ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಉತ್ತಮ ಯುವಕ ಸಂಘ ಪ್ರಶಸ್ತಿ ಸ್ವೀಕರಿಸಿದ ಡಾ.ವಿ.ಪ್ರಶಾಂತ
ವಿಜಯಪುರ: ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಉತ್ತಮ ಯುವಕ ಸಂಘ ಪ್ರಶಸ್ತಿಯನ್ನು ಪಟ್ಟಣದ ಸ್ಪಂದನ ಯುವಜನ ಸೇವಾ ಸಂಘ ಕ್ಕೆ ನೀಡಲಾಗಿದ್ದು ಈ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಡಾ.ವಿ ಪ್ರಶಾಂತ ಇವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ರವರಿಂದ ಸ್ವೀಕರಿಸಿದರೆಂದು ಸಂಘದ ಕಾರ್ಯದರ್ಶಿ ಎನ್. ಪ್ರಸನ್ನ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಇವರು ಪಟ್ಟಣದ ಸ್ಪಂದನ ಯುವಜನ ಸೇವಾ ಸಂಘ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೆ.ಆರ್ ಪುರಂ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವನದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಭಾರತ ಸರ್ಕಾರದ ಕೇಂದ್ರದ ಅತಿ ಸಣ್ಣ, ಸಣ್ಣ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಖಾತೆಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಇವರ ಮಾರ್ಗದರ್ಶನದಲ್ಲಿ ಆಯೋಜಿಸಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಕಸಿತ ಭಾರತಕ್ಕಾಗಿ ಸದೃಢ ಯುವ ಜನತೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಸತ್ ಕ್ರೀಡಾ ಮಹೋತ್ಸವದ ಅಂಗ ವಾಗಿ ಯುವಕ ಮತ್ತು ಯುವತಿ ಯರಿಗೆ ಶಟಲ್ ಬ್ಯಾಟ್ಮಿಟನ್, ಹಗ್ಗ ಜಗ್ಗಾಟ ಹಾಗೂ ಲೆಮೇನ್ ಅಂಡ್ ಸ್ಪೂನ್ ಮೊದಲಾದ ಕ್ರೀಡಾ ಸ್ಪರ್ಧೆಗಳ ಉತ್ತಮ ಆಯೋಜನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸದರಿ ಈ ಪ್ರಶಸ್ತಿಯನ್ನು ಬೆಂಗಳೂರಿನ ಜಿ.ಕೆ.ವಿ.ಕೆ ಕ್ಯಾಂಪಸ್ ನಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆದ ಸಂಸತ್ ಕ್ರೀಡಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ನೀಡಲಾಯಿತೆಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ,ಶಾಸಕರಾದ ಬಿ.ಎ ಬಸವರಾಜ್, ಕುಲಪತಿ ಡಾ.ಎಸ್.ವಿ ಸುರೇಶ್,ಚಿತ್ರನಟ ಯುವರಾಜ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಮೊದಲಾದವರು ಹಾಜರಿದ್ದರಿಂದ ತಿಳಿಸಿದರು.





