ಬೆಟ್ಟಿಂಗ್ ಆಡಿದ್ದ ಸಚಿವರು ಮತ್ತು ಡಿ.ಸಿ ವಿರುದ್ದ ಎಫ್.ಐ.ಆರ್ ದಾಖಲಿಸದ ಪೋಲೀಸ್ ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ಖಾಸಗಿ ದಾವೆ
ತುಮಕೂರು : ಅಕ್ಟೊಬರ್ ತಿಂಗಳಲ್ಲಿ ತುಮಕೂರು ನಗರದ ಸ್ಟೇಡಿಯಂನಲ್ಲಿ ನಡೆದಿದ್ದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ಸಮಯದಲ್ಲಿ ರಾಜ್ಯದ ಗೃಹ ಸಚಿವರಾದ ಜಿ ಪರಮೇಶ್ವರ್ ರವರು ತುಮಕೂರು ಡಿಸಿ ಜೊತೆ 500/ ರೂಪಾಯಿಗಳು ಬೆಟ್ಟಿಂಗ್ ಕಟ್ಟಿ ಅಪರಾಧ ಎಸಗಿದ್ದರು ಜೊತೆಗೆ ಮಾಧ್ಯಮಗಳ ಮುಂದೆ ತಾನು ಡಿಸಿ ಯವರ ಜೊತೆ 500/ ರೂಪಾಯಿಗಳು ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಈ ಅಪರಾಧ ಎಸಗಿದ್ದ ಜಿ. ಪರಮೇಶ್ವರ್ ಮತ್ತು ಡಿಸಿ ಶುಭಕಲ್ಯಾಣ್ ರವರ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮಧುಗಿರಿ ಸರ್ಕಲ್ ಇನ್ಸ್ಪೆಕ್ಟರ್, ಡಿ ಎಸ್ ಪಿ ಹಾಗು ತುಮಕೂರು ಇವರುಗಳಿಗೆ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಎಂಬುವರು ಲಿಖಿತವಾಗಿ ದೂರು ನೀಡಿದ್ದರು.
ಈ ದೂರಿಗೆ ಕೊಡಿಗೇನಹಳ್ಳಿ ಸಬ್ ಇನ್ಸ್ಪೆಕ್ಟರ್ ರವರು ದೂರುದಾರ ಹಂದ್ರಾಳ್ ನಾಗಭೂಷಣ್ ಗೆ ನೀವು ನೀಡಿರುವ ದೂರು ನಿರಾಧಾರವಾಗಿದ್ದು,ಯಾವುದೇ ಸಾಕ್ಷಿಗಳು ಇಲ್ಲ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದರು ಈ ಬಗ್ಗೆ ಪುನಃ ದೂರುದಾರ ಎಫ್ ಐ ಆರ್ ದಾಖಲಿಸಲು ಸೂಕ್ತ ನಿರ್ದೇಶನಕ್ಕಾಗಿ ಮಧುಗಿರಿ ಸರ್ಕಲ್ ಇನ್ಸ್ಪೆಕ್ಟರ್, ಡಿ ಎಸ್ ಪಿ ಮತ್ತು ತುಮಕೂರು ಎಸ್. ಪಿ ರವರಿಗೂ ದೂರು ನೀಡಿದ್ದರು ಆದರೂ 500/ ಬೆಟ್ಟಿಂಗ್ ಆಡಿ ಸೋತು ಹಣ ಕಳೆದುಕೊಂಡಿದ್ದ ಸಚಿವರ ಹಾಗು ತುಮಕೂರು ಡಿಸಿ ವಿರುದ್ಧ ಎಫ್ ಐ ಆರ್ ದಾಖಲಿಸಲು ಜಿಲ್ಲೆಯ ಪೊಲೀಸ್ ಆಡಳಿತ ವಿಫಲವಾಗಿರುವ ಕಾರಣ ದಿನಾಂಕ:26-11-2025 ರಂದು ದೂರುದಾರ ಎಫ್ ಐ ಆರ್ ದಾಖಲಿಸದ ಕೊಡಿಗೇನಹಳ್ಳಿ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಮಧುಗಿರಿ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತರಾಯ,ಡಿ ಎಸ್ ಪಿ ಮಂಜುನಾಥ್ ಮತ್ತು ತುಮಕೂರು ಎಸ್ ಪಿ ಕೆ. ವಿ ಅಶೋಕ್ ರವರುಗಳ ವಿರುದ್ದ ಮಧುಗಿರಿಯ ಅಧಿಕ ಸಿವಿಲ್ ಜಡ್ಜ್ ಹಾಗು ಜೆ.ಎಂ.ಎಫ್.ಸಿ (ಕಿರಿಯ ಶ್ರೇಣಿ) ನ್ಯಾಯಾಲಯದಲ್ಲಿ ಪಾರ್ಟಿ ಇನ್ ಪರ್ಸನ್ ಖಾಸಗಿ ದಾವೆ ದಾಖಲಿಸಿದ್ದು ಘನ ನ್ಯಾಯಾಲಯವು PCR/132/2025 ರಂತೆ ದಾಖಲು ಮಾಡಿಕೊಂಡಿದೆ.
ಸಾಮಾನ್ಯ ಜನರು ಬೆಟ್ಟಿಂಗ್ ಆಡಿದರೆ ತಕ್ಷಣ ಬಂದಿಸುವ ಪೊಲೀಸರು ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಮತ್ತು ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ ವಿರುದ್ದ ದೂರು ದಾಖಲಿಸದಿರುವುದು ಪೊಲೀಸರ ವೈಫಲ್ಯ.
ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸಲು ನ್ಯಾಯಾಲಯದಲ್ಲಿ ಈ ದಾವೆ ಹಾಕಿದ್ದೇನೆ. ನನಗೆ ನ್ಯಾಯಾಂಗದಲ್ಲಿ ಅಪಾರ ನಂಬಿಕೆ ಇದ್ದು ಸಾಮಾಜಿಕ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ.
ಹಂದ್ರಾಳ್ ನಾಗಭೂಷಣ್
ಸಾಮಾಜಿಕ ಕಾರ್ಯಕರ್ತ





