--ಜಾಹೀರಾತು--

ಕರಗ ಮಹೋತ್ಸವಗಳಿಗೆ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಮನವಿ

On: December 4, 2025 7:15 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕರಗ ಮಹೋತ್ಸವಗಳಿಗೆ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಮನವಿ

ದೇವನಹಳ್ಳಿ:ಕರ್ನಾಟಕ ಸರ್ಕಾರದಿಂದ ಕರಗ ಮಹೋತ್ಸವಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಬಿಡುಗಡೆ ಮಾಡಿ ಒಂದು ವರ್ಷ ಆದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಚರಿಸುತ್ತಿರುವ ಕರಗ ಮಹೋತ್ಸವ ಆಚರಿಸುತ್ತಿರುವ ದೇವಾಲಯಗಳಿಗೆ ಇನ್ನು ಅನುದಾನ ನೀಡಿರುವುದಿಲ್ಲ.
ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ತಿಗಳರ (ವನ್ನಿಕುಲ ಕ್ಷತ್ರಿಯ)ಸಂಘ (ರಿ) ಹಾಗೂ ದೇವನಹಳ್ಳಿ ತಾಲ್ಲೂಕು ತಿಗಳರ ಸಂಘದಿಂದ ಮತ್ತು ಕರಗ ದೇವಾಲಯಗಳ ಪರವಾಗಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಶ್ರೀ ಬಸವರಾಜು ಎ ಬಿ ರವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಘದ ಪರವಾಗಿ ಮನವಿಯನ್ನು ರಾಜ್ಯ ಸಂಘದ ಉಪಾಧ್ಯಕ್ಷ ವೈ ಎನ್ ಶಾಮಣ್ಣ,ಸಂಘಟನಾ ಕಾರ್ಯದರ್ಶಿ ಜೆ ಆರ್ ಮುನಿವೀರಣ್ಣ, ರಾಜ್ಯ ನಿರ್ದೇಶಕರುಗಳಾದ ಎನ್ ಕನಕರಾಜು ಹಾಗೂ ಕೊನಘಟ್ಟ ಕೆ ಎಂ ಮಂಜುನಾಥ್,ದೇವನಹಳ್ಳಿ ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ವಿ ಗೋಪಾಲಕೃಷ್ಣ, ದೇವನಹಳ್ಳಿ ಶ್ರೀ ಮೌಕ್ತಿಕಾಂಭ ದೇವಾಲಯದ ಅಧ್ಯಕ್ಷ ಎಸ್ ಸಿ ನಾಗರಾಜ್, ವಿಜಯಪುರ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಕೆ ವಿ ಮುನಿರಾಜು, ಖಜಾಂಚಿ ತರಕಾರಿ ರಮೇಶ್, ರವರು ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.