ಚನ್ನರಾಯಪಟ್ಟಣ ಸಂಘವು ಹೆಚ್ಚು ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವುದು ಸಂತಸದಾಯಕ

ಚನ್ನರಾಯಪಟ್ಟಣ ಎಂ. ಪಿ.ಆರ್.ಎ.ಸಿ.ಎಸ್ 2024- 25 ನೇ ಸಾಲಿನ ವಾರ್ಷಿಕ ಮಹಾ ಸಭೆ

ದೇವನಹಳ್ಳಿ : ತಾಲೂಕಿನ ಚನ್ನರಾಯ ಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಡಿ .ಎಂ ಮುನಿಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.2023-24ನೇ ಸಾಲಿನ ನಡಾವಳಿಕೆಗಳನ್ನು ಓದಿ, 2024- 25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ, ಆಯಾ ವ್ಯಯ ಲಾಭ ನಷ್ಟ ವ್ಯಾಪಾರ ತತ್ತಿ ಆಸ್ತಿ ಜವಾಬ್ದಾರಿ ತಕ್ಕೆಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಯಾಗಿ ನಾರಾಯಣಸ್ವಾಮಿ ವಿವರವಾಗಿ ಸಭೆಯಲ್ಲಿ ಮಂಡಿಸಿದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿ ಸಿದ್ದ ಜಿಲ್ಲಾ ಬ್ಯಾಂಕ್ ನಿರ್ದೇಶಕರಾದ ಹಿತ್ತರಹಳ್ಳಿ ರಮೇಶ್ ಮಾತ ನಾಡಿ ಮೊದಲು ವಿಎನ್ ಅನ್ನು ಈಗ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಎಂದು ಮಾಡಲಾಗಿದ್ದು,ಮೊದಲು ಬರೀ ಕೃಷಿಯೇ ಇತ್ತು. ಈಗ ವಿವಿಧೋದ್ದೇಶ ಗಳಿಗೆ ಸಂಘ ದಿಂದ ಸಹಕಾರ ನೀಡುತ್ತಾ ಬಂದಿದೆ. ಚನ್ನರಾಯಪಟ್ಟಣ ಸಂಘವು ಹೆಚ್ಚು ಅಭಿವೃದ್ಧಿಯತ್ತ ಮುನ್ನಡೆಯುತ್ತಿ ರುವುದು ಸಂತಸದಾಯಕ,ಇಲ್ಲಿನ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಹ ಣಾಧಿಕಾರಿಗಳು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಎಲ್ಲ ಸಹದಿ ಸದಸ್ಯರು ಕೂಡ ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ.ಬಿಡಿಸಿಸಿ ಬ್ಯಾಂಕ್ ನ ಸಹಕಾರದೊಂದಿಗೆ ಮಹಿಳೆಯರಿಗೆ ಕೇವಲ 75 ಪೈಸೆ ಬಡ್ಡಿಯೊಂದಿಗೆ ಸಾಲಗಳನ್ನು ನೀಡುತ್ತಾ ಬಂದಿದೆ,ಇದು ನಮ್ಮ ಬ್ಯಾಂಕ್ ಎಂದು ತಿಳಿದು ತಮ್ಮ ವ್ಯವಹಾರಗಳನ್ನು ಇಲ್ಲಿಯೇ ನಡೆಸಿ, ಹೆಚ್ಚಿನ ಡಿಪಾಸಿಟ್ ನಿಂದ ನಿಮ್ಮ ಬ್ಯಾಂಕಿಗೆ ಅಧಿಕ ಲಾಭಬರಲಿದ್ದು ನಿಮಗೂ ಕೂಡ ಬಡ್ಡಿ ಬರಲಿದೆ. ನಿಮ್ಮ ಸಹಕಾರದಿಂದ ಬ್ಯಾಂಕಿನ ಅಭಿವೃದ್ಧಿ ಆಗಲಿದ್ದು ಹೆಚ್ಚಿನ ರೀತಿಯಲ್ಲಿ ಸಹಕರಿಸಿ ಎಂದು ಹೇಳಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಬೂದಿಗೆರೆ ಮುನಿರಾಜು ಮಾತನಾಡಿ ಸಹಕಾರ ಸಂಘದಲ್ಲಿ ರೈತರಿಗೆ ಅನುಕೂಲವಾಗುವ ರಸಗೊಬ್ಬರಗಳನ್ನು ಮಾರಾಟ ಮಾಡಿ ರೈತರ ಹಿತ ಕಾಪಾಡಿ, ರೈತರೇ ದೇಶದ ಬೆನ್ನೆಲುಬು ಅವರಿಗೆ ಸಹಕಾರ ನೀಡಿ ನಿಮ್ಮ ಸಂಘ ಅಭಿವೃದ್ಧಿಯತ್ತ ನಡೆಯ ಲಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಡಿ. ಎಂ ಮುನಿಕೃಷ್ಣಪ್ಪ ಮಾತನಾಡಿ ನಮ್ಮ ಸಂಘವು 2024, 25 ನೇ ಸಾಲಿನಲ್ಲಿ 7,40,554 ನೀವ್ವಳ ಲಾಭ ಪಡೆದಿದ್ದು, ಸಹಕಾರ ಸಂಘದ ವ್ಯಾಪ್ತಿಯ ರೈತರಿಗೆ ಅತ್ಯಧಿಕವಾದ 30 ಲಕ್ಷದಷ್ಟು ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗಿದೆ. ತಾಲೂಕಿನ ಮೂರು ಶಾಖೆಗಳಾದ ದೇವನಹಳ್ಳಿ,ವಿಜಯಪುರ, ಚಪ್ಪರದಕಲ್ಲು, ವ್ಯಾಪ್ತಿಯ ರೈತರಿಗೆ ಕೆಸಿಸಿ, ಬೆಳೆ ಸಾಲ ನೀಡಲಾಗುತ್ತಿದೆ. ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮುಂತಾದ ಉದ್ದೇಶಗಳಿಗೆ ಸಾಲವನ್ನು ನೀಡಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಿ, ಸ್ತ್ರೀ ಶಕ್ತಿ ಸಂಘಗಳಿಗೂ ಕೂಡ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ವೆಂಕಟೇಶ್, ನಬಾರ್ಡ್ ನಿಂದ ಸಾಲ ಕಡಿಮೆ ಮಾಡಿರುವುದರಿಂದ ನಾವು ಅಪೆಕ್ಸ್ ಬ್ಯಾಂಕ್ ನ ಸಹಕಾರದಿಂದ ರೈತರಿಗೆ ಸಾಲ ನೀಡಬೇಕಾಗಿದೆ. ಕೆಲವು ಕಡೆ ಜಮೀನುಗಳೆಲ್ಲ ಕೆಇಡಿಬಿ ವಶ ಆಗುತ್ತಿದ್ದು, ಸುಮಾರು ಎಕರೆಗಳೆಷ್ಟು ಜಮೀನು ಏರ್ಪೋಟಿ್ರಗೆ ಸಹ ಹೋಗಿದೆ, ಇದೆಲ್ಲದರ ಹೊರತುಪಡಿಸಿ ನಾವು ಎರಡು ಎಕರೆ ಮೂರು ಎಕರೆ, ಪ್ರದೇಶವಿರುವ ರೈತರಿಗೆ ವಿವಿಧ ಯೋಜನೆಗಳ ಅಡಿ ಸಾಲ ನೀಡುತ್ತಿದ್ದೇವೆ. ಬೆಳೆಸಾಲ ತೆಗೆದುಕೊಂಡು, ಸಕಾಲದಲ್ಲಿ ಪಾವತಿ ಮಾಡಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕ್ರಿಪ್ಲೋ ಅಧ್ಯಕ್ಷ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ ಲಕ್ಷ್ಮೀನಾರಾಯಣ್,ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ .ವೆಂಕಟೇಶ್‌, ತಾಲೂಕು ಸೊಸೈಟಿ ಅಧ್ಯಕ್ಷ ಮುನಿರಾಜು, ಸಂಘದ ಉಪಾಧ್ಯಕ್ಷ ಡಿ ಕೃಷ್ಣಪ್ಪ, ನಿರ್ದೇಶಕರಾದ, ಸಿಎಂ ಮಾರೇಗೌಡ, ನಂಜೇಗೌಡ,, ಪಿಳ್ಳೆ ಗೌಡ, ಮುರಳಿ, ರಾಜಣ್ಣ, ದೇವರಾಜು, ನಾಗರಾಜು, ಕಲ ವೆಂಕಟೇಶ್, ಮಂಜುಳಾ, ಮಂಜುನಾಥ್, ಪದ ನಿಮಿತ್ತ ನಿರ್ದೇಶಕ, ಐ ಬಸಾಪುರ ರಾಜಣ್ಣ, ನಾರಾಯಣಸ್ವಾಮಿ ಸಿಇಓ ಎನ್ ವಿ ನಾರಾಯಣಸ್ವಾಮಿ, ಮುನಿ ರಾಜು ಸಿ ಪಿ. ಸಹಾಯಕ ರಾಮಯ್ಯ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು