--ಜಾಹೀರಾತು--

ವಿದ್ಯಾರ್ಥಿಗಳಿಗಾಗಿ ಪೊಲೀಸ್ ಠಾಣೆ ಯಲ್ಲಿ ತೆರೆದ ಮನೆ ಕಾರ್ಯಕ್ರಮ

On: November 28, 2025 6:44 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ವಿದ್ಯಾರ್ಥಿಗಳಿಗಾಗಿ ಪೊಲೀಸ್ ಠಾಣೆ ಯಲ್ಲಿ ತೆರೆದ ಮನೆ ಕಾರ್ಯಕ್ರಮ

ದೊಡ್ಡಬಳ್ಳಾಪುರ:ಗ್ರಾಮಾಂತರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಹಾಗು ಯುವ ಸಂಚಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ಚೈಲ್ಡ್ ರೈಟ್ಸ್ ಟ್ರಸ್ಟ್‌ ಹಾಗೂ ಸರ್ಕಾರಿ ಪ್ರೌಢಶಾಲೆ ಅರಳುಮಲ್ಲಿಗೆ ಬಾಗಿಲು ಸಹಯೋಗದಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಠಾಣೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಕಾರ್ಯಚಟುವಟಿಕೆಗಳು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಪಡೆದರು.

ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ನಡೆಯುತ್ತಿರುವ ಎಲ್ಲಾ ಮಕ್ಕಳಿಗೂ, ಎಲ್ಲಾ ಹಕ್ಕುಗಳು (ಹಕ್ಕಿನೊಂದಿಗೆ ಜವಾಬ್ದಾರಿ) ಅಭಿಯಾನದಡಿ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳಿಗಾಗಿ ಇರುವ ಕಾರ್ಯ ಕ್ರಮಗಳು ಮತ್ತು ಯೋಜನೆ ಗಳು ತಲುಪುವಂತೆ ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಎಂದು ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಚಿದಾನಂದಮೂರ್ತಿ ತಿಳಿಸಿದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ, ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಡಾ.ನವೀನ್ ಕುಮಾರ್ ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಬಾಲ್ಯವಿವಾಹ, ಮಕ್ಕಳ ಆಪ ಹರಣ, ಪೋಕೋ, ಮಕ್ಕಳ ನ್ಯಾಯ, ಮಕ್ಕಳ ಸಹಾಯವಾಣಿ ಸಂಖ್ಯೆ, ಮಕ್ಕಳ ಸುರಕ್ಷತಾ ಕ್ರಮಗಳು ಮುಂತಾದ ಕಾನೂನು ಸಂಬಂಧಿತ ವಿಷಯಗಳನ್ನು ಸರಳ ಭಾಷೆಯಲ್ಲಿ ಉದಾಹರಣೆಗಳ ಮುಖಾಂತರ ಮಕ್ಕಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ರೇವಣ್ಣ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಮಹಿಳಾ ಪೊಲೀಸ್ ಠಾಣೆಯ ಎಲ್ಲಾ ಆರಕ್ಷಕರು, ಸಿಬ್ಬಂದಿ ವರ್ಗದವರು, ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯಿನಿ ಸರೋಜಾ ನಾಯಕ್, ಶಿಕ್ಷಕ ಎಚ್. ಎನ್.ಪ್ರಕಾಶ್, ಸ್ವಾಮಿ ಯುವ ಸಂಚಲನದ ಸಂಚಾಲಕ ನವೀನ್ ಹಾಗೂ ಸ್ವಯಂ ಸೇವಕರಾದ ಕಿರಣ್, ರತ್ನ, ಕೀರ್ತಿ, ಲಾವಣ್ಯ ಹಾಜರಿದ್ದರು.