ಹಿಂದುಳಿದ ವರ್ಗಗಳ ಜನಕಲ್ಯಾಣಕ್ಕಾಗಿ ಶ್ರಮಿಸಿದ
ದೀಮಂತ ನಾಯಕರು ದೇವರಾಜು ಅರಸು–ಅಶ್ವಥ್ ನಾರಾಯಣ್
ದೇವನಹಳ್ಳಿ :-ರಾಜ್ಯದಲ್ಲಿ ದೇವರಾಜ ಅರಸು ಅವ ರನ್ನು ಭೂ ಸುಧಾ ರಣೆ ಮತ್ತು ಹಿಂದುಳಿದ ವರ್ಗ ಗಳ ಹರಿಕಾರ ಎಂದು ಬಯಪ ಮಾಜಿ ಅಧ್ಯಕ್ಷರು ಅಶ್ವತ್ ನಾರಾಯಣ್ ಹೇಳಿದರು,
ಪಟ್ಟಣದ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕದ ಕಚೇರಿಯಲ್ಲಿ ದಿವಂಗತ ದೇವರಾಜ ಅರಸು ಅವರ ಜಯಂತಿ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿದ್ದು ಈ ವೇಳೆ ಮಾತನಾಡಿದ ಅವರು, ಅರಸು ಬಾಲ್ಯ, ಕೃಷಿಕನಾಗಿ, ಯುವ ನಾಯಕನಾಗಿ ಮತ್ತು ಮುಖ್ಯ ಮಂತ್ರಿಯಾಗಿ ಅವರು ಮಾಡಿರುವ ಸೇವೆ, ಜನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಅವರ ರಾಜಕೀಯ ಜೀವನದ ಸಾಧನೆಯನ್ನು ಮರೆಯ ಬಾರದು.
ಹಿಂದುಳಿದ ವರ್ಗಗಳಿಗೆ ಸಂಬಂಧಿತ ಎಲ್ಲಾ ಸಮು ದಾಯಗಳನ್ನು ಒಗ್ಗೂಡಿಸಿ ದಿವಂಗತ ದೇವರಾಜು ಅರಸು ಅವರ ಜಯಂತಿಯನ್ನು ಬಹಳ ಅದ್ದೂರಿ ಸಡಗರ ಸಂಭ್ರಮದಿಂದ ಆಚರಿಸಲು ಮುಂದಾಗಿದ್ದೇವೆ ಜನಾಂಗದ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿ ದೇವರಾಜ್ ಅರಸು ಅವರ ಸಾಧನೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಜನಾಂಗಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿ ದರು.
ಕುರಿ ಮತ್ತು ಹುಣ್ಣೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಿಕೆ.ನಾರಾಯಣಸ್ವಾಮಿ ಮಾತನಾಡಿ,
ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ನಾಗ ರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಸಚಿವ ಕೆಹೆಚ್.ಮುನಿಯಪ್ಪ, 5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ ನಾರಾಯಣಸ್ವಾಮಿ, ಚಿಕ್ಕ ಬಳ್ಳಾಪುರ ಲೋಕಸಭಾ ಸದಸ್ಯ ಕೆ ಸುಧಾಕರ್ ಸೇರಿದಂತೆ ಪುರಸಭೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಜನಾಂಗದ ಕುಲಬಾಂಧ ವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಹಿಂದುಳಿದ ಸಮುದಾಯದ ಮುಖಂಡರಾದ ಗೋಪಾಲಪ್ಪ, ಆಂಜಿನಪ್ಪ, ದಾಸಪ್ಪ, ರಾಮೂರ್ತಿ, ವಿಜಯಕುಮಾರ್, ಮಂಜುನಾಥ್ ಹಾಜರಿದ್ದರು.