ಭಾವೈಕ್ಯತೆ ಮತ್ತು ಸಾಮರಸ್ಯದ ಪ್ರತೀಕ ಗಣೇಶ ಉತ್ಸವ

ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದಿಂದ ಗಣೇಶೋತ್ಸವ

ಹೊಸಕೋಟೆ:ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯದ ವಾತಾವರಣವನ್ನು ಉಂಟು ಮಾಡಲು ಗಣೇಶೋತ್ಸವ ಹಿಂದಿನಿಂದಲೂ ಪೂರಕವಾಗಿದೆ ಎಂದು ರಕ್ಷ ರಾಜ ಗೆಳೆಯರ ಬಳಗದ ಮುಖ್ಯಸ್ಥ ಗಿರೀಶ್ ತಿಳಿಸಿದರು.

ನಗರದ ಗಣಗಲು ರಸ್ತೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದ ವತಿಯಿಂದ ನಡೆದ ದ್ವಿತೀಯ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಮನೆಯಲ್ಲಿ ಪ್ರತಿಷ್ಟಾಪನೆ ಮಾಡಿ ಪೂಜೆ ಮಾಡಲಾಗುತ್ತಿದ್ದ ಗಣಪತಿ ಹಬ್ಬವನ್ನು ಗಲ್ಲಿಗಳಲ್ಲಿ ಪ್ರತಿಷ್ಟಾಪನೆ ಮಾಡಿ ಸರ್ವ ದರ್ಮದವರು ಆಚರಣೆ ಮಾಡುವಂತೆ ಮಾಡಿದ ಕೀರ್ತಿ ಬಾಲಗಂಗಾಧರ್ ನಾಥ್ ತಿಲಕರಿಗೆ ಸಲ್ಲುತ್ತದೆ. ಇದರಿಂದ ಗ್ರಾಮಗಳಲ್ಲಿ ಸಾಮರಸ್ಯದ ವಾತಾವರಣ ಉಂಟಾಗುವುದಲ್ಲದೆ ಯುವ ಸಮುದಾಯದಲ್ಲಿ ಭಾವೈಕ್ಯತೆ ಬೆಳೆಯುತ್ತದೆ. ಗಣೇಶೋತ್ಸವದ ಮೂಲಕ ವಾರ್ಡಿನ ನಾಗರೀಕರು ಒಂದೆಡೆ ಸೇರಲು ಸಾಧ್ಯವಾಗಿದೆ ಎಂದರು.

ಶಿಕ್ಷಕಿ ಪುಷ್ಪಾ ಮಾತನಾಡಿ ಬಡಾವಣೆಯ ಯುವಕರ ಒತ್ತಾಯದ ಮೇರೆಗೆ ದ್ವಿತೀಯ ವರ್ಷವಾಗಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಗುತ್ತಿದೆ. ಗಣಪತಿ ಮೆರವಣಿಗೆ ಜೊತೆಗೆ ವಾರ್ಡಿನ ಮಹಿಳೆಯರು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನ ವಿತರಿಸಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಿದ್ಧೇವೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವವನ್ನು ಮುಂದುವರೆಸಿಕೊಂಡು ಹೋಗುವ ದೃಡ ಸಂಕಲ್ಪವನ್ನು ಬಡಾವಣೆ ನಿವಾಸಿಗಳು ಹೊಂದಿದ್ದೇವೆ ಎಂದರು.
ಕೆಂಪು ವಸ್ತ್ರವನ್ನು ತೊಟ್ಟ ವಾರ್ಡಿನ ನಾಗರೀಕರು, ಮಕ್ಕಳು ತಮಟೆ ವಾದ್ಯಕ್ಕೆ ಸಖತ್ ಸ್ಟೆಪ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದರು.
ರಕ್ಷರಾಜ ಗೆಳೆಯರ ಬಳಗದ ಮುಖಂಡರಾದ ನಾರಾಯಣಸ್ವಾಮಿ, ಮನುಕುಮಾರ್, ರವಿಕುಮಾರ್, ಗಿರೀಶ್, ಕೃಷ್ಣಮೂರ್ತಿ, ಶಕ್ತಿಪ್ರಸಾದ್, ವಿಷ್ಣು, ಮಂಜುನಾಥ್, ಶಶಿ, ಪ್ರವೀಣ್, ಬಸವರಾಜ್, ಮುರಳಿ ಸೇರಿದಂತೆ ವಾರ್ಡಿನ ನಾಗರೀಕರು ಹಾಜರಿದ್ದರು.