ಭಾಶೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ.. ಮೊದಲ ನಾಮಪತ್ರ ಸಲ್ಲಿಕೆ
ದೊಡ್ಡಬಳ್ಳಾಪುರ: ಡಿ. 21ರಂದು ನಡೆಯಲಿರುವ ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ ಗೊಂಡಿದ್ದು, ನಾಲ್ಕನೇ ವಾರ್ಡ್ ಅರಳ್ಳಿ ಗುಡ್ಡದಹಳ್ಳಿಯ ಸಾಮಾನ್ಯ ಕ್ಷೇತ್ರಕ್ಕೆ ಗುಡ್ಡದಹಳ್ಳಿ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಪ್ರಥಮವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಬಲಿಗರೊಂದಿಗೆ ಭಾಷೆಟ್ಟಿ ಹಳ್ಳಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ ಶ್ರೀನಿವಾಸ್ ಮಾತನಾಡಿ ನಾಲ್ಕನೇ ವಾರ್ಡ್ ಅರಳ್ಳಿ ಗುಡ್ಡದಹಳ್ಳಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಗ್ರಾಮಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಇಷ್ಟು ದಿನ ಜನಪ್ರತಿನಿದಿಗಳಿಲ್ಲದ ಕಾರಣ ಅರಳ್ಳಿ ಗುಡ್ಡದಹಳ್ಳಿ ವ್ಯಾಪ್ತಿ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ನಾನು ಈ ಭಾಗದಲ್ಲಿ ಚಿರಪರಿಚಿತನಾಗಿದ್ದು ಸ್ಥಳೀಯ ಜನರೇ ನನ್ನನ್ನು ಪ್ರೋತ್ಸಾಹಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ. ಜನ ಸಾಮಾನ್ಯರ ಅಪೇಕ್ಷೆಯಂತೆ ಪೂರಕವಾಗಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ವಾರ್ಡಿನೆಲ್ಲೆಡೆ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿ ಜಯಗಳಿಸುವ ವಿಶ್ವಾಸವಿದೆ ಎಂದು ಶ್ರೀನಿವಾಸ್ ಹೇಳಿದರು.





