಿ ಒತ್ತಾಯ
ದೇವನಹಳ್ಳಿ: ತಾಲೂಕಿನ ವಿಜಯಪುರ ಪರೀವೀಕ್ಷಣೆ ಮಂದಿರದಲ್ಲಿ ಭೂಗಳ್ಳರ ಜೊತೆ ಸರ್ಕಲ್ ಇನ್ಸ್ಪೆಕ್ಟರ್ ಶಾಮಿಲಾಗಿ ನ್ಯಾಯಾಲಯದಲ್ಲಿರುವ ಪ್ರಶ್ನಿತ ಜಮೀನು ಅಕ್ರಮವಾಗಿ ನೋಂದಣಿ ಮಾಡಿಸಿ ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿ ಕಬಳಿಸಿದ್ದಾ ರೆಂದು ಆರೋಪಿಸಿ ಬಿಎಸ್ಪಿಯವರು ಪತ್ರಿಕಾಗೋಷ್ಠಿ ನಡೆಸಿದರು.
ದೇವನಹಳ್ಳಿ ತಾಲೂಕಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಗಳು, ಬಹುರಾಷ್ಟೀಯ ಕಂಪನಿಗಳು ತಲೆಯೆತ್ತಿದ್ದ ಹಿನ್ನಲೆ ಈ ಭಾಗದಲ್ಲಿ
ಬಂಗಾರಕ್ಕಿಂತ ಹೆಚ್ಚಿನ ಬೆಲೆಬಂದಿದ್ದು ಕೆಲ ಭೂಗಳ್ಳರು ದಲಿತರು ಮಧ್ಯಮ ವರ್ಗದವರ ಜಮೀನುಗಳ ಮೇಲೆ ವಕ್ರದೃಷ್ಟಿ ಅಮಾಯಕರನ್ನು ವಂಚಿತರಿಗೆ ಕೖ ಜೋಡಿ ಸಿದ ವಿಜಯಪುರ ಪೊಲೀಸ್ ಠಾಣೆ ಸರ್ಕಲ್ ಇನ್ಸ ಪೇಕ್ಟರ್ ವಿರುದ್ಧ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಬಂಗಾರಪ್ಪ ಅವರು ಕಿಡಿಕಾರಿದರು.
ವಿಜಯಪುರ ಬಳಿಯ ಮಂಗಸಂದ್ರ ಗ್ರಾಮದ ನಿಮ್ಮ ತಾಯಿಯ ಜಮೀನು ನನ್ನ ಹೆಸರಿಗೆ ಮಾಡಿಸಿಕೊಡು ತ್ತೇವೆ ಎಂದು ಹೇಳಿ ನಂಬಿಸಿ ನನಗೆ ಗೊತ್ತಿಲ್ಲದಂತೆ ಕ್ರಯದ ಒಪ್ಪಿಗೆ ಮನೆ ಮಾಡಿಸಿಕೊಂಡು ವಂಚಿಸಿ ಮೋಸ ಮಾಡಿ ಜೀವ ಬೆದರಿಕೆ ಹಾಕಿರುವ ವಿಚಾರವಾಗಿ ಆ.08 ರಂದು ಎಸ್.ಪಿ.ಸಾಹೇಬರಿಗೆ ವಿಜಯಪುರ ಠಾಣಾ ಇನ್ಸ್‌ಪೆಕ್ಟರ್ ರವರು ವಿರುದ್ದ ದೂರು ನೀಡಿದ್ದೇನೆ.
ಜಮೀನು ಕಳೆದು ನಷ್ಟವನ್ನು ಅನುಭವಿಸಿದ ಸಂತ್ರಸ್ಥೆ
ನಾಗರತ್ನ ಮ್ಮ ಮಾತನಾಡಿ, ನನ್ನನ್ನು ನಂಬಿಸಿ ನನಗೆ ಗೊತ್ತಿಲ್ಲದಂತೆ ರಮೇಶ್ ಬಿನ್ ಕಿಟ್ಟಪ್ಪ ಎಂಬುವವರು ಗಂಗಾಧರ್. ಜಗದೀಶ್, ರಮೇಶ್, ದೇವರಾಜು ಹೆಸರಿಗೆ ಒಪ್ಪಿಗೆ ಪತ್ರ ಮಾಡಿಸಿ ವಂಚಿಸಿ ಭೂಗಳ್ಳರ ಜೊತೆ ಶಾಮಿಲಾಗಿ ದೂರು ದಾಖಲಿಸದೇ ನೆಪ ಮಾತ್ರಕ್ಕೆ NCR ಮಾಡಿ ನನ್ನನ್ನೇ ಹೆದರಿಸಿ ಆಧಿಕಾರ ದುರುಪಯೋಗ ಮಾಡಿಕೊಂಡು ಕರ್ತವ್ಯ ಲೋಪವೆ ಸಗಿದ್ದಾರೆ. ನ್ಯಾಯಾಲಯದ ಉಲ್ಲಂಘನೆ ಮಾಡಿದವರ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸು ವಂತೆ ಮಾಧ್ಯಮಗಳ ಮೂಲಕ ಒತ್ತಾಯಿಸುತ್ತೇನೆಂದು ದೂರಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ನರಸಿಂಹರಾಜು ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ದಲಿತ ಯುವ ಮುಖಂಡ ಮಂಜುನಾಥ್, ನಾಗವೇಣಿ, ಗೌರಮ್ಮ, ಗಂಗಾಧರ್ ರೇಣುಕಾ, ಮುನಿಯಮ್ಮ ಸರೋಜಾ ಪದ್ಮಾವತಿ ಸೇರಿದಂತೆ ಅನೇಕರು ಹಾಜರಿದ್ದರು.