--ಜಾಹೀರಾತು--

ಸಮೇತನಹಳ್ಳಿ ಕ್ಲಸ್ಟರ್ ಮಟ್ಟದ ಅಂಗನವಾಡಿಯವರಿಂದ ಅಡುಗೆ ಸ್ವರ್ದೆ ಕೊರಳೂರಿಗೆ ಮೊದಲ ಬಹುಮಾನ

On: December 4, 2025 8:40 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಸಮೇತನಹಳ್ಳಿ ಕ್ಲಸ್ಟರ್ ಮಟ್ಟದ ಅಂಗನವಾಡಿಯವರಿಂದ
ಅಡುಗೆ ಸ್ವರ್ದೆ ಕೊರಳೂರಿಗೆ ಮೊದಲ ಬಹುಮಾನ

ಹೊಸಕೋಟೆ: ಅಂಗನವಾಡಿ ಅಡುಗೆಯವರಲ್ಲಿರುವ ಕಲೆಯನ್ನು ಪ್ರದರ್ಶಿಸುವ ಹಾಗು ಮಕ್ಕಳಿಗೆ ಗುಣಮಟ್ಟ ಆಹಾರ ನೀಡುವ ಸಲುವಾಗಿ ಸಮೇತನಹಳ್ಳಿ ಕ್ಲಸ್ಟರ್ ಮಟ್ಟದ ಅಂಗನವಾಡಿಯವರಿಂದ
ಅಡುಗೆ ಸ್ವರ್ದೆಯನ್ನು ಏರ್ಪಡಿಸಿದ್ದೇವೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧೀಕಾರಿ ಮುನಿಯಪ್ಪನವರು ತಿಳಿಸಿದರು.

ತಾಲ್ಲೂಕಿನ ಅನುಗೊಂಡಹಳ್ಳಿ ಹೋಬಳಿಯ ಸಮೇತನಹಳ್ಳಿ ಕ್ಲಸ್ಟರ್ ಮಟ್ಟದ ಕೊರಳೂರು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಅಮ್ಮಿಕೊಂಡಿದ್ದ ಅಂಗನವಾಡಿಯವರ
ಅಡುಗೆ ಸ್ವರ್ದೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸರ್ಕಾರಿ ಶಲೆಯಲ್ಲಿ ಇಷ್ಟು ದೊಡ್ಡ ಮಟ್ಟದ ಮಕ್ಕಳನ್ನು ನೋಡಿ ಬಹಳ ಸಂತೋಷವಾಯಿತು, ಏಕೆಂದರೆ ಈಗ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಅವರ ಉದ್ದೇಶ ಮಕ್ಕಳು ಒಳ್ಳೆಯ ಆಪೀಸರ್‌ಗಳಾಗುತ್ತಾರೆ ಎಂದು, ಆದರೆ ಡಾ,ಬಿ.ಆರ್.ಅಂಬೇಡ್ಕರ, ವಿಶ್ವೇಶ್ವರಯ್ಯ, ಕುವೆಂಪು, ಬೇಂದ್ರೆ ಇಂತಹ ಮಹಾನ್ ನಾಯಕರು ಸರ್ಕಾರಿ ಶಾಲೆಯಲ್ಲೇ ಓದಿದವರು ಆದ್ದರಿಂದ ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೇಡ ಎಂದರು.

ಬಳಿಕ ಕೊಳರೂರು ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರು ಹಾಗು ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎ.ಎನ್. ತೇಜೋರಾಮ್ ಮಾತನಾಡಿ, ನಮ್ಮ ಶಾಲೆಯಲ್ಲಿ ಬಾಷ ಹಾಗು ಸಿಆರ್‌ಪಿಗಳ ನೇತೃತ್ವದಲ್ಲಿ ಅಂಗನವಾಡಿ ಅಡುಗೆಯವರಿಂದ ವಿವಿದ ಬಗೆ ಬಗೆಯ ಬಕ್ಷ ಬೋಜನಗಳನ್ನು ತಯಾರಿಸುವ ಸ್ವರ್ದೆಯನ್ನು ಏರ್ಪಡಿಸಿದ್ದೇವೆ, ಕಾರಣ ಅವರನ್ನು ಉತ್ತೇಜಿಸುವ ಹಾಗು ಮಕ್ಕಳಿಗೆ ಗುಣ ಮಟ್ಟದ ಆಹಾರ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಮೊದಲ ಬಹುಮಾನ , ದ್ವೀತಿಯ ಬಹುಮಾನ ಹಾಗು ತೃತೀಯ ಬಹುಮಾನಗಳನ್ನು ನೀಡಿದ್ದೇವೆ ಜೊತೆಗೆ ಕೊರಳೂರು ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಅದ್ಯಕ್ಷರು ಹಾಗು ಸದಸ್ಯರಾಧ ನಾರಾಯಣಸ್ವಾಮಿ, ಬಿಎಂಆಎಡಿಎ ಮಾಜಿ ಅದ್ಯಕ್ಷರಾದ ಶಂಕರೇಗೌಡ, ಶ್ರೀನಾಥ್, ಶಂಕರ್ ರವರು ಕಡೆಯಿಂದ ಎಲ್ಲಾ 13 ಶಾಲೆಗಳ ಸ್ವರ್ದಿಗಳಿಗೂ ಸಮಾದಾನಕರವಾಗಿ ಎರಡು ಎರಡು ಸಾವಿರನ್ನು ನೀಡಿ ಅಭಿನಂದಿಸಿದ್ದಾರೆ, ಅದೇ ರೀತಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯೆ ಶಾಲಿನಿಸುರೇಶ್ ಹಾಗು ಮಾಜಿ ಗ್ರಾಮ ಪಂಚಾಯ್ತಿ ಉಪಾದ್ಯಕ್ಷ ಮಂಜುನಾಥ್ ರವರಿಗೂ ನಮ್ಮ ಶಾಲೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು,

ಬಳಿಕ ಕೊರಳೂರು ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಅದ್ಯಕ್ಷರು ಹಾಗು ಸದಸ್ಯರಾಧ ನಾರಾಯಣಸ್ವಾಮಿ ರವರು ಮಾತನಾಡಿ, ನಮ್ಮ ಗ್ರಾಮದ ಈ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಮಾಡಲು ನನಗೆ ತಿಳಿಸಿದಾಗ ಬಹಳ ಸಂತೋಷವಾಯಿತು ಏಕೆಂದರೆ ನಾವೆಲ್ಲಾ ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಈಗ ನಾವೇ ಈ ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದೇವೆ ಆದ್ದರಿಂದ ನಮ್ಮ ಸಹಕಾರ ಈ ಶಾಳೆಗೆ ಯಾವಾಗಲೂ ಇದ್ದೇ ಇರುತ್ತದೆ ಎಂದರು.

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷ ಶ್ರೀನಿವಾಸ್ ರವರು ಮಾತನಾಡಿ, ಸಮೇತನಹಳ್ಳಿ ಕ್ಲಸ್ಟರ್ ಮಟ್ಟದಲ್ಲಿ ಬಹಳ ಸುಂದರವಾದ ಕಾರ್ಯಕ್ರಮವನ್ನು ಆಚರಣೆ ಮಾಡಿದ್ದು ಬಹಳ ರುಚಿಯಾಗಿ ಸುಚಿಯಾಗಿ ಅಡುಗೆ ಮಾಡಿದ್ದಾರೆ ಇಲ್ಲಿ ಯಾರಿಗು ಮೊದಲು ಯಾರಿಗೆ ದ್ವೀತಿಯ ಬಹುಮಾನ ನೀಡಬೇಕೋ ಎಂಬ ಗೊಂದಲ ಇದೆ ಅಷ್ಟು ಸೊಗಸಾಗಿ ಅಡುಗೆ ಮಾಡಿದ್ದಾರೆ ಆದರೂ ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಇದೇ ರೀತಿ ಅಡುಗೆ ಮಾಡಿ ಬಡಿಸಬೇಕು ಮಕ್ಕಳು ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕಾದರೆ ಅಡುಗೆಯವರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಆದ್ದರಿಂದ ಇದೇ ರೀತಿ ಎಲ್ಲಾ ಅಂಡನವಾಡಿಗಳಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಬೇಕು ಎಂದರು,

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅದ್ಯಕ್ಷರು ಹಾಗು ಸದಸ್ಯರಾಧ ನಾರಾಯಣಸ್ವಾಮಿ, ಬಿಎಂಆಎಡಿಎ ಮಾಜಿ ಅದ್ಯಕ್ಷರಾದ ಶಂಕರೇಗೌಡ, ಶ್ರೀನಾಥ್, ಶಂಕರ್. ಮಂಜುನಾಥ್, ಶಾಲಿನಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷ ಶ್ರೀನಿವಾಸ್ ಸುರೇಶ್,ಸರ್ಕಾರಿ ನೌಕರರ ಸಂಗದ ಅದ್ಯಕ್ಷ ಮುನಿಶಾಮಪ್ಪ, ನಿರ್ದೇಶಕ ದೇವರಾಜು, ಪ್ರದಾನ ಕಾರ್ಯದರ್ಶಿ ಜಿ.ನಾಗರಾಜು, ಸೇರಿದಂತೆ ಶಿಕ್ಷಕರು. ಶಿಕ್ಷಕಿಯರು ಹಾಜರಿದ್ದರು,