*ಶ್ರೀ ಆದಿಜಾಬವ ಪರಿಶಿಷ್ಟ ಜಾತಿ ಸಹಕಾರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*
ತಿಪಟೂರು:ನಗರದ ಐದನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಆದಿ ಜಾಂಬವ ಪರಿಶಿಷ್ಟ ಜಾತಿ ಸಹಕಾರ ಸಂಘ ತಿಪಟೂರು* ವತಿಯಿಂದ ಆದಿ ಜಾಂಬವ (ಮಾದಿಗ) ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಿಪಟೂರು ಮತ್ತು ತುರುವೇಕೆರೆ ತಾಲೂಕಿನಲ್ಲಿ ವಾಸವಾಗಿರುವ ಆದಿ ಜಾಂಬವ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದು 2024 -2025 ಸಾಲಿನ S. S. L. C. ಮತ್ತು P. U. C ಯಲ್ಲಿ ಶೇಕಡ 80% ಕಿಂತ ಹೆಚ್ಚಿನ ಅಂಕ ಗಳಿಸಿರುವ ಅಭ್ಯರ್ಥಿಗಳು 10-09-2025 ಒಳಗೆ ಸಂಘದ ಕಚೇರಿ ಶ್ರೀ ಆದಿ ಜಾಂಬವ ಪರಿಶಿಷ್ಟ ಜಾತಿ ಸಹಕಾರ ಸಂಘದ ಕಚೇರಿ “ಶ್ರೀ ಕಾಲಭೈರವೇಶ್ವರ ನಿಲಯ ಎರಡನೇ ಮಹಡಿ ಐದನೇ ಮುಖ್ಯರಸ್ತೆ ಅಮರವತಿ ರೆಸಿಡೆನ್ಸಿ ಹಿಂಭಾಗ ವಿನಾಯಕ ನಗರ ತಿಪಟೂರು”, ಇಲ್ಲಿಗೆ ಅಂಕಪಟ್ಟಿಗಳ ಜೆರಾಕ್ಸ್ ಜಾತಿ ಪ್ರಮಾಣ ಪತ್ರ ಹಾಗೂ ಎರಡು ಇತ್ತೀಚಿನ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಿ ಎಂದು ಸಂಘದ ಅಧ್ಯಕ್ಷರಾದ ಎಂ. ಎನ್ ಮಹಾದೇವ್ ರವರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ
ಈ ನಂಬರಿಗೆ ಸಂಪರ್ಕಿಸಿ .
9972333942
8050963585
ವರದಿ: ಮಂಜು ಗುರುಗದಹಳ್ಳಿ