--ಜಾಹೀರಾತು--

ಸಾಮಾಜಿಕ ಚಿಂತಕ ರಂಜಿತ್ ಯಾದವ್ ರವರ ಜನ್ಮದಿನದ ಪ್ರಯುಕ್ತ ಅರೋಗ್ಯ ತಪಾಸಣಾ ಶಿಬಿರ

On: December 3, 2025 7:44 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಸಾಮಾಜಿಕ ಚಿಂತಕ ರಂಜಿತ್ ಯಾದವ್ ರವರ ಜನ್ಮದಿನದ ಪ್ರಯುಕ್ತ ಅರೋಗ್ಯ ತಪಾಸಣಾ ಶಿಬಿರ

ದೊಡ್ಡಬಳ್ಳಾಪುರ:ಸಾಮಾಜಿಕ ಚಿಂತಕ ರಂಜಿತ್ ಯಾದವ್ ರವರ ಜನ್ಮದಿನದ ಪ್ರಯುಕ್ತ ನೆಲ್ಲುಕುಂಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ದಲ್ಲಿ ಮಾಜಿ ಎಂ.ಪಿ. ಸಿ .ಎಸ್ ಅಧ್ಯಕ್ಷರು ಮತ್ತು ತಿಪ್ಪೂರು ವಿ.ಎಸ್.ಎಸ್.ಎನ್ ನಿರ್ದೇಶಕರಾದ ತಿಮ್ಮರಾಜು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ರಂಜಿತ್ ಯಾದವ್ ರವರು ಅವರ ಜನ್ಮದಿನದ ಅಂಗವಾಗಿ ಆರೋಗ್ಯ ಶಿಬಿರ ಆಯೋಜನೆ ಮಾಡಿರುವುದು ಅಭಿನಂದನಾರ್ಹವಾದ ಕಾರ್ಯ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನಸಾಮಾನ್ಯರಿಗೆ ಸಹಕಾರಿಯಾಗಲಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಂಜಿತ್ ರವರಿಗೆ ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಭಗವಂತ ಶಕ್ತಿ ಕರುಣಿಸಲಿ ಎಂದು ಶುಭಹಾರೈಸಿದರು.

ಕಂಟನಕುಂಟೆಯ ಮಾತೋ ಶ್ರೀ ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ಬಿ.ಪಿ, ಶುಗರ್, ರಕ್ತದೊತ್ತಡ ಇತರೆ ಕಾಯಿಲೆಗಳ ತಪಾಸಣೆ ನಡೆಯಿತು.

ಕಾರ್ಯಕ್ರಮದ ಆಯೋಜಕ ರಂಜಿತ್ ಯಾದವ್ ಮಾತನಾಡಿ ಪ್ರತಿವರ್ಷ ನನ್ನ ಹುಟ್ಟಿದ ದಿನದ ಅಂಗವಾಗಿ ಬೇರೆಬೇರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದೆ, ಈ ವರ್ಷ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಲೆಂದು ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದೇನೆ ಎಲ್ಲರೂ ಬಂದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಆರೋಗ್ಯಕ್ಕಿಂತ ಮುಖ್ಯವಾದು ಯಾವುದೂ ಇಲ್ಲ ಅರೋಗ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ ಯುವ ಮುಖಂಡ ಪ್ರತಾಪ್ ,ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸುನೀಲ್ ಕುಮಾರ್ ಯಾದವ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮಾತೋ ಶ್ರೀ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕರಾದ ಗಜೇಂದ್ರ ,ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಮುಖಂಡರು ಗಳಾದ ಸಂಪತ್ ಯಾದವ್, ರಾಜ್‍ಕುಮಾರ್ ಜಿ.ಎನ್ ಮುಂತಾದವರು ಉಪಸ್ಥಿತರಿದ್ದರು.