79ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆ ಎನ್ ರಾಜಣ್ಣ ಚಾಲನೆ
ಕೆ ಎನ್ ಆರ್ ಅಭಿಮಾನಿಗಳಿಂದ ಬೃಹತ್ ರ‍್ಯಾಲಿಯ ಮೂಲಕ ಮಧುಗಿರಿಗೆ ಆಹ್ವಾನ
ಮಧುಗಿರಿ : ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರ ಹೋರಾಟಗಾರ ಸ್ಮರಿಸುತ್ತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಂತರ
ಆ ಸಮಯದಲ್ಲಿ ಮಾಜಿ ಸೈನಿಕರು, ಹಿರಿಯ ಅಧಿಕಾರಿಗಳು, ಪ್ರಗತಿಪರ ಚಿಂತಕರಿಗೆ ಗೌರವಿತವಾಗಿ ಸನ್ಮಾನಿಸಿ ಅಭಿನಂದಿಸಿದ್ದರು.
ಈ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿಗಳಾದ ಗೊಟೂರು ಶಿವಪ್ಪನವರು, ಪುರಸಭೆ ಅಧ್ಯಕ್ಷರಾದ ಲಾಲಾಪೇಟೆ ಮಂಜುನಾಥ್ ರವರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿ.ಜೆ.ರಾಜಣ್ಣನವರು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯನವರು, ಪುರಸಭೆ ಮಾಜಿ ಅಧ್ಯಕ್ಷರಾದ ನಂಜುಂಡರಾಜುರವರು, ತಹಸೀಲ್ದಾರ್ ಶ್ರೀನಿವಾಸ್ ಅವರು, ಇ.ಓ ಲಕ್ಷ್ಮಣ್ ಅವರು, ಡಿ.ವೈ.ಎಸ್.ಪಿ ಮಂಜುನಾಥ್ ಅವರು ಸರ್ಕಾರಿ ನೌಕರರ ಸಂಘ ಅಧ್ಯಕ್ಷರಾದ ರಂಗಪ್ಪನವರು ಸೇರಿದಂತೆ ಅನೇಕ ಹಿರಿಯ ಮುಖಂಡರುಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ವರದಿ : ಹರೀಶ ಸಿ ಎ