--ಜಾಹೀರಾತು--

ಕರಗ ಮಹೋತ್ಸವಕ್ಕೆ ಸರ್ಕಾರ ಅನುದಾನ  ನಿರ್ಲಕ್ಷ ಕನಕರಾಜು ವಾಗ್ದಾಳಿ

On: December 4, 2025 8:16 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕರಗ ಮಹೋತ್ಸವಕ್ಕೆ ಸರ್ಕಾರ ಅನುದಾನ  ನಿರ್ಲಕ್ಷ ಕನಕರಾಜು ವಾಗ್ದಾಳಿ

ದೇವನಹಳ್ಳಿ :- ಕರ್ನಾಟಕ ಸರ್ಕಾರದಿಂದ ಕರಗ ಮಹೋತ್ಸವಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ಬಿಡುಗಡೆಗೊಳಿಸಿ ವರ್ಷ ಕಳೆದರೂ ಬೆಂಗ ಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಚರಿಸುವ ಕರಗ ಮಹೋತ್ಸವ ದೇವಾಲಯಕ್ಕೆ ಅನುದಾನ ನಿರ್ಲಕ್ಷ ಖಂಡಿಸಿ ಜನಾಂಗದ ಮುಖಂಡ ಕನಕರಾಜು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ತಿಗಳರ (ವನ್ನಿ ಕುಲಕ್ಷತ್ರಿಯ) ಸಂಘ (ರಿ) ಹಾಗೂ ದೇವನಹಳ್ಳಿ ತಾಲ್ಲೂಕು ತಿಗಳರ ಸಂಘದಿಂದ ಮತ್ತು ಕರಗ ದೇವಾಲ ಯಗಳ ಪರವಾಗಿ ಜಿಲ್ಲಾಧಿಕಾರಿಗಳಿಗೆ ನಮ್ಮ ಬೇಡಿಕೆ ಪತ್ರ  ನೀಡಿದ ಬಳಿಕ ಮಾತನಾಡಿದರು.

ಕನ್ನಡ ಭಾಷೆ ಹಾಗೂ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಸಂಘ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಅನುದಾನ ದಲ್ಲಿ ಭಾರಿ ಕಡಿತವಾಗಿದೆ. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನಡೆಯುತ್ತಿದ್ದ ಪ್ರೋತ್ಸಾಹಕ ಚಟುವಟಿಕೆ ಗಳಿಗೂ ಕತ್ತರಿ ಬಿದ್ದಿದೆ ಮುಂದುವರೆದರೆ ಸಹಸ್ರ ಸಂಖ್ಯೆಯಲ್ಲಿ ಸರ್ಕಾರದ ವಿರುದ್ಧ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯ ಸಂಘದ ಉಪಾಧ್ಯಕ್ಷ ವೈ ಎನ್ ಶಾಮಣ್ಣ ಈ  ಸಂದರ್ಭದಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷ ವೈ ಎನ್ ಶಾಮಣ್ಣ, ಸಂಘಟನಾ ಕಾರ್ಯದರ್ಶಿ ಜೆ ಆರ್. ಮುನಿ ವೀರಣ್ಣ, ರಾಜ್ಯ ನಿರ್ದೇಶಕರುಗಳಾದ ಎನ್ ಕನಕ ರಾಜು ಹಾಗೂ ಕೊನಘಟ್ಟ ಕೆಎಂ.ಮಂಜುನಾಥ್, ದೇವನ ಹಳ್ಳಿ ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ವಿ ಗೋಪಾಲಕೃಷ್ಣ, ದೇವನಹಳ್ಳಿ ಶ್ರೀ ಮೌಕ್ತಿಕಾಂಭ ದೇವಾ ಲಯದ ಅಧ್ಯಕ್ಷ ಎಸ್ ಸಿ ನಾಗರಾಜ್, ವಿಜಯ ಪುರ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಕೆವಿ.ಮುನಿರಾಜು, ಖಜಾಂಚಿ ತರಕಾರಿ ರಮೇಶ್ ಇನ್ನೂ ಮುಂತಾದವರು ಹಾಜರಿದ್ದರು.