--ಜಾಹೀರಾತು--

ನಾಟ್ಯ ಭೈರವಿ ಕಲಾಕುಟೀರದ ಪ್ರತಿಭೆಗಳಿಂದ ‘ನೃತ್ಯಹಬ್ಬ’

On: November 28, 2025 8:17 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ನಾಟ್ಯ ಭೈರವಿ ಕಲಾಕುಟೀರದ ಪ್ರತಿಭೆಗಳಿಂದ ‘ನೃತ್ಯಹಬ್ಬ’

ಬೆಂಗಳೂರು:ಪ್ರತಿಭಾವಂತ ನಾಟ್ಯಗುರು-ನೃತ್ಯಕಲಾವಿದೆ ಮಂಜುಭೈರವಿ ಪ್ರದೀಪ್ ಕಳೆದೊಂದು ದಶಕದಿಂದ ತಮ್ಮ ‘ನಾಟ್ಯ ಭೈರವಿ ಕಲಾಕುಟೀರ’ ನೃತ್ಯಸಂಸ್ಥೆಯಲ್ಲಿ ನೂರಾರು ನೃತ್ಯಾಕಾಂಕ್ಷಿಗಳಿಗೆ ಆಸಕ್ತಿ- ಬದ್ಧತೆಗಳಿಂದ ನಾಟ್ಯ ಶಿಕ್ಷಣ ನೀಡುತ್ತಿದ್ದಾರೆ. ಇದುವರೆಗೂ ಅನೇಕ ನೃತ್ಯಪ್ರತಿಭೆಗಳ ವಿಕಸನಕ್ಕೆ ಕಂಕಣಬದ್ಧರಾಗಿ ಪರಿಶ್ರಮಿಸುತ್ತಿರುವ ಗುರು ಮಂಜುಭೈರವಿ, ಈಗಾಗಲೇ ತಮ್ಮ ಶಿಷ್ಯರ ಅನೇಕ ರಂಗಪ್ರವೇಶಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದು, ನಾಡಿನಾದ್ಯಂತ ಎಲ್ಲ ದೇವಾಲಯಗಳಲ್ಲಿ, ದೇಶದಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ ಭಾಗವಹಿಸಲು ಶಿಷ್ಯರಿಗೆ ಅನುವು ಮಾಡಿಕೊಟ್ಟಿರುವ ಸಾರ್ಥಕ್ಯ ಭಾವ ಅವರಿಗಿದೆ. ಇದಲ್ಲದೆ ತಮ್ಮ ನೃತ್ಯಶಾಲೆಯ ಕಾರ್ಯಕ್ರಮಗಳಲ್ಲಿ ಮತ್ತು ಅನೇಕ ಹೊಸ ಪ್ರಯೋಗಾತ್ಮಕ ನೃತ್ಯರೂಪಕಗಳಲ್ಲಿ ತಮ್ಮ ಶಿಷ್ಯರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮತ್ತು ವೇದಿಕೆಗಳನ್ನು ಒದಗಿಸಿದ್ದು ನೃತ್ಯಾಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಪ್ರಸ್ತುತ ‘ನಾಟ್ಯ ಭೈರವಿ ಕಲಾ ಕುಟೀರ’ ಡಿಸೆಂಬರ್ 1 ಸೋಮವಾರ ಸಂಜೆ 5 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ ನೃತ್ಯಾರ್ಚನೆ- ನೃತ್ಯಹಬ್ಬ-2025’ – ವೈವಿಧ್ಯಪೂರ್ಣ ಸಂಗೀತ- ನೃತ್ಯಾವಳಿಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಲೇಖಕಿ- ನೃತ್ಯ ವಿಮರ್ಶಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ, ನೃತ್ಯಗುರು ಪದ್ಮಜಾ ಜಯರಾಂ ಮತ್ತು ಕಾಮಾಕ್ಷಿ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.