--ಜಾಹೀರಾತು--

ಶಾಸಕ ಶರತ್ ಬಚ್ಚೇಗೌಡರಿಗೆ ತ್ವರಿತವಾಗಿ ಮಂತ್ರಿ ಸ್ಥಾನ ಸಿಗಲಿ–ಬಿ.ಗೋಪಾಲ್

On: December 2, 2025 10:14 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಶಾಸಕ ಶರತ್ ಬಚ್ಚೇಗೌಡರಿಗೆ ತ್ವರಿತವಾಗಿ ಮಂತ್ರಿ ಸ್ಥಾನ ಸಿಗಲಿ
ಹುಟ್ಟುಹಬ್ಬ ಆಚರಣೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ ಗೋಪಾಲ್ ಆಶಯ

ಹೊಸಕೋಟೆ:ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜನಾನುರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಶಾಸಕ ಶರತ್ ಬಚ್ಚೇಗೌಡ ಅವರು ತ್ವರಿತವಾಗಿ ಸಚಿವರಾಗಲಿ ಎಂದು ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ ಗೋಪಾಲ್ ತಿಳಿಸಿದರು.

ತಾಲೂಕಿನ ಸ್ವಗ್ರಾಮ ಬೆಂಡಿಗಾನಹಳ್ಳಿಯಲ್ಲಿ ನಡೆದ ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯೂನಿಕ್ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಶಾಸಕ ಶರತ್ ಬಚ್ಚೇಗೌಡರು ಒಬ್ಬ ವಿದ್ಯಾವಂತ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದಾರೆ. ಹೊಸಕೋಟೆ ಕ್ಷೇತ್ರವನ್ನ ಬಿಟ್ಟು ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅವರಿಗೆ ಕೆಲಸ ಮಾಡಲು ಅವಕಾಶ ದಕ್ಕಬೇಕಿದ್ದು ಈ ಹಿನ್ನೆಲೆಯಲ್ಲಿತ್ವವಾಗಿ ಅವರು ಸಚಿವರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಪ್ರಮುಖವಾಗಿ ಅವರ ಹುಟ್ಟುಹಬ್ಬಕ್ಕೆ ಹಾರ ಶಾಲು ಪೇಟ ಇವುಗಳನ್ನ ನಿರ್ಬಂಧಿಸಿ ತಾಲೂಕಿನ ಸರ್ಕಾರಿ ಶಾಲೆ ಮಕ್ಕಳ ಅಭಿವೃದ್ಧಿಗೆ ಪೂರಕವಾಗುವ ಪೆನ್ನು ಪೆನ್ಸಿಲ್ ನೋಟ್ ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳ ಸಂಗ್ರಹ ಮಾಡಿ ಸಾರ್ಥಕತೆಯ ಕೆಲಸ ಮಾಡುತ್ತಿರುವುದು ಮತ್ತಷ್ಟು ಜನರಿಗೆ ಪ್ರೇರಣೆಯಾಗಿದೆ ಎಂದರು.

ಮಾರಸಂಡಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಎಚ್ ಆರ್ ಸುರೇಶ್, ಇಟ್ಟಸಂದ್ರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಿಂದು ದೇವೇಗೌಡ, ತಾವರೆಕೆರೆ ಗ್ರಾಮ ಪಂಚಾಯತ್ ಸದಸ್ಯ ಭವ್ಯ ಮಂಜುನಾಥ್, ನೆಲವಾಗಿಲು ಗ್ರಾಮ ಪಂಚಾಯತ್ ಸದಸ್ಯ ಮಧು, ಯುವ ಮುಖಂಡರಾದ ಇಟ್ಟಸಂದ್ರ ಶಿವಕುಮಾರ್, ಇಂಡಿಗನಾಳ ಅರುಣ್ ಕುಮಾರ್ ಹಾಜರಿದ್ದರು