ನಾಡಿನ ಮಾತೃಭಾಷೆ ಕನ್ನಡ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ :- ಚಂದ್ರಶೇಖರ್
ದೇವನಹಳ್ಳಿ :- ನಾವೆಲ್ಲರೂ ಇಂದು ನಮ್ಮ ಕನ್ನಡ ನಾಡಿನ ಹೆಮ್ಮೆ ಯನ್ನು ಸಾರಲು ಒಗ್ಗೂಡಿದ್ದೇವೆ. ಕರುನಾಡು, ಕನ್ನ ಡಾಂಬೆ, ಭುವನೇಶ್ವರಿ ಹೀಗೆ ಹತ್ತು ಹಲವು ಹೆಸರು ಗಳಿಂದ ಕರೆಯಲ್ಪಡುವ ನಮ್ಮ ರಾಜ್ಯ, ಹಸಿರು ಸಿರಿಯಿಂದ ಕೂಡಿದ ಬೆಟ್ಟ, ಗುಡ್ಡಗಳು, ನದಿಗಳು, ಸಾಧು-ಸಂತರ ನಾಡು, ಕವಿಗಳ ನಾಡು. ಇಂತಹ ಸುಂದರ, ಶ್ರೀಮಂತ ನಾಡಿನಲ್ಲಿ ಜನಿಸಿರು ವುದು ನಮ್ಮೆಲ್ಲರ ಪುಣ್ಯವೆಂದು ಅಣ್ಣೇಶ್ವರ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ದೇವನಹಳ್ಳಿ ತಾಲೂಕು ಅಣ್ಣೇಶ್ವರದಲ್ಲಿ ಕನ್ನಡಾಂಬೆ ಯುವ ಕರ ಬಳಗದಿಂದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಹಳೇ ಪಂಚಾಯಿತಿ ಮುಂಭಾಗದಲ್ಲಿ ಉಮಾ ಮುನಿ ರಾಜಪ್ಪ ಧ್ವಜಾರೋಹಣ ನೆರವೇರಿ ಸುವ ಮೂಲಕ ಚಾಲನೆ ನೀಡಿದ ನಂತರ ಮಾತನಾಡಿ, ಕನ್ನಡ ರಾಜ್ಯೋತ್ಸ ವನ್ನು ರಾಜ್ಯದ ಪ್ರತಿ ಗ್ರಾಮದ ಶಾಲೆ, ಕಾಲೇಜು, ಕಚೇರಿ ಸೇರಿದಂತೆ ವಿವಿಧ ಕಂಪ ನಿಗಳಲ್ಲಿ ಆಚರಣೆ ಮಾಡುತ್ತಾರೆಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಮುನಿರಾಜಪ್ಪ ಸದಸ್ಯರಾದ ವೆಂಕಟೇಶ್, ಗೋಪಾಲ್, ಡೇರಿ ಅಧ್ಯಕ್ಷ ವೆಂಕ ಟೇಶ್, ಅಭಿವೃದ್ಧಿ ಅಧಿಕಾರಿ ಗಂಗರಾಜು ಕಾರ್ಯದರ್ಶಿ ಕೃಷ್ಣ ಮೂರ್ತಿ, ಜೆಡಿಎಸ್ ಮುಖಂಡರಾದ ಜಗದೀಶ್, ಬಿಎಸ್ಪಿ ಮುಖಂಡ ವೇಣು ಗುತ್ತಿಗೆದಾರ ಆನಂದ್, ನವೀನ್, ಪಂಚಾಯಿತಿ ಸಿಬ್ಬಂದಿವರ್ಗ ಹಾಗೂ ಪಂಚಾಯಿತಿ ಸುತ್ತ ಮುತ್ತಲಿನ ಗ್ರಾಮಸ್ಥರು ಕನ್ನಡ ಅಭಿಮಾನಿಗಳು ಹಾಜರಿದ್ದರು.





