--ಜಾಹೀರಾತು--

ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ

On: November 29, 2025 1:28 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ

ಕೃಷ್ಣರಾಜಪೇಟೆ:ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ, ಬಿಎಲ್ಎ-2 ಕುರಿತು ವಿಶೇಷ ಪರಿಷ್ಕರಣೆ ಅಭಿಯಾನ ಹಾಗೂ ಕಾರ್ಯಗಾರವು ನಡೆಯಿತು.

ಬಿಜೆಪಿ ಕರ್ನಾಟಕ ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾದ ಶ್ರೀಮತಿ. ಅಶ್ವಿನಿ ಶಂಕರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮತಪಟ್ಟಿ ಪರೀಕ್ಷಕರಣೆ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪ್ರತಿಯೊಂದು ಭೂತ್ ಹಂತದಲ್ಲಿಯೂ ಕಡ್ಡಾಯವಾಗಿ ಮನೆಗಳಿಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಿ ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಂಡಿರು ವವರು ಹಾಗೂ ಮೃತ ವ್ಯಕ್ತಿಗಳ ಹೆಸರುಗಳು ಮತಪಟ್ಟಿಯಲ್ಲಿ ಕಂಡು ಬಂದರೆ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ತಹಶೀಲ್ದಾರರಿಗೆ ದೂರು ಸಲ್ಲಿಸಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಲು ಸಹಕರಿಸಬೇಕು ಎಂದು ಓಬಿಸಿ ಮೋರ್ಚದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ.ಅಶ್ವಿನಿ ಶಂಕರ್ ಮನವಿ ಮಾಡಿದರು. ಭಾರತ ದೇಶದ ಬಿಹಾರ ರಾಜ್ಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದ್ದರಿಂದ ಅಕ್ರಮವಾಗಿ ರಾಜ್ಯಕ್ಕೆ ನುಸುಳಿರುವ ನುಸುಳು ಕೋರರು ಬಾಂಗ್ಲಾ ವಲಸಿಗರು ಸೇರಿದಂತೆ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವ ಲಕ್ಷಾಂತರ ಜನರು ಸಿಕ್ಕಿಬಿದ್ದು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವಂತಾಯಿತು. ಆದ್ದರಿಂದ ಬಿಹಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ಪರೀಕ್ಷರಣೆ ಕಾರ್ಯಕ್ಕಾಗಿ ಬಿಎಲ್ಎ-1 ಮತ್ತು ಬಿ.ಎಲ್.ಎ-2 ಮತದಾರರ ಪಟ್ಟಿಗಳ ಪರಿಷ್ಕರಣೆ ಅಭಿಯಾನ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿದೆ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಮತಪಟ್ಟಿಗಳ ಪರಿಷ್ಕರಣೆ ಅಭಿಯಾನ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸಿ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿ ಸಿಕೊಂಡಿರುವ ಜನರ ಹೆಸರನ್ನು ಕೈ ಬಿಡಿಸಲು ಮುಂದಾಗಬೇಕು ಮುಂಬರುವ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಜ್ಯದ ಮಾಜಿ ಸಚಿವರಾದ ಕೆ.ಸಿ. ನಾರಾಯಣಗೌಡ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಸಚಿವರಾಗಿ ಆಡಳಿತ ನಡೆಸುವ ಅವಕಾಶ ಇರುವುದರಿಂದ ನಾರಾಯಣಗೌಡರ ಗೆಲುವಿಗಾಗಿ ಈಗಿನಿಂದಲೇ ಸಿದ್ದರಾಗಬೇಕು ಕಾಂಗ್ರೆಸ್ ಪಕ್ಷವು ನಡೆಸಿರುವ ಮತಚೋರಿ ಅಭಿಯಾನವು ವಾಸ್ತವತೆಯಿಂದ ದೂರವಿದ್ದು, ಸುಳ್ಳಿನ ಕಂತೆಯಾಗಿರು ವುದರಿಂದ ನಾವೆಲ್ಲರೂ ನ್ಯಾಯ ನೀತಿ ಧರ್ಮ ಹಾಗೂ ಸತ್ಯದ ಪರವಾಗಿ ಕೆಲಸ ಮಾಡಲು ಮುಂದಾಗಬೇಕಿದೆ ಎಂದು ಮನವಿ ಮಾಡಿದರು._

_ಮತದಾರರು ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಗಾರದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಆನಂದ್, ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ನಿಕಟಪೂರ್ವ ಅಧ್ಯಕ್ಷರಾದ ಎ ಜೆ ಪರಮೇಶ್. ಪುರಸಭೆ ಸದಸ್ಯ ಬಸ್ ಸಂತೋಷ ಕುಮಾರ್ ಬಿಜೆಪಿ ಎಸ್.ಟಿ.ಮೋರ್ಚ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ನಾಯಕ, ರಾಜ್ಯದ ಮಾಜಿ ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ, ಯೋಗೇಶ್ ಗೌಡ ರೈತ ಮೋರ್ಚಾ ಅಧ್ಯಕ್ಷರು.ರಾಜು ಯುವ ಮೋರ್ಚಾ ಅಧ್ಯಕ್ಷರು.ST ರಾಜು.ಎಸ್ ಟಿ ಮೋರ್ಚಾ ಅಧ್ಯಕ್ಷರು. ಮಂಜು ಶೆಟ್ಟಿ ಓಬಿಸಿ ಮೋರ್ಚಾ ಅಧ್ಯಕ್ಷರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೋಕನಹಳ್ಳಿ ಪ್ರಕಾಶ್, ತಾ ಉಪಾಧ್ಯಕ್ಷರಾದ ನವೀನ್. ತಾ ಉಪಾಧ್ಯಕ್ಷರಾದ ಲೋಕೇಶ್. ಮುಖಂಡರಾದ ದಬ್ಬೇಘಟ್ಟ ಸೀಳನರೆ ಭರತ್.ಅಗ್ರಹಾರ ಬಾಚಹಳ್ಳಿ ಜಗದೀಶ್.ಹಿರಿಯ ಉಪಾಧ್ಯಕ್ಷ ಭಾರತಿಪುರ ಪುಟ್ಟಣ್ಣ, ಮಾಜಿ ಗ್ರಾ. ಪಾ ಸದಸ್ಯರ ನಾರ್ಗೊನಹಳ್ಳಿ ಚನ್ನಕೇಶವ(ಪ್ರಭ) ದಡದಹಳ್ಳಿ ರೇವಣ್ಣ.ಯುವ ಮುಖಂಡರಾದ ಅನಿಲ್, ಸುನಿಲ್, ಹೊಸೂರು ಸ್ವಾಮಿಗೌಡ, ಹೊಸಹೊಳಲು ಜಯಮ್ಮ, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವರದಿ: ಸಾಯಿಕುಮಾರ್. ಎನ್. ಕೆ