--ಜಾಹೀರಾತು--

*_ಸಾಸಲು ಶ್ರೀಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅರ್ಚಕರು ಹುಂಡಿಯಲ್ಲಿ ಹಣ ಕದಿಯುತ್ತಿದ್ದಾರೆ ಎನ್ನುವುದು ಸುಳ್ಳಿನ ಕಂತೆಯಾಗಿದೆ. ಗ್ರಾ.ಪಂ.ಸದಸ್ಯ ಈರಾಜು ಸ್ಪಷ್ಟನೆ

On: December 4, 2025 8:50 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಸಾಸಲು ಶ್ರೀಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅರ್ಚಕರು ಹುಂಡಿಯಲ್ಲಿ ಹಣ ಕದಿಯುತ್ತಿದ್ದಾರೆ ಎನ್ನುವುದು ಸುಳ್ಳಿನ ಕಂತೆಯಾಗಿದೆ. ಗ್ರಾ.ಪಂ.ಸದಸ್ಯ ಈರಾಜು ಸ್ಪಷ್ಟನೆ

ಕೃಷ್ಣರಾಜಪೇಟೆ:ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಸುಪ್ರಸಿದ್ಧವಾಗಿರುವ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಶ್ರೀಸೋಮೇಶ್ವರ ಹಾಗೂ ಶ್ರೀಶಂಭುಲಿಂಗೇಶ್ವರ ದೇವಾಲಯಗಳ ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ನಿರ್ವಹಣೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಈರಾಜು ಸ್ಪಷ್ಟಪಡಿಸಿದರು. ಅವರು ಇಂದು ಸಾಸಲು ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ದೇವಾಲಯದ ಅರ್ಚಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಗ್ರಾಮದ ಮುಖಂಡ ಹಾಗೂ ಈ ಹಿಂದೆ ದೇವಾಲಯದ ನಿರ್ವಹಣೆ ಹಾಗೂ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದ ಮಹದೇವ ಎಂಬ ವ್ಯಕ್ತಿಯು ದೇವಾಲಯ ಹಾಗೂ ಅರ್ಚಕರ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳಿನ ಕಂತೆಗಳಾಗಿವೆ. ದೇವಾಲಯದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸಿರುವಂತೆ ಸುಳ್ಳು ಬಿಲ್ ಹಾಗೂ ಕಳ್ಳಬಿಲ್ ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿರುವ ಮಹದೇವ ಎಂಬ ವ್ಯಕ್ತಿಯು ಅರ್ಚಕರು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ನಡೆಸಿ ತಮಗೆ ಇಂತಿಷ್ಟು ಲಂಚದ ಹಣವನ್ನು ನೀಡದಿದ್ದರೆ ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ನಡೆಸಿ ನಿಮ್ಮ ಮಾನ ಮರ್ಯಾದೆಯನ್ನು ಹರಾಜು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಸಲು ಗ್ರಾಮದ ದೇವಾಲಯದ ಅಭಿವೃದ್ಧಿ ಹಾಗೂ ಕಾಂಪೌಂಡ್ ನಿರ್ಮಾಣಕ್ಕಾಗಿ 70 ಲಕ್ಷ ರೂಪಾಯಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ, ಅದನ್ನು ಮಂಜೂರು ಮಾಡಿಸಿ ಕೊಡುವಂತೆ ಮುಜರಾಯಿ ಇಲಾಖೆಯ ಮೂಲಕ ತಹಶೀಲ್ದಾರ್ ಉಪ ವಿಭಾಗಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದ ಮಹದೇವ ಅವರ ನೀಡಿರುವ ಅಂದಾಜು ಪಟ್ಟಿಯಲ್ಲಿರುವ ಎಲ್ಲಾ ಕಾಮಗಾರಿಗಳು ಕೇವಲ 25 ರಿಂದ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಡೆಸುವ ಕಾಮಗಾರಿಗಳಾಗಿದ್ದು ಹಣ ಲೂಟಿ ಹೊಡೆಯಲು ಸಿದ್ಧಪಡಿಸಿರುವ ಹೆಚ್ಚಿನ ಅನುದಾನಕ್ಕೆ ಮಂಜೂರಾತಿ ನೀಡಬಾರದು ಎಂದು ಗ್ರಾಮಸ್ಥರು ನೀಡಿದ್ದ ದೂರಿನ ಅನ್ವಯ ಅಂದಾಜು ಪಟ್ಟಿಗೆ ತಡೆ ನೀಡಿದ್ದ ತಹಶೀಲ್ದಾರ್ ಹಾಗೂ ವಿಷಯ ನಿರ್ವಾಹಕರ ವಿರುದ್ಧ ಮಹದೇವ ಅವರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದೇವಾಲಯದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಪಾರದರ್ಶಕವಾಗಿ ನಡೆಯುತ್ತಿದ್ದು , ಅಭಿವೃದ್ಧಿ ಕಾಮಗಾರಿಗೆ ಖರ್ಚು ಮಾಡಿರುವ ಹಣದ ಲೆಕ್ಕವನ್ನೆಲ್ಲ ನಿಖರವಾಗಿ ಇಡಲಾಗಿದೆ. ಸಾಸಲು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯನಾಗಿ ನಾನು ಆಯ್ಕೆಯಾದ ನಂತರ 2018 ರಿಂದ ಈವರೆಗೆ ನಡೆಸಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಪಾರದರ್ಶಕವಾಗಿ ಲೆಕ್ಕಾಚಾರವನ್ನು ಇಟ್ಟಿದ್ದೇನೆ. ಈ ಬಗ್ಗೆ ಮುಜರಾಯಿ ಇಲಾಖೆಗೆ ಹಾಗೂ ತಾಲೂಕು ಕಚೇರಿಗೆ ವಿವರವಾದ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ ಈರಾಜು, ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಕುಮಾರ್ ಹಾಗೂ ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ಪೂರ್ಣಿಮಾ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಮಹಾದೇವ ಅವರು ಅರ್ಚಕರು ಹಾಗೂ ದೇವಾಲಯಕ್ಕೆ ಬರುವ ಭಕ್ತಾದಿಗಳ ಮೇಲೆ ದಬ್ಬಾಳಿಕೆ ನಡೆಸುವುದು, ಪ್ರಾಮಾಣಿಕವಾಗಿ ಭಗವಂತನ ಸೇವೆ ಮಾಡಿ ಪೂಜೆ ಪುರಸ್ಕಾರಗಳನ್ನು ನಡೆಸುವ ಅರ್ಚಕರ ವಿರುದ್ಧ ಕಳ್ಳತನದ ಆರೋಪಗಳನ್ನು ಹೊರಿಸಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ನೈತಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗುವಂತೆ ಕಿರುಕುಳ ನೀಡುತ್ತಿರುವ ಮಹದೇವ ಒಬ್ಬ ಕಿಡಿಗೇಡಿಯಾಗಿದ್ದು, ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಾಲಯದಲ್ಲಿ ನಡೆದಿರುವ ಕಳಪೆ ಕೆಲಸಗಳು ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸದೆ ಸುಳ್ಳು ಬಿಲ್ಲನ್ನು ಪಡೆದುಕೊಂಡಿರುವ ಭೂಪನಾಗಿದ್ದಾನೆ. 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಗ್ರಾಮದ ಸಮುದಾಯ ಭವನದ ಅಭಿವೃದ್ಧಿ ಹಾಗೂ ಅಡುಗೆಮನೆ ನಿರ್ಮಾಣಕ್ಕೆ ಹಣ ಪಡೆದುಕೊಂಡು ಕೆಲಸವನ್ನು ಪೂರ್ಣಗೊಳಿಸದೆ ಮತ್ತೆ 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿರುವ ಮಹದೇವ ಅವರಿಗೆ ಮುಜರಾಯಿ ಇಲಾಖೆ ವತಿಯಿಂದ ಹಣ ಬಿಡುಗಡೆ ಮಾಡಿಕೊಡದ ಹಿನ್ನೆಲೆಯಲ್ಲಿ ಸಾಸಲು ದೇವಾಲಯದಲ್ಲಿ ಅವ್ಯವಹಾರ ನಡೆದಿದೆ ಭಾರಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡ ಈರಾಜು ಗಂಭೀರ ಆರೋಪ ಮಾಡಿದರು. ತಾಲೂಕಿನ ಶೀಳನೆರೆ ಗ್ರಾಮದ ಗುತ್ತಿಗೆದಾರ ಎಸ್‌.ಕೆ.ಪ್ರಕಾಶ ಅವರಿಗೆ ಕಾಮಗಾರಿ ನಡೆಸದೆ 98 ಸಾವಿರ ರೂಪಾಯಿಗಳ ಹಣ ಪಾವತಿ ಮಾಡಿಸಿರುವ ಮಹದೇವ ಅವರಿಗೆ ಭ್ರಷ್ಟಾಚಾರ ಹಾಗೂ ಕಳ್ಳತನದ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

_ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧವಾಗಿರುವ ಸಾಸಲಿನ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ಅವಳಿ ದೇವಾಲಯಗಳಿಗೆ ಕಾರ್ತಿಕ ಸೋಮವಾರದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದು ವಾರ್ಷಿಕ 50 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಆದಾಯವನ್ನು ತಂದು ಕೊಡುವ ಎ’ ಗ್ರೇಡ್ ದೇವಾಲಯ ವಾಗಿರುವ ಸಾಸಲು ಕ್ಷೇತ್ರದಲ್ಲಿ ಕಮಿಷನ್ ಹಣದ ಆಸೆಗಾಗಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಗುಣಮಟ್ಟದೊಂದಿಗೆ ನಡೆಯಲು ತೊಂದರೆ ನೀಡಿ ಅಧಿಕಾರಿಗಳು ಹಾಗೂ ಅರ್ಚಕರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಮಹದೇವ ವಿರುದ್ಧ ತಾಲೂಕು ದಂಡಾಧಿಕಾರಿಗಳು ಹಾಗೂ ಮುಜರಾಯಿ ಅಧಿಕಾರಿಗಳಾಗಿರುವ ತಹಶೀಲ್ದಾರರು ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಮಹದೇವ್ ನಡೆಸಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಕಾಮಗಾರಿಯನ್ನು ನಡೆಸದೆ ಬಿಲ್ ಪಡೆದುಕೊಂಡಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಈರಾಜು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಅರ್ಚಕರಾದ ಸೋಮೇಶ್, ಪುಟ್ಟರಾಜು, ಶಿವಮೂರ್ತಿ, ಬಿ.ಸಿ.ಕುಮಾರ್, ಬಸವರಾಜು ಶಂಭುಲಿಂಗಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು._

*_ವರದಿ: ಸಾಯಿಕುಮಾರ್. ಎನ್. ಕೆ,_*