ಹೊಸಕೋಟೆ ದರ್ಶನ್ ತೂಗುದೀಪ ಅಭಿಮಾನಿ ಬಳಗದ ವತಿಯಿಂದ ಡೆವಿಲ್ ಚಿತ್ರಕ್ಕೆ ವಿಶೇಷ ರೀತಿಯಲ್ಲಿ ಪ್ರಚಾರ “
ಡೆವಿಲ್ ಚಿತ್ರ ಬಿಡುಗಡೆಗೆ ನಾಲ್ಕು ದಿನ ಮುಂಚೆಯೇ ವಿಭಿನ್ನ ರೀತಿಯ ಪ್ರಚಾರಕ್ಕೆ ಮುದ್ದಾದ ಅಭಿಮಾನಿಗಳು.
ತಾವರೆಕೆರೆ : ಹೊಸಕೋಟೆ ತಾಲೂಕು ದರ್ಶನ್ ತೂಗುದೀಪ ಅಭಿಮಾನಿ ಬಳಗದ ವತಿಯಿಂದ ಡೆವಿಲ್ ಚಿತ್ರದ ಪ್ರಚಾರಕ್ಕಾಗಿ ವಿಶೇಷ ರೀತಿಯ ತಯಾರಿಯಲ್ಲಿದೆ. ಡೆವಿಲ್ ಚಿತ್ರದ ಸ್ವಾಗತಕ್ಕೆ ಕಾದುನಿಂತ ಹೊಸಕೋಟೆ ಡಿ ಬಾಸ್ ಅಭಿಮಾನಿಗಳ ಬಳಗ .ಡಿಸೆಂಬರ್ 11ರಂದು ದರ್ಶನ್ ತೂಗುದೀಪ ಅಭಿನಯದ ಡೆವಿಲ್ ಚಿತ್ರವು ರಾಜ್ಯಾದ್ಯಂತ ತೆರೆಗೆ ಬರುವ ನಿಟ್ಟಿನಿಂದ ಹೊಸಕೋಟೆಯ ದರ್ಶನ ಅಭಿಮಾನಿಗಳ ಬಳಗದ ವತಿಯಿಂದ ವಿಶೇಷ ರೀತಿಯ ತಯಾರಿ ನಡೆಸುತ್ತಿದ್ದಾರೆ.
ತಾಲೂಕು ಅಧ್ಯಕ್ಷ ದಚ್ಚುರಾಜ್ ತೂಗುದೀಪ್ ಮಾತನಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಹಾಗೂ ದರ್ಶನ್ ತೂಗುದೀಪ ಅಭಿಮಾನಿಗಳ ಬಳಗದ ವತಿಯಿಂದ ಹೊಸಕೋಟೆ ತಾಲೂಕಿನಲ್ಲಿ ದಿನಾಂಕ 7 ಭಾನುವಾರ ಸಂಜೆ 4 ಗಂಟೆಗೆ ಹೊಸಕೋಟೆಯ ಕೋರ್ಟ್ ಸರ್ಕಲ್ ನಲ್ಲಿ ದರ್ಶನವರ ಭಾವಚಿತ್ರದ ಬ್ಯಾನರ್ಗೆ ಪುಷ್ಪಾರ್ಚನೆ ಹಾಗೂ ಪಟಾಕಿ ಸಿಡಿಸುವ ಕಾರ್ಯಕ್ರಮ. ದಿನಾಂಕ 9 ಮಂಗಳವಾರ ಬೆಳಗ್ಗೆ ಒಂಬತ್ತು ಗಂಟೆಗೆ ಉಪ್ಪಾರಹಳ್ಳಿ ಕಾಟೇರಮ್ಮ ದೇವಿಗೆ ಪೂಜೆ ಹಾಗೂ ದೇವರಿಗೆ ಕುರಿ ಬಲಿದಾನ ಹಾಗೂ ಬೆಳಗ್ಗೆ 10 ಗಂಟೆಗೆ ಮಂಗಳಮುಖಿಯರಿಗೆ ಬಾಗಿನ ಕೊಡುವ ಕಾರ್ಯ. ಮಧ್ಯಾಹ್ನ 12:30ಕ್ಕೆ ಅಭಿಮಾನಿಗಳಿಗೆ ಮಟನ್ ಬಿರಿಯಾನಿ, ಊಟದ ವ್ಯವಸ್ಥೆ. ದಿನಾಂಕ 11 ಚಿತ್ರ ಬಿಡುಗಡೆ ದಿನದಂದು ಹೊಸಕೋಟೆಯಿಂದ ಒರಿಯನ್ ಮಾಲ್ ವರೆಗೂ ಬೃಹತ್ ಬೈಕ್ ಹಾಗೂ ಕಾರ್ ರ‍್ಯಾಲಿ ಮೂಲಕ ಅನ್ನಸಂತರ್ಪಣೆ
ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ಕೆ ತಾಲೂಕಿನ ಅಭಿಮಾನಿಗಳು ಹಾಗೂ ಚಿತ್ರ ಪ್ರೇಮಿಗಳು ಹಾಜರಾಗಿ ಯಶಸ್ವಿಗೊಳಿಸಬೇಕಾಗಿ ತಿಳಿಸಿದರು.





