ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ವಿಚಾರಗೋಷ್ಠಿ
ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರ್ ತಾಲೂಕಿನಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಇಮ್ಮಡಿ ಕರಿಬಸವದೇಸಿ ಕೇಂದ್ರ ಮಹಾ ಸ್ವಾಮೀಜಿಯವರು ಶಿಡ್ಲೆಹಳ್ಳಿ ಮಠ ಇವರು ದೀಪ ಬೆಳಗಿಸಿ ಚಾಲನೆ ನೀಡಿಮಾತನಾಡಿದ ಸ್ವಾಮೀಜಿಯವರು
ಈ ದಿನ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ತಮ್ಮನ್ನ ತಾವು ತೊಡಗಿಸಿ ಕೊಂಡಿರುವುದು ತುಂಬಾ ಸಂತೋಷ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಹೇಮಾವತಿ ವಿ ಹೆಗ್ಗಡೆಯವರ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮ ಪ್ರಾರಂಭದ ಕುರಿತು ಮಾತೃಶ್ರೀ ರವರ ಚಿಂತನೆಯಲ್ಲಿ ಮೂಡಿಬಂದಿರುವ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಕೌಟುಂಬಿಕ ಸಾಮರಸ್ಯ, ಶಿಕ್ಷಣ, ಅರೋಗ್ಯ, ಸ್ವ ಉದ್ಯೋಗ, ಸರ್ಕಾರಿ ಯೋಜನೆ ಕಾನೂನು ಬಗ್ಗೆ ಹಾಗೂ ಪ್ರತಿ ತಿಂಗಳು ವಿಶೇಷ ಮಾಹಿತಿ ನೀಡುತ್ತಿದ್ದಾರೆ ತಾವೆಲ್ಲರೂ ಸದುಪಯೋಗ ಪಡೆದುಕೊಳ್ಳಿ ಈಗಾಗಲೇ R set ಮೂಲಕ ತರಬೇತಿ ಪಡೆದು ಸ್ವ ಉದ್ಯೋಗ ಮಾಡುವರ ಬಗ್ಗೆ ತಿಳಿಸಿದರು. ಜನಮಂಗಳ, ವಾತ್ಸಲ್ಯಮನೆ, ಮಾಶಾಸನ ನೀಡುತ್ತಿರುವ ಬಗ್ಗೆ ತಿಳಿಸಿದರು. Dr ಶ್ರೀಧರ್ ರವರು ವೈದ್ಯರು ಮಹಿಳೆಯರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿಯಾಗಿದೆ ತಾವೆಲ್ಲರೂ ಸದುಪಯೋಗ ಪಡೆದು ಸದೃಢ ಗೃಹಿಣಿಯಾರು ಆಗಬೇಕು ಎಂದರು. ಸಂಪನ್ಮೂಲ ವ್ಯಕ್ತಿಯವರಾದ ಪ್ರಮೋದ ಕುಮಾರಿ ರವರು ಸಾಮಾಜಿಕ ಮತ್ತು ಶೈಕ್ಷಣಿಕ ಅರಿವನ್ನು ಮೂಡಿಸುವ ಜೊತೆಗೆ ಸೈಬರ್ ಕ್ರೈಮ್, ಬಾಲ್ಯ ವಿವಾಹ, ಹಾಗೆ ದೇಹದಲ್ಲಿ ಹೇಗೆ ಹೃದಯ ಮುಖ್ಯನೋ ಹಾಗೆ ಮನೆಯ ಹೃದಯವೇ ಮಹಿಳೆ, ಎಂದು ತಾಯಂದಿರಿಗೆ ಮಾತಿನ ಮೂಲಕ ಸಂವಾದ ನಡೆಸಿ ಹುರುದುಂಬಿಸಿ ಶ್ರೀ ಕ್ಷೇತ್ರದ ಪೂಜ್ಯ ಹೆಗ್ಗಡೆ ರವರು ಮಾತೃಶ್ರೀ ಅಮ್ಮನವರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ನಿರಂತರ ಮಾಷ ಪತ್ರಿಕೆ ಓದಿ ಉತ್ತಮ ವಿಚಾರ ತಿಳಿದು ಕೊಳ್ಳಿ ಎಂದರು.
ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯವರಾದ ಉದಯ್ ನಿವೃತ್ತ ಉಪನಿರ್ದೇಶಕರು ಮಂಗಳ ಗೌರಿ ಕಾರ್ಯಕ್ರಮದ ಅಧ್ಯಕ್ಷರು ಮಹಾದೇವಮ್ಮ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಯೋಜನೆಯ ಕಾರ್ಯಕರ್ತರು, ಸೇವಾಪ್ರತಿನಿಧಿಯವರು,25ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು
ವರದಿ:ಮಂಜು ಗುರುಗದಹಳ್ಳಿ





