ಕಾಲವಾದ ಕಲಾವಿದ ಗುರುಗಳಿಗೆ ಕೃತಜ್ಞತೆಯ ನುಡಿನಮನಗಳು

ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಹೃದಯಾ ಘಾತ ದಿಂದ ಸಾವನ್ನಪ್ಪಿದ ಹೆಸರಾಂತ ಕಲಾವಿದ ಸೂರ್ಯಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಕಕ್ಷ ಗುರುರಾಜ್ ಕೃಷ್ಣಪ್ಪ ಹಿರಿಯ ಕಲಾವಿದರು ಸಂಘಟನೆಯ ಮಾರ್ಗದರ್ಶಕರು ಆದ ಸೂರ್ಯಕುಮಾರ್ ರವರ ಸಾವು ನಮ್ಮ ಸಂಘಟನೆ ತುಂಬಲಾರದ ನಷ್ಟ, ಸಂಘಟನೆ ಪ್ರಾರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಹಿರಿಯರು ಮತ್ತು ಕಾಲಾವಿಧರ ಶ್ರೇಯೋಭಿಲಾಷಿಗಳು ನಮ್ಮಿಂದ ಭೌತಿಕವಾಗಿ ದೂರವಾದರೂ ಕಲಾವಿದರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೇಯೋದ್ದೇಶಗಳು ಮಾತ್ರ ಜೀವಂತ ಅವರ ದೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾರ್ ಮಾತನಾಡುತ್ತಾ ನಗರ ಮತ್ತು ತಾಲ್ಲೂಕಿನಲ್ಲಿ ದಶಕಗಳಿಂದ ನಾಮಪಲಕ ಗಳನ್ನು ಬರೆಯುತ್ತಾ,ತನ್ನ ಹೆಸರಿನ “ಎಸ್ ಕೆ ಆರ್ಟ್ಸ್,” ಎಂಬ ಅಂಗಡಿ ತೆರೆದು ವೃತ್ತಿಯನ್ನೇ ನಂಬಿ ಬಂದ ಕಾಯಕ ಯೋಗಿ ಇವರು, ಬಸವಣ್ಣ ನವರು ಜಗತ್ತಿಗೆ ಸಾರಿ ದಂತಹ “ಕಾಯವೇ ಕೈಲಾಸ’ ಎಂಬ ತತ್ವಸಿದ್ದಾಂತವನ್ನೇ ನಂಬಿ ಸಾರ್ಥಕತೆ ಕಂಡ ಕುಂಚ ಕಲಾವಿದ.ತಾನು ನಂಬಿದ ಕುಂಚ ಮತ್ತು ಬಣ್ಣ ದಿಂದಲ್ಲೇ ಬದುಕು ಕಟ್ಟಿಕೊಂಡು ತಾನೂ ಬೆಳೆಯತ್ತಾ ಹತ್ತಾರು ಮಂದಿ ಯುವ ಕಲಾವಿದರನ್ನೂ ಬೆಳೆಸುತ್ತಾ ಕಲಾಸೇವೆ ಮಾಡಿದ,ಹಲವರಿಗೆ ಮಾರ್ಗದರ್ಶಕ ರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ,ತಮ್ಮ ಜೀವನದಲ್ಲಿ ಸಾಕಷ್ಡ ಏರಿಳಿತಗಳನ್ನು ಕಂಡ ಕಲಾವಿದ ಸೂರ್ಯ ಕುಮಾರ್ ರವರು ಇತ್ತೀಚೆಗಷ್ಟೆ ಸ್ವರ್ಗಸ್ಥರಾಗಿದ್ದು ದೊಡ್ಡಬಳ್ಳಾಪುರ ದ ಜನತೆಗೆ ನಂಬಲಾಗದ ಸತ್ಯವಾದರೂ ನಂಬಲೇ ಬೇಕಿದೆ.ತನ್ನ ಜೀವಿತಾವಧಿಯಲ್ಲಿ , ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಧೃತಿಗೆಡದೆ ಸಾರ್ಥಕ ಜೀವನ ನಡೆಸಿಸಿದಂತಹ ಕಲಾವಿದರು ಎಂದರೆ ತಪ್ಪಾಗಲಾರದು.ಎಷ್ಟೇ ಕಷ್ಟ ನಷ್ಟಗಳು ಬಂದರು ತನ್ನ ಬಳಿ ಕೆಲಸ ಮಾಡುತಿದ್ದ ಕೆಲಸ ಮತ್ತು ಕಲಿಯುತಿದ್ದ ಕಲಾವಿದರನ್ನೂ ತನ್ನ ಇಬ್ಬರು ಮಕ್ಕಳಂತೆ ಅವರನ್ನೂ ಸಲುಹಿ, ಬೆಳೆಸಿದ ಸಾಹುಕಾರ ಈ ಸೂರ್ಯಕುಮಾರ್ ಕರ್ನಾಟಕ ನಾಮಫಲಕ ಕಲಾವಿದರ ಸಂಘದ ದೊಡ್ಡ ಬಳ್ಳಾಪುರ ತಾಲ್ಲೂಕಿನ ಅಧ್ಯಕ್ಷರಾಗಿ ಐದು ವರ್ಷಗಳಕಾಲ ಸೇವೆದಲ್ಲಿಸಿದ್ದರು.ತಮ್ಮ ಸೇವೆ ಯಿಂದ ಇಡೀ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದಿದ್ದರು.
ಒಟ್ಟಾರೆ ಒಬ್ಬಕಲಾವಿದರಾಗಿ ವೃತ್ತಿಯೊಂದಿಗೆ ಸಾಮಾಜಿಕ ಕಾಲಜಿಯನ್ನು ಹೊಂದಿದ್ದ ಗುರುಗಳು ನಮ್ಮಿಂದ ದೂರ ವಾದರೂ ಅವರ ಕನಸುಗಳು ನಮ್ಮೊಂದಿಗಿವೆ ಅವುಗಳನ್ನು ಖಂಡಿತವಾಗಿ ನೆರವೇರಿಸಲು ಶಕ್ತಿ ಮೀರಿ ಶ್ಮಿಸುವುದಾಗಿ ಹೇಳುತ್ತಾ
ಅವರಿಗೆ ನನ್ನ ನುಡಿನಮಗಳನ್ನು ಅರ್ಪಿಸಿತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ನಾಮ ಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಚರಾದ ಗುರುರಾಜ್ ಕೃಷ್ಣಪ್ಪ ,ಕಾರ್ಯಾಧ್ಯಕ್ಷ ರಂಗನಾಥ ಬಾಬು,ಉಪಾಧ್ಯಕ್ಷ ಚಂದ್ರಶೇಖರ್.ಡಿ. ಉಪ್ಪಾರ್,ನಿರ್ಧೇಶಕರ ಕೆ.ಜೆ.ವೆಂಕಟೇಶ್, ನಾಗಪ್ರದೀಪ್,ವಿನೋದ್ ಆಚಾರ್ಯ, ತಾಲ್ಲೂಕು ನೂತನ ಅಧ್ಯಕ್ಷ ಎಸ್.ಕೆ.ಸತೀಶ್, ಕಾರ್ಯಾಧ್ಯಕ್ಷ ವರದರಾಜ್,ಪ್ರದಾನ ಕಾರ್ಯ ದರ್ಶಿ ಉಮಾಶಂಕರ್,ಕಾರ್ಯದರ್ಶಿ ಸುಬ್ರಮಣಿ,ಖಂಜಾಂಚಿ ನಿಥಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.