--ಜಾಹೀರಾತು--

ಡಿಸೆಂಬರ್ 5ರಿಂದ ಉಪ್ಪಾರಹಳ್ಳಿ ಮದ್ದೂರಮ್ಮ ದೇವಿ ದನಗಳ ಜಾತ್ರೆ ಆರಂಭ

On: December 3, 2025 6:44 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಡಿಸೆಂಬರ್ 5ರಿಂದ ಉಪ್ಪಾರಹಳ್ಳಿ ಮದ್ದೂರಮ್ಮ ದೇವಿ ದನಗಳ ಜಾತ್ರೆ ಆರಂಭ

ದೀಪೋತ್ಸವ ಜೊತೆಗೆ ದನಗಳ ಜಾತ್ರೆ : ಧರ್ಮದರ್ಶಿ ಸಿ.ಮುನಿಯಪ್ಪ ಹೇಳಿಕೆ

ಹೊಸಕೋಟೆ:ಇತಿಹಾಸ ಪ್ರಸಿದ್ಧ ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಉಪ್ಪಾರಹಳ್ಳಿ ಗ್ರಾಮದ ಶ್ರೀ ಮದ್ದೂರಮ್ಮ ದೇವಿ ಶ್ರೀ ಪೀಳೆ ಕಮ್ಮಾ ದೇವಿ, ಶ್ರೀ ಚೌಡೇಶ್ವರಮ್ಮ ದೇವಿಯವರ ಜಾತ್ರೆ ಮತ್ತು ದೀಪೋತ್ಸವ ಕಾರ್ಯಕ್ರಮ ಡಿಸೆಂಬರ್ ಐದರ ಶುಕ್ರವಾರದಿಂದ ಡಿಸೆಂಬರ್ 15ರ ಸೋಮವಾರದವರೆಗೆ ನಡೆಯಲಿದೆ ಎಂದು ಜಾತ್ರಾ ಆಚರಣ ಸಮಿತಿ ಅಧ್ಯಕ್ಷರು ಹಾಗೂ ಧರ್ಮದರ್ಶಿ ಸಮಿತಿ ಅಧ್ಯಕ್ಷರು ಆದಂತಹ ಸಿ.ಮುನಿಯಪ್ಪನವರು ತಿಳಿಸಿದರು.

ಉಪ್ಪಾರಹಳ್ಳಿ ಗ್ರಾಮದಲ್ಲಿ ಜಾತ್ರೆ ಆಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಾರು 12 ದಿನಗಳ ಕಾಲ ನಡೆಯುವಂತಹ ಜಾತ್ರಾ ಮಹೋತ್ಸವ ಇದಾಗಿದ್ದು ಡಿಸೆಂಬರ್ 5ರ ಶುಕ್ರವಾರದಂದು ಧ್ವಜಾರೋಹಣ ಮತ್ತು ಸಾಟು ಇಡುವ ಕಾರ್ಯಕ್ರಮದಿಂದ ಪ್ರಾರಂಭವಾಗಿ ಡಿ.10 ಬುಧವಾರದಂದು ಕೃಷಿ ತೋಟಗಾರಿಕೆ ರೇಷ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಪಶು ವೈದ್ಯ ಇಲಾಖೆಗಳಿಂದ ವಸ್ತು ಪ್ರದರ್ಶನ ಮತ್ತು ಉತ್ತಮ ರಾಸುಗಳಿಗೆ ಬಹುಮಾನ ವಿತರಣೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವಸ್ತು ಪ್ರದರ್ಶನದ ಮಳಿಗೆಗಳನ್ನ ಬಿಎನ್ ಬಚ್ಚೇಗೌಡರು ಮಾಜಿ ಸಂಸದರು ಉದ್ಘಾಟನೆ ಮಾಡಿದ್ದಾರೆ, ಉತ್ತಮ ರಾಸುಗಳಿಗೆ ಶಾಸಕ ಶರತ್ ಬಚ್ಚೇಗೌಡ ಬಹುಮಾನವನ್ನು ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು ಅಶೋಕ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಟಿಎಪಿಸಿಎಂಎಸ್ ಮಾಡಿ ಉಪಾಧ್ಯಕ್ಷ ಗೋಪಾಲ ಗೌಡ, ಉದ್ಯಮಿ ಬಿವಿ.ಬೋರೆಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ, ಬಮುಲ್ ನಿರ್ದೇಶಕ ಬಿವಿ ಸತೀಶ್‌ಗೌಡ ಟಿಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಬಾಕ್ಸ್:
ತಲತಲಾಂತರಗಳಿಂದ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು ನಮ್ಮ ತಾತ, ನಮ್ಮ ತಂದೆ ಬಳಿಕ ಈಗ ನಾನು ಧರ್ಮದರ್ಶಿಯಾಗಿ ಈ ಒಂದು ಜಾತ್ರೆ ನಡೆಸಿಕೊಂಡು ಹೋಗುತ್ತಿದ್ದೇನೆ. ಉಪ್ಪಾರಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮ ದೇವಿಯ ಚೌಡೇಶ್ವರ ಮಹಾದೇವಿಯ ದೇವಾಲಯವನ್ನು 1936ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಉದ್ಘಾಟನೆಯನ್ನು ಮಾಡಿದ್ದು, ಬಳಿಕ ಶಿಥಿಲಗೊಂಡಿದ್ದಂತಹ ದೇವಾಲಯವನ್ನು 2004ರಲ್ಲಿ ಮಾಜಿ ಸಚಿವರಾದ ಬಿಎನ್ ಬಚ್ಚೇಗೌಡರು ಜೀರ್ಣೋದ್ಧಾರ ಮಾಡಿದ್ರು ಎಂದು ಧರ್ಮದರ್ಶಿ ಮುನಿಯಪ್ಪ ತಿಳಿಸಿದರು.