--ಜಾಹೀರಾತು--

ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

On: December 4, 2025 8:29 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು.

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಓ ಅವರು, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ಕೊಡಲ್ಲ, ಕಚೇರಿಯಲ್ಲೆ ಕುಳಿತುಕೊಂಡು ಆದೇಶ ಮಾಡುತ್ತೀರಿ, ಸ್ಥಳಕ್ಕೆ ಭೇಟಿ ನೀಡಲ್ಲ. ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವುದಿಲ್ಲ. ಸಾರ್ವಜನಿಕರು ಸಮಸ್ಯೆಗಳನ್ನು ಹೇಳಬೇಕಾದರೆ ಪಂಚಾಯಿತಿಗೆ ಬರಬೇಕು. ಸಾರ್ವಜನಿಕರು ಬಂದರೂ, ಅಧಿಕಾರಿ ಕಚೇರಿಯಲ್ಲಿ ಇರುವುದಿಲ್ಲ. ಪಿಡಿಓ ಅವರು, ಎಲ್ಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಸಹಾ ಸಾರ್ವಜನಿಕರಿಗೆ ಸಿಗಲ್ಲ. ಯಾರನ್ನೂ ಕೇಳಿದರೂ ಎಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ ಎಂದು ಉತ್ತರಿಸುತ್ತಾರೆ.
ಗ್ರಾಮಸಭೆಗೂ ಮೊದಲು ಹಳ್ಳಿಗಳಲ್ಲಿ ಮಾಡುವ ವಾರ್ಡ್ ಸಭೆಗಳಿಗೆ ಸಾರ್ವಜನಿಕರಿಗೆ ಮಾಹಿತಿ ಕೊಡಲ್ಲ. ಗ್ರಾಮಸಭೆಗೂ ಕರಪತ್ರಗಳನ್ನು ಹಂಚಿಕೆ ಮಾಡಿಲ್ಲ. ಗ್ರಾಮಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಟ್ಟರೆ, ಸಾರ್ವಜನಿಕರಿಲ್ಲ. ತಾಲೂಕು ಮಟ್ಟದ ಸಂಬಂಧಪಟ್ಟ ಯಾವ ಅಧಿಕಾರಿಗಳು ಬಂದಿಲ್ಲ. ಕಾಟಾಚಾರಕ್ಕೆ ಗ್ರಾಮಸಭೆ ಮಾಡುತ್ತಿದ್ದೀರಿ ಎಂದು ಸ್ಥಳೀಯ ಮುಖಂಡ ಮುರಳಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆ ಆಚರಣೆ ಮಾಡಿಲ್ಲ. ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕುರಿತು, ಪೂರ್ವಭಾವಿ ಸಭೆ ನಡೆಸಿ ವರದಿ ಕಳುಹಿಸುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನೊಟೀಸ್ ಕಳುಹಿಸಿದ್ದರೂ, ಪೂರ್ವಭಾವಿ ಸಭೆ ನಡೆಸಿಲ್ಲ. ಗ್ರಾಮಸಭೆಯ ದಿನದಂದೇ ಮಕ್ಕಳ ಗ್ರಾಮಸಭೆ ಮಾಡುವುದಾಗಿ ಸಾರ್ವಜನಿಕ ಪ್ರಕಟಣೆಯನ್ನು ಪಂಚಾಯಿತಿಯ ಮಾಹಿತಿ ಕೇಂದ್ರದಲ್ಲಿ ಹಾಕಿದ್ದಾರೆ. ಮಕ್ಕಳ ಗ್ರಾಮಸಭೆ ಮಾಡಿಲ್ಲ.ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆಯನ್ನೆ ನಡೆಸಿಲ್ಲ. ಅವರ ಹಕ್ಕುಗಳಿಗೆ ಚ್ಯುತಿ ತಂದಿದ್ದೀರಿ.
ಗ್ರಾಮ ಪಂಚಾಯಿತಿಗೆ ಸುಣ್ಣ, ಬಣ್ಣ ಮಾಡಿಸಲಾಗಿದೆ ಸಭಾಂಗಣದಲ್ಲಿ ವುಡ್ ವರ್ಕ್ ಮಾಡಲಾಗಿದೆ. ಹವಾನಿಯಂತ್ರಿತ ಯಂತ್ರ ಅಳವಡಿಸಲಾಗಿದೆ ಎಂದು ಬಿಲ್ ಮಾಡಿದ್ದೀರಿ, ಹವಾನಿಯಂತ್ರಿತ ಯಂತ್ರವೇ ಇಲ್ಲ. ಹೇಗೆ ಬಿಲ್ ಮಾಡ್ತಿರಿ? ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ದುರುಪಯೋಗ ಮಾಡುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿಗಳನ್ನು ಸರಿಯಾಗಿ ಸ್ವಚ್ಚಗೊಳಿಸುತ್ತಿಲ್ಲ. ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತುಕೊಂಡು ಬಂದರು ಅವರ ಸಮಸ್ಯೆ ಕೇಳುವುದಕ್ಕೆ ಅಧಿಕಾರಿ ಇರುವುದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಲೇ ಔಟ್ ಗಳಿಗೆ ಅನುಮತಿ ಕೊಟ್ಟಿದ್ದಾರೆ. ಬಹಳಷ್ಟು ಲೇ ಔಟ್ ಗಳನ್ನು ಅಭಿವೃದ್ಧಿ ಪಡಿಸಿಲ್ಲದ ಕಾರಣ, ನಿವೇಶನಗಳು ಖರೀದಿಸಿರುವವರು, ಪರದಾಡುವಂತಾಗಿದೆ. ಬಾರ್ ಗಳಲ್ಲಿ ಕುಳಿತುಕೊಂಡು ಮದ್ಯಸೇವನೆ ಮಾಡುವುದಕ್ಕೆ ಅವಕಾಶವಿಲ್ಲದಿದ್ದರೂ, ಬಾರ್ ಗಳಲ್ಲೆ ಕುಳಿತುಕೊಂಡು ಮದ್ಯಪಾನ ಮಾಡುತ್ತಿರುತ್ತಾರೆ. ಸಾಕಷ್ಟು ಬಾರಿ ದೂರು ಕೊಟ್ಟರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಜಂಗಮಕೋಟೆ ಕ್ರಾಸ್ ನಲ್ಲಿ ಕೆಲವು ಅಂಗಡಿಗಳು, ಹೊಟೇಲ್ ಗಳಲ್ಲಿ ಇದುವರೆಗೂ ಪರವಾನಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಪಿಡಿಓ ಅವರೇ ಸಾರ್ವಜನಿಕರ ಅರ್ಜಿಗಳಿಗೆ ಹಿಂಬರಹ ಕೊಟ್ಟಿದ್ದಾರೆ. ಪುನಃ ಅವರೇ ನಾನು ಹಿಂಬರಹ ಕೊಟ್ಟಿಲ್ಲವೆಂದು ಉತ್ತರಿಸುತ್ತಾರೆ. ಗ್ರಾಮ ಪಂಚಾಯಿತಿಗೆ ಬರಬೇಕಾಗಿರುವ ತೆರಿಗೆ ಹಣಕ್ಕೆ ಕುತ್ತು ಬರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಬಾಕ್ಸ್
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಮತಿ ಕೊಟ್ಟಿರುವ ಲೇಔಟ್ ಗಳಲ್ಲಿ ಮೀಸಲಿಟ್ಟಿರುವ ಸಿ.ಎ ನಿವೇಶನಗಳು ಎಷ್ಟಿವೆ? ಯಾರಿಗೆ ಮಂಜೂರು ಮಾಡಿದ್ದಾರೆ. ಈ ನಿವೇಶನಗಳನ್ನು ಅಭಿವೃದ್ಧಿ ಪಡಿಸಿದ್ದಾರೆಯೇ? ಇಲ್ಲವೇ ಎನ್ನುವ ಬಗ್ಗೆ ಸಾರ್ವಜನಿಕರು ಮಾಹಿತಿ ಕೇಳಿದರೂ ಉತ್ತರ ಕೊಡುವುದಿಲ್ಲ ಎಂದು ಕೆರಳಿದ ಸಾರ್ವಜನಿಕರು, ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮಕೆಂಪಣ್ಣ, ಉಪಾಧ್ಯಕ್ಷೆ ಶ್ವೇತಾಹರೀಶ್, ಕಾರ್ಯದರ್ಶಿ ಮಹಾಲಿಂಗಪ್ಪ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಸೋಮಣ್ಣ, ಪಶುಪಾಲನಾ ಇಲಾಖೆಯ ಡಾ.ಮುನಿಶಾಮಿ, ಸದಸ್ಯರಾದ ರವಿಕುಮಾರ್, ಮಂಜುನಾಥ್, ಚನ್ನೇಗೌಡ, ಕೃಷ್ಣಪ್ಪ, ಸುಜಾತವೆಂಕಟೇಶ್, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.