ಕನ್ನಡ ನಾಡು ನುಡಿಗಾಗಿ ಶ್ರಮಿಸೋಣ: ಕೆಲ್ಲಂಬಳ್ಳಿ ಸೋಮನಾಯಕ
ಚಾಮರಾಜನಗರ: ಕನ್ನಡ ನಾಡು ನುಡಿಗಾಗಿ ಎಲ್ಲರೂ ಶ್ರಮಿಸೋಣ ಎಂದು ನಾಯಕ ಜನಾಂಗದ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ ಅವರು ತಿಳಿಸಿದರು.
ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಶ್ರೀ ಮಲೆ ಮಹದೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಬಳಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಎಲ್ಲರೂ ಹೆಚ್ಚು ಹೆಚ್ಚು ಕನ್ನಡ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.
ಇದೆ ವೇಳೆ ಜೈ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಇದೆ ವೇಳೆ ಎಸ್ ಪಿ ಬಿ ಸಂಘದಿಂದ ಗೀತ ಗಾಯನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ್, ಮುಖಂಡರಾದ ಸುರೇಶ್ ನಾಯಕ್, ರಾಜುನಾಯಕ, ನಗರಸಭಾ ಮಾಜಿ ಸದಸ್ಯ ಶಿವರಾಜು, ಕರವೇ ಗೌರವಾಧ್ಯಕ್ಷ ಕೃಷ್ಣನಾಯ್ಕ, ಬುಲೆಟ್ ಚಂದ್ರು, ವರದನಾಯಕ, ಚಂದ್ರಶೇಖರ್, ಸೋಮು ನಾಯಕ, ಕರ್ನಾಟಕ ಕಾವಲು ಕಡೆ ಅಧ್ಯಕ್ಷ ಪರಶಿವ ಮೂರ್ತಿ, ವೆಂಕಟೇಶ್ ಪರಿಸರವಾದಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಲ್.ಕುಮಾರ್,ಗಿರೀಶ್, ರಂಗಸ್ವಾಮಿ, ಶಿವಮೂರ್ತಿ, ಯೋಗೇಶ್,ಸ್ವಾಮಿ, ಸಂತೋಷ್, ಶ್ರೀನಿವಾಸ ಸುರೇಶ್, ಚೇತಕ್ ಸೇರಿದಂತೆ ಇತರರಿದ್ದರು.
ವರದಿ:ಆರ್ ಉಮೇಶ್ ಮಲಾರಪಾಳ್ಯ





