ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿಯಿಂದ ಬಸವನಪುರ ರಾಜಶೇಖರ್ ಗೆ ಸನ್ಮಾನ
ಚಾಮರಾಜನಗರ: ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಬಸವನಪುರ ರಾಜಶೇಖರ್ ಅವರಿಗೆ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೆ ವೇಳೆ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಮಾತನಾಡಿ, ಒಳ ಮೀಸಲಾತಿ ವಿಚಾರವಾಗಿ ಸುಮಾರು 3 ದಶಕಗಳ ಕಾಲ ಹೋರಾಟ ನಡೆದ ಪ್ರತಿಫಲವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಪರಿಶಿಷ್ಟ ಸಮುದಾಯಗಳ ಸಚಿವರುಗಳ ಜೊತೆ ಚರ್ಚಿಸಿ ಎಲ್ಲರಿಗೂ ಅನುಕೂಲ ವಾಗುವಂತೆ ಒಳ ಮೀಸಲಾತಿಯನ್ನು ಜಾರಿ ಮಾಡಿದ್ದಾರೆ. ಈ ಒಳ ಮೀಸಲಾತಿ ವಿಚಾರವಾಗಿ ಹೋರಾಟ ಮಾಡಿದ ನಮ್ಮ ಸಂಘದ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಅವರ ಸತತ ಪರಿಶ್ರಮ ಇದೆ. ಈ ಸಂಬಂಧವಾಗಿ ಅವರಿಗೆ ನಾವು ಸನ್ಮಾನಿಸುತ್ತಿದ್ದೇವೆ ಎಂದು ತಿಳಿಸಿದರು.
ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಶಿವಕುಮಾರ್.ಎಂ ಮಾತನಾಡಿ, ಸುಮಾರು ವರ್ಷಗಳ ಕಾಲ ಮಾದಿಗರಿಗೆ ಒಳ ಮೀಸಲಾತಿ ವಿಚಾರವಾಗಿ ನಮ್ಮ ಜಿಲ್ಲೆಯಲ್ಲಿ ಮುಖ್ಯವಾಗಿ ಬಸವನಪುರ ರಾಜಶೇಖರ್ ರವರು ಧ್ವನಿಯೆತ್ತಿದ್ದಾರೆ ಅದರಂತೆ ನಮ್ಮ ಸಮುದಾಯಕ್ಕೆ ಒಳ ಮೀಸಲಾತಿ ದೊರೆತಿದೆ ಈ ವಿಚಾರವಾಗಿ ಅವರನ್ನು ಸನ್ಮಾನಿಸುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಸಿ.ಆರ್. ಮಹೇಶ್ ಮಾತನಾಡಿ, ರಾಜಶೇಖರ್ ಅವರು ಒಳ ಮೀಸಲಾತಿ ವಿಚಾರವಾಗಿ ಸತತವಾಗಿ ಹೋರಾಟ ಮಾಡಿದ್ದಾರೆ, ಕೆಲವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಇವರು ಸತತ ಹೋರಾಟ ಮಾಡಿ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ಬರುವುದಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಜಿಎಂ ಶಂಕರ್, ಮೂಗೂರು ಮೂರ್ತಿ,ವೆಲ್ಡಿಂಗ್ ಲಿಂಗರಾಜು, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಶಿವಕುಮಾರ್.ಎಂ,
ಡಾ.ಬಾಬು ಜಗಜೀವನರಾಂ ಕಲಾ ಯುವಕರ ಸಂಘದ ಅಧ್ಯಕ್ಷ ಡ್ಯಾನ್ಸ್ ಬಸವರಾಜು, ಉಪಾಧ್ಯಕ್ಷ ರಾಜೇಶ್, ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಗಿರಿಪ್ರಕಾಶ್, ಉಪಾಧ್ಯಕ್ಷ ಸ್ವಾಮಿ, ಅಂಗಡಿ ಸೋಮಣ್ಣ, ಸಿ.ಆರ್.ಮಹೇಶ್, ಸಿ.ಎಂ. ಶಂಕರ್, ಸಿದ್ದರಾಜು ನರಸೀಪುರ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ