ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಕೊರಟಗೆರೆ ಬಳಿ ಪಲ್ಟಿ

ಕೊರಟಗೆರೆ : ಮಂಗಳವಾರ ಬೆಳಿಗ್ಗೆ ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಸಮೀಪ ರಾಜ್ಯದ ಹೆದ್ದಾರಿ 3 ರಲ್ಲಿ ಗೋಮಾಂಸ ತುಂಬಿದ ಆಂಧ್ರಪ್ರದೇಶ ಮೂಲದ ಎಪಿ 39 ಯುಕೆ 3285 ಟಾಟಾ ಇಂಟ್ರಾ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಾರ್ಟಿ ಆಗಿರುತ್ತದೆ.

ವಾಹನ ಪಲ್ಟಿಯಾದ ಸದ್ದು ಕೇಳಿ ಸ್ಥಳೀಯರು ಜಮಾವಳಿ ಆಗುವಷ್ಟರಲ್ಲಿ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಪಘಾತವಾದ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಹಿಂದೂಪುರ ಮೂಲದಿಂದ ಮಧುಗಿರಿ ಕೊರಟಗೆರೆ ಮಾರ್ಗವಾಗಿ ಬೆಂಗಳೂರಿಗೆ ಗೋಮಾಂಸ ರಫ್ತಾಗುವ ಜಾಲ ಇದೀಗ ಬೆಳಕಗೆ ಬಂದಿದೆ.

ಗೋಮಾಂಸೋನ ಬಟ್ಟೆಯಲ್ಲಿ ಸುತ್ತಿ ಅದರ ಮೇಲೆ ಹಣ್ಣಿನ ಕ್ರೆಟ್ ಇಟ್ಟು ಹಣ್ಣಿನ ಸಾಗಿಸುವ ವಾಹನದ ರೀತಿ ಬಿಂಬಿಸಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬೃಹತ್ ಜಾಲವೊಂದು ಇದೀಗ ಬೆಳಕಿಗೆ ಬಂದಿದೆ.

ವಿಷಯ ತಿಳಿದ ತಕ್ಷಣ ಕೊಡಿಗೆರೆ ಆರಕ್ಷಕರು ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ವಾಹನವನ್ನು ಪರಿಶೀಲಿಸಿ ವಾಹನದಲ್ಲಿ ಗೋಮಾಂಸ ಪತ್ತೆಯಾಗಿದ್ದನ್ನು ಕಂಡು ತಕ್ಷಣವೇ ವಾಹನ ಮಾಲೀಕ ಮತ್ತು ಗೋಮಾಂಸ ಸಾಗಣೆ ಮಾಡುತ್ತಿದ್ದವರ ಸೆರೆ ಹಿಡಿಯುವಂತೆ
ಸೂಚಿಸಿರುತ್ತಾರೆ.

ಇದೀಗ ಅಪರಾಧಿಗಳನ್ನು ಸೆರೆ ಹಿಡಿಯಲು ಕೊಡುಗೆರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ತೀರ್ಥೇಶ್ ರವರು ಅಪರಾಧಿಗಳ ಜಾಡು ಹಿಡಿದು ಹಿಂದುಪುರಕ್ಕೆ ತೆರಳಿರುತ್ತಾರೆ.

ಇನ್ನು ಮುಂದುವರೆದಂತೆ ಸ್ಥಳದಲ್ಲೇ ಪಲ್ಟಿ ಆಗಿದ್ದ ವಾಹನ ಮತ್ತು ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಕೊರಟಗೆರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ ರವರ ನೇತೃತ್ವದಲ್ಲಿ ಕಾರ್ಯಾಚರಣೆ.

ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವರದಿ : ಭರತ್ ಕೆ