*ಕೆ.ಆರ್.ಪೇಟೆ: ಅಘಲಯ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಉತ್ಸವ, ಅನ್ನದಾನ*, *ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ನಾರಾಯಣಗೌಡ ಮತ್ತಿತರರ ಗಣ್ಯರು ಹನುಮ ಜಯಂತಿಯಲ್ಲಿ ಭಾಗಿ*
ಕೆ.ಆರ್.ಪೇಟೆ : ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಹನುಮ ಜಯಂತಿಯ ಅಂಗವಾಗಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯವರ 86ನೇ ವರ್ಷದ ಪಲ್ಲಕ್ಕಿ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು.
ಹನುಮ ಜಯಂತಿಯ ಅಂಗವಾಗಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ, ವಿವಿಧ ಪುಷ್ಪಾಲಂಕಾರ, ಆಂಜನೇಯಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ, ಸಿಡಿಮದ್ದು ಪ್ರದರ್ಶನ, ಅನ್ನದಾನ ಮತ್ತಿತರರ ಕಾರ್ಯಕ್ರಮಗಳು ನಡೆದವು. ನಂತರ ಸರ್ವಾಲಂಕಾರಗೊಂಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯವರ ಉತ್ಸವ ಮೂರ್ತಿಯನ್ನು ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಮಂಗಳವಾಧ್ಯ ವಾದನ ಮತ್ತಿತರ ಜಾನಪದ ಕಲಾ ತಂಡಗಳೊಂದಿಗೆ ಅಘಲಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು.
ಗ್ರಾಮದ ಹಿರಿಯ ಮುಖಂಡ ಹಾಗೂ ನಿವೃತ್ತ ಶಿಕ್ಷಕ ನಂಜಪ್ಪ ಮಾತನಾಡಿ ಅಘಲಯ ಗ್ರಾಮದಲ್ಲಿ ಕಳೆದ 86ವರ್ಷಗಳಿಂದಲೂ ಪ್ರಸನ್ನ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಹನುಮ ಜಯಂತಿಯಂದು ನಡೆಸಿಕೊಂಡು ಬರಲಾಗುತ್ತಿದೆ. ಕಳೆದ 20 ವರ್ಷಗಳಿಂದ ಹನುಮ ಜಯಂತಿ ಉತ್ಸವವನ್ನು ವಿಜಯರಾಘವನ್ ಕುಟುಂಬದ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ ಅದರಂತೆ ಈ ಭಾರಿಯೂ ಸಹ ಅನುರಾಧಾ ವಿಜಯರಾಘವನ್ ಕುಟುಂಬದವರು ಅಘಲಯ ಪ್ರಸನ್ನ ಆಂಜನೇಯಸ್ವಾಮಿಯವರ ಪೂಜಾ ಕೈಂಕರ್ಯಗಳು, ಅನ್ನಧಾನ ಕಾರ್ಯಕ್ರಮ ಹಾಗೂ ಹನುಮ ಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು ಇದಕ್ಕೆ ಅನುರಾಧಾ ವಿಜಯರಾಘವನ್ ನೇತೃತ್ವದ ಬೆಂಗಳೂರಿನ ಅಂತರಾಳ ಚಾರಿಟೇಬಲ್ ಟ್ರಸ್ಟಿನ ಪೂರ್ಣ ಸಹಕಾರದಿಂದ ಅದ್ದೂರಿಯಾಗಿ ನಡೆಸಲಾಯಿತು. ಹಾಗಾಗಿ ನಮ್ಮೂರಿನ ಮನೆಮಗಳು ಅನುರಾಧಾವಿಜಯರಾಘವನ್ ತಂದೆ ಛತ್ರಿ ಶ್ರೀನಿವಾಸ ಅಯ್ಯಂಗಾರ್ ಹಾಗೂ ಪತಿ ವಿಜಯರಾಘವನ್ ಅವರಂತೆಯೇ ಗ್ರಾಮದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಮಾಸ್ಟರ್ ನಂಜಪ್ಪ ಹಾಗೂ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶ್ರೀಧರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ತಿಳಿಸಿದರು.
ಅಘಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಅಘಲಯ ಗ್ರಾಮದಲ್ಲಿ ಶ್ರದ್ದಾಭಕ್ತಿಯಿಂದ ಕಳೆದ 29ವರ್ಷಗಳಿಂದ ಛತ್ರಿ ಶ್ರೀನಿವಾಸ್
ಅಯ್ಯಂಗಾರ್ ಕುಟುಂಬದವರು ಹಾಗೂ ಗ್ರಾಮಸ್ಥರ ನೆರವಿನಿಂದ ಅತ್ಯಂತ ಶ್ರದ್ದಾಭಕ್ತಿಮ
ಯಿಂದ ಹನುಮ ಜಯಂತಿ ಉತ್ಸವ ನಡೆಸಿಕೊಂಡು ಬರುತ್ತಿರುವುದು. ಗ್ರಾಮದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಅದೇ ರೀತಿ ಅನುರಾಧಾ ವಿಜಯರಾಘವನ್ ಕುಟುಂಬವು ಬೆಂಗಳೂರಿನಲ್ಲಿ ವಾಸವಿದ್ದರೂ ಸಹ ಹುಟ್ಟೂರು ಮರೆಯದೇ ಈ ಭಾಗದ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್ ಗಳನ್ನು ಕೊಡುಗೆಯಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಕೈಜೋಡಿಸುತ್ತಾ ಬಂದಿದೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾದುದು. ಹಾಗಾಗಿ ಅನುರಾಧಾ ವಿಜಯ ರಾಘವನ್ ಕುಟುಂಬಕ್ಕೆ ಆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯವನ್ನು ನೀಡಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಜನಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಶಾಸಕರು ಹನುಮಂತನಲ್ಲಿ ಪ್ರಾರ್ಥಿಸಿದರು.
ಹನುಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು, ದಾನಿಗಳಾದ ಅನುರಾಧಾರಾಘವನ್, ಮಾಜಿ ಸಚಿವ ಡಾ.ನಾರಾಯಣಗೌಡ, ತಾ.ಪಂ.ಮಾಜಿ ಅಧ್ಯಕ್ಷ ಜಾನಕೀರಾಂ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಟಿಎಪಿಸಿಎಂಎಸ್ ನಿರ್ದೇಶಕ ನಾಗರಘಟ್ಟ ದೀಲೀಪ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹಡಿಮನೆ ಮಂಜಣ್ಣ, ತಾಲ್ಲೂಕು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಹೋಬಳಿ ಲೋಕೇಶ್, ಹೇಮಾವತಿಲೋಕೇಶ್, ಭಾರತಿಶ್ರೀಧರ್, ಮುಖಂಡರಾದ ಮಾಸ್ಟರ್ ನಂಜಪ್ಪ, ಹೋಬಳಿ ಲೋಕೇಶ್, ಸಂಪತ್‌ಕುಮಾರ್, ಶ್ರೀನಿವಾಸ ಅಯ್ಯಂಗಾರ್, ಜಗನ್ನಾಥ್, ನಂಜುಂಡನ್, ರಾಮನಕೊಪ್ಪಲು ಶಿವಣ್ಣನ ಕುಟುಂಬ, ಅಂತರಾಳ ಚಾರಿಟೇಬಲ್ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಕೆ.ಆರ್.ಪೇಟೆ, ಮೇಲುಕೋಟೆ, ಚನ್ನರಾಯಪಟ್ಟಣ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಹನುಮ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಆಂಜನೇಯಸ್ವಾಮಿಯವರ ದೇವರ ಕೃಫೆಗೆ ಪಾತ್ರರಾದರು.
ಹನುಮ ಜಯಂತಿಯ ಅಂಗವಾಗಿ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾಧಿಗಳಿಗೆ ಅನ್ನಸಂಪರ್ಪಣಾ ಕಾರ್ಯಕ್ರಮ ನಡೆಯಿತು.
ಗ್ರಾಮದ ಮೂಲ ನಿವಾಸಿಗಳಾದ ಛತ್ರಿ ಶ್ರೀನಿವಾಸ ಅಯ್ಯಂಗಾರ್ ಕುಟುಂಬದ ಅನುರಾಧಾ ವಿಜಯರಾಘವನ್ ಅವರ ಎಲ್ಲ ರೀತಿಯ ನೆರವಿನೊಂದಿಗೆ, ಅವರ ಶಿಷ್ಯ ವೃಂದದ ಹಾಗೂ ಅಘಲಯ ಗ್ರಾಮಸ್ಥರ ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಹನುಮ ಜಯಂತಿ ಅಂಗವಾಗಿ ಗ್ರಾಮದ ಮುಖ್ಯ ಬೀದಿಗಳನ್ನು ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳು ಮತ್ತು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಇದರಿಂದಾಗಿ ಗ್ರಾಮವು ನವ ವಧುವಿನಂತೆ ಕಂಗೊಳಿಸುತ್ತಿತ್ತು





