ಚರಂಡಿಗೆ ಬಿದ್ದಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಯುವಮುಖಂಡ
ಶಿಡ್ಲಘಟ್ಟ: ಮೇಲೂರು ಗ್ರಾಮದಲ್ಲಿ, ಚರಂಡಿಗೆ ಬಿದ್ದಿದ್ದ ಹಸುವನ್ನು ಸ್ಥಳೀಯ ಮುಖಂಡ ಧನುಷ್ ಕುಮಾರ್ ಅವರು,ತಕ್ಷಣ ಜೆಸಿಬಿ ತರಿಸಿ, ಹಸುವನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರೈತರೊಬ್ಬರು ಹಸುವಿಗೆ ಪಶುವೈದ್ಯ ಆಸ್ಪತ್ರೆಯಲ್ಲಿ, ಚಿಕಿತ್ಸೆ ಕೊಡಿಸಿ, ಕರೆದುಕೊಂಡು ಬರುತ್ತಿದ್ದ ವೇಳೆ, ಬೆದರಿದ ಹಸು, ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಬಿದ್ದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಧನುಷ್ ಕುಮಾರ್ ಅವರು, ತಕ್ಷಣ ಜೆಸಿಬಿ ತರಿಸಿ, ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರೈತನಿಗೆ ಸಹಾಯ ಮಾಡಿದರು.
ರಸ್ತೆಯ ಪಕ್ಕದಲ್ಲಿನ ಚರಂಡಿಗಳ ಮೇಲೆ ಮುಚ್ಚಳ ಅಳವಡಿಕೆಗೆ ಒತ್ತಾಯ: ಮುಖ್ಯರಸ್ತೆಯ ಪಕ್ಕದಲ್ಲಿನ ಚರಂಡಿಯ ಮೇಲೆ ಮುಚ್ಚಳಗಳನ್ನು ಅಳವಡಿಸಬೇಕು. ರಸ್ತೆಯ ಪಕ್ಕದಲ್ಲಿ ಶಾಲೆಯಿದೆ. ಮಕ್ಕಳು ಓಡಾಡುತ್ತಿರುತ್ತಾರೆ. ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಆದ್ದರಿಂದ ಚರಂಡಿಯ ಮೇಲೆ ಮುಚ್ಚಳ ಅಳವಡಿಸಿದರೆ, ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
೦೪.ಎಸ್.ಡಿ.ಎಲ್.ಪಿ.೦೩: ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಚರಂಡಿಗೆ ಬಿದ್ದಿದ್ದ ಹಸುವನ್ನು ಸ್ಥಳೀಯ ಯುವಮುಖಂಡ ಧನುಷ್ ಕುಮಾರ್ ಅವರು ಜೆಸಿಬಿ ಮೂಲಕ ರಕ್ಷಿಸಿದರು.





