ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ – ಎಚ್ ಎಮ್ ಸುಬ್ಬರಾಜು
ಊರ ಬಾಗಿಲು ಅಶ್ವತ್ ಕಟ್ಟೆಯ 48 ದಿನಗಳ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹೋಮ ಅವನ ಕಾರ್ಯಕ್ರಮ.
ತಾವರೆಕೆರೆ : ಹೊಸಕೋಟೆ ನಗರ ವ್ಯಾಪ್ತಿಯ ಪಾರ್ವತಿಪುರದ ಷರಾಬ್ ಮುನಿಶಾಮಯ್ಯ ಬಡಾವಣೆ ಗೌತಮ್ ಕಾಲೋನಿಯ ಮುಖ್ಯ ಭಾಗವಾದ ಹೊಸಕೋಟೆಯ ಊರು ಬಾಗಿಲಿನಲ್ಲಿ ಪುರಾತನ ಕಾಲದ ಅಶ್ವತ್ ಕಟ್ಟೆಯು ಶಾಸಕ ಶರತ್ ಬಚ್ಚೇಗೌಡ ರಿಂದ ಕಳೆದ 48 ದಿನಗಳ ಹಿಂದೆ ವಿಶೇಷ ಪೂಜೆ ಹಾಗೂ ಹೋಮ ಅವನಗಳಿಂದ ಅಶ್ವತ್ ಕಟ್ಟೆಯು ಪ್ರಾರಂಭಗೊಂಡಿತ್ತು . 48 ದಿನಗಳು ಕಾಲ ವಿಶೇಷ ಪೂಜೆ ಕಾರ್ಯಕ್ರಮಗಳು ನೆರವೇರಿಕೊಂಡು ಬಂದಿದ್ದು ಇಂದಿಗೆ ಪೂರ್ಣಗೊಂಡಿದೆ. ಪೂಜಾ ಕಾರ್ಯಕ್ರಮಗಳ ನೇತೃತ್ವವು ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯರಾದ ಎಚ್ ಎಮ್ ಸುಬ್ಬರಾಜು ಅವರ ನೇತೃತ್ವದಲ್ಲಿ ನೆರವೇರಿತು.
ನಂತರ ಮಾತನಾಡಿ ಶರತ್ ಬಚ್ಚೇಗೌಡರ ಅಮೃತ ಹಸ್ತದಿಂದ ಪ್ರಾರಂಭಗೊಂಡ ಅಶ್ವತ್ ಕಟ್ಟೆಯು ಇಂದಿಗೆ 48 ದಿನಗಳು ಪೂರ್ಣಗೊಂಡಿದೆ ಈ ವಿಶೇಷ ದಿನವಾದ ಇಂದು ವಿಶೇಷ ಅಲಂಕಾರ ಹಾಗೂ ಹೋಮ ಅವನ ಕಾರ್ಯಕ್ರಮ ಹಾಗೂ ಅಶ್ವತ್ ಕಟ್ಟೆಯ ಆವರಣದಲ್ಲಿ ಬನ್ನಿ ಗಿಡ ನೆಡುವ ಮೂಲಕ ಪೂಜಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಎಲ್ಲಾ ಮುಖಂಡರ ಸಮ್ಮುಖದಲ್ಲಿ ನೆರವೇರಿತು. ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಿರುವ ಅಶ್ವತ್ ಕಟ್ಟೆಗೆ ಶಾಸಕರಾದ ಶರತ್ ಬಚ್ಚೇಗೌಡರು ಹಾಗೂ ಸ್ಥಳೀಯರ ನೆರವಿನಿಂದ ಈ ಕಾರ್ಯ ನೆರವೇರಿದೆ. ಅಶ್ವಥ್ ಕಟ್ಟೆ ಎಂಬುದು ನಾರಾಯಣಸ್ವಾಮಿ ದೇವರು ನೆಲೆಸಿರುವ ಸ್ಥಳವೆಂಬುದು ಧಾರ್ಮಿಕ ನಂಬಿಕೆಯಾಗಿದೆ ವೈಜ್ಞಾನಿಕವಾಗಿ ಅರಳಿಮರ ಅಶ್ವತ್ಪುರುಷ ಆಮ್ಲಜನಕ ನೀಡಿದರೆ ಬೇವಿನ ಮರ ಗಾಳಿಯನ್ನು ಶುದ್ಧೀಕರಿಸುತ್ತದೆ ಆ ನಿಟ್ಟಿನಲ್ಲಿ ನಮ್ಮ ಹಿರಿಯರು ಪ್ರತಿ ಹಳ್ಳಿ ಪಟ್ಟಣ ನಗರಗಳಲ್ಲಿ ಅಶ್ವತ್ಕಟ್ಟೆ ನಿರ್ಮಿಸಿದ್ದು ಅವುಗಳ ಜೀವನ ಮಾಡಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಈ ರೀತಿಯ ಕಾರ್ಯಕ್ರಮಗಳು ಮಾಡುವುದರ ಮುಖ್ಯ ಉದ್ದೇಶ ಕಾಲಕಾಲಕ್ಕೆ ಮಳೆ ಬೆಳೆಯಾಗಿ ರೈತರ ಬದುಕು ಅಸನಾಗಬೇಕು ಹಾಗೂ ದೇಶ ಕಾಯುವ ಸೈನಿಕರಿಗೆ ಆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಬಿ.ವಿ ಬೈರೇಗೌಡರು, ಲಯನ್ ಸಿ ಜಯರಾಜ್, ಮಾಜಿ ಬಿ ಎಂ ಆರ್ ಡಿ ಅಧ್ಯಕ್ಷರಾದ ವಿಜಯಕುಮಾರ್, ಶಿವಾನಂದ್, ರವಿಕುಮಾರ್, ವಿಜಿ ಕುಮಾರ್ , ಶ್ರೀನಿವಾಸ್, ಆನಂದ್, ಟೌನ್ ಬ್ಯಾಂಕ್ ನಿರ್ದೇಶಕರಾದ ಮುರುಳಿ, ಓಂ ಶಕ್ತಿ ವೆಂಕಟೇಶ್, ಮಂಜುನಾಥ್, ಜನಿ, ನರಸಿಂಹಯ್ಯ ಹಾಗೂ ಪಾರ್ವತಿಪುರ ,ಗೌತಮ್ ಕಾಲೋನಿ ನಿವಾಸಿಗಳು ಮತ್ತು ಓಂ ಶಕ್ತಿ ಯುವಕರ ಬಳಗದ ಸದಸ್ಯರುಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





