ಬೂದಂಬಳ್ಳಿ ಗ್ರಾಮಸ್ಥರಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ
ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ಶಿವಮಲ್ಲು ಹಾಗೂ ಗೂಳಿಪುರ ಗ್ರಾಮದ ಪ್ರೌಢಶಾಲೆಯ ಸಹ ಶಿಕ್ಷಕರರಾದ ನಾಗೇಶ್ ರವರಿಗೆ ಚಾಮರಾಜನಗರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರಿವುದರಿಂದ ಬೂದಂಬಳ್ಳಿ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಅಭಿನಂದನೆ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಶಿವಮಲ್ಲು ಹಾಗೂ ನಾಗೇಶ್ ರವರಿಗೆ ಸನ್ಮಾನಿಸಲಾಯಿತು ನಂತರ ಮಾತನಾಡಿದ ಕೆ.ಡಿ.ಪಿ ಸದಸ್ಯ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬೂದಂಬಳ್ಳಿ ಶಂಕರ್ ಮಾತನಾಡಿ ನಮ್ಮ ಶಾಲೆಯಲ್ಲಿ ಶಿಕ್ಷಕರ ಶ್ರಮದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ ನಮ್ಮ ಗ್ರಾಮದ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಿಗಿಂತಲೂ ನಮ್ಮ ಗ್ರಾಮದ ಶಾಲೆಯ ಮಕ್ಕಳು ತುಂಬಾ ಬುದ್ಧಿವಂತರಾಗಿದ್ದಾರೆ ಇದಕ್ಕೆಲ್ಲ ಕಾರಣ ನಮ್ಮ ಶಾಲೆಯ ಶಿಕ್ಷಕರಾದ ಎಮ್. ರುದ್ರೇಗೌಡರು ಹಾಗೂ ಶಿವಮಲ್ಲು ರವರು ಆದ್ದರಿಂದ ಶಿಕ್ಷಕರನ್ನು ನಿವೃತ್ತಿ ಆಗುವವರೆಗೂ ನಮ್ಮ ಗ್ರಾಮದ ಶಾಲೆಯಲ್ಲಿ ಇರಬೇಕು ಎಂಬುದು ನಮ್ಮ ಆಶಯ.
ಇತ್ತೀಚಿಗೆ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸಾರ್ವಜನಿಕರು ಸರ್ಕಾರಿ ಶಾಲೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಿಲ್ಲ ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದಕ್ಕೆ ಕಾರಣ ಮುಖ್ಯ ಉಪಾಧ್ಯಯರಾದ ಎಮ್. ರುದ್ರೇಗೌಡ ಹಾಗೂ ಸಹಶಿಕ್ಷಕ ಶಿವಮಲ್ಲು ರವರು ಇವರಿಬ್ಬರು ಅದ್ಬುತ ಶಿಕ್ಷಕರು. ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ಒಳ್ಳೊಳ್ಳೆ ಉದ್ಯೋಗದಲ್ಲಿದ್ದಾರೆ ಎಂದು ತಿಳಿಸಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವೀರಭದ್ರಸ್ವಾಮಿ ರವರು ಮಾತನಾಡಿ ತಮ್ಮ ಶಿಕ್ಷಕ ಪ್ರಶಸ್ತಿ ಪಡೆದ ಶಿವಮಲ್ಲು ರವರು ಮಕ್ಕಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಪಾಠ ಪ್ರವಚನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಾಲೆಯ ಫಲಿತಾಂಶ ತುಂಬಾ ಚೆನ್ನಾಗಿ ಬರುತ್ತಿರುವುದಕ್ಕೆ ಕಾರಣ ಈ ಶಾಲೆಯ ಶಿಕ್ಷಕರುಗಳು. ಈ ಶಾಲೆಯ ಮುಖ್ಯೋಪಾಧ್ಯಯರಾದ ಎಂ. ರುದ್ರೇಗೌಡರು 27 ವರ್ಷಗಳಿಂದ ಬೂದಂಬಳ್ಳಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಹೊತ್ತು ನೀಡಿ ದಾಖಲಾತಿ ಹೆಚ್ಚಳ ಮಾಡಿದ್ದಾರೆ. ದಾನಿಗಳಿಂದ ಶಾಲೆಗೆ ಬೇಕಾದ ಪಿಟೋಪಕರಣಗಳನ್ನು ಕಲ್ಪಿಸಿ ಕೊಡುವಲ್ಲಿ ಶ್ರಮಿಸಿದ್ದಾರೆ. ನವೋದಯ ಶಾಲೆಗೆ ಇಲ್ಲಿನ ಮಕ್ಕಳು ಹೋಗುವ ರೀತಿ ಮಾಡಿದ್ದಾರೆ. ಈ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಈ ಶಾಲೆಯಲ್ಲಿ ಇರುವ ಮಕ್ಕಳು ಶಾಲೆಗೆ ಗ್ರಾಮಕ್ಕೆ ಹೆಸರು ತರುವ ರೀತಿ ಮುಂದಿನ ವಿದ್ಯಾಭ್ಯಾಸ ಮಾಡಬೇಕು ಎಂದು ತಿಳಿಸಿದರು. ಮುಖ್ಯೋಪಾಧ್ಯರಾದ ರುದ್ರೇಗೌಡರು ಸಹ ಮುಂದಿನ ವರ್ಷ ಉತ್ತಮ ಶಿಕ್ಷಕ ಪ್ರಶಸ್ತಿ ಪಡಿಬೇಕು ಎಂಬುದು ನನ್ನ ಆಶಯ ಈ ಬಾರಿ ಅರ್ಜಿ ಹಾಕಿದ್ದರೆ ಅವರಿಗೂ ಸಹ ಪ್ರಶಸ್ತಿ ಸಿಕ್ಕಿರುವುದು ಎಂದು ನನಗೆ ಅನಿಸುತ್ತಿದೆ. ಇಂತಹಾ ಸಣ್ಣ ಗ್ರಾಮದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿರುವುದಕ್ಕೆ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬೂದಂಬಳ್ಳಿ ಗ್ರಾಮದ ಶಾಲೆಯಲ್ಲಿ 27 ವರ್ಷ ಗಳಿಂದ ಸಹ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸುತ್ತಿರುವ ಎಮ್. ರುದ್ರೇಗೌಡ ಹಾಗೂ ಇದೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಾಗಮ್ಮ ರವರಿಗೂ ಸನ್ಮಾನ ಮಾಡಲಾಯಿತು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿವಮಲ್ಲು ರವರು ಮಾತನಾಡಿ ಇಂತಹಾ ಗ್ರಾಮದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯ, ಯಾಕೆಂದರೆ ಇಲ್ಲಿನ ಗ್ರಾಮಸ್ಥರು ಯಾವುದೇ ಕಾರ್ಯಕ್ರಮವಿರಲಿ ನಮಗೆ ಸ್ಪಂದಿಸುತ್ತಿರುತ್ತಾರೆ. ಪೋಷಕರು ಅಷ್ಟೇ ನಮ್ಮ ಮನವಿಗಳಿಗೆ ಸ್ಪಂದಿಸುತ್ತಾರೆ. ಗ್ರಾಮದ ಜನರು ಅತ್ಯಂತ ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಈ ಗ್ರಾಮದ ಜನತೆಗೆ ಯಾವಾಗಲೂ ಕೃತಜ್ಞತಾರಾಗಿರುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ಅಶ್ವಥ್, ಉಪಾಧ್ಯಕ್ಷರಾದ ಮಹೇಶ್ವರಿ, ಗ್ರಾಮ ಪಂಚಾಯತಿ ಸದಸ್ಯರಾದ ಬೂದಂಬಳ್ಳಿ ಗಿರೀಶ್, ಜಡೆಸ್ವಾಮಿ, ಮಾಜಿ ಸದಸ್ಯರಾದ ಬಿ.ಕೆ. ರಾಜಣ್ಣ ಎಸ್.ಡಿ. ಎಮ್.ಸಿ ಅಧ್ಯಕ್ಷರಾದ ನಾಗರಾಜು.ವಿ, ಶಿಕ್ಷಣ ಸಂಯೋಜಕರು, ಗೂಳಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಯ ಶಿಕ್ಷಕರುಗಳು, ಎಲ್ಲಾ ಕೋಮಿನ ಯಜಮಾನರುಗಳು, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು, ಪೋಷಕರು, ಹಾಗೂ ಹಿರಿಯ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು, ಮಹಿಳಾ ಸಂಘದ ಸದಸ್ಯರುಗಳು, ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ





