ಐ.ಎ.ಎಸ್.ಅಧಿಕಾರಿ ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ದಿ.ಕೆ.ಶಿವರಾಂ ಹುಟ್ಟು ಹಬ್ಬದ ಅಂಗವಾಗಿ ಡಿ.ಪ್ರೇಮಕುಮಾರ್ ಹಾಗೂ ಊಚನಹಳ್ಳಿ ನಟರಾಜ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಣೆ.
ಕೆ.ಆರ್.ಪೇಟೆ,ಡಿ.15: ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ವತಿಯಿಂದ ಐ.ಎ.ಎಸ್.ಅಧಿಕಾರಿಯಾಗಿ ಜಿಲ್ಲಾಧಿಕಾರಿಯಾಗಿ ವಿವಿಧ ಕಡೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಒಳ್ಳೆಯ ಹೆಸರು ಪಡೆದಿದ್ದ ಕೆ.ಶಿವರಾಮ್ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.
ಛಲವಾದಿ ಮಹಾಸಭಾ ರಾಜ್ಯ ಸಮಿತಿ ಸದಸ್ಯರು ಹಾಗೂ ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್ ಮತ್ತು ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಅಧ್ಯಕ್ಷ ಊಚನಹಳ್ಳಿ ನಟರಾಜ್ ಅವರುಗಳ ನೇತೃತ್ವದಲ್ಲಿ ಪಟ್ಟಣದ ದುಂಡಶೆಟ್ಟಿ-ಲಕ್ಷö್ಮಮ್ಮ ಸ್ಮಾರಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದರು.
ಕೆ.ಶಿವರಾಂ ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಎಂ.ಎಸ್.ಐ.ಎಲ್. ಸಂಸ್ಥೆಯ ಎಂ.ಡಿಯಾಗಿ ಸೇವೆ ಸಲ್ಲಿಸಿದ್ದು ಬಡವರು, ದೀನ ದಲಿತರಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ವಿವಿಧ ಯೋಜನೆಗಳಲ್ಲಿ ಸುಮಾರು 1ಸಾವಿರಕ್ಕೂ ಅಧಿಕ ಆಶ್ರಯ ಮನೆಗಳನ್ನು ರಾಜೀವ್ ಗಾಂಧೀ ವಸತಿ ನಿಗಮದ ಮೂಲಕ ಕೊಡಿಸಿದ್ದಾರೆ. ಎಂ.ಎಸ್.ಐ.ಎಲ್ ಸಂಸ್ಥೆಯಲ್ಲಿ ಬಡ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಮೂಲಕ ಸಾವಿರಾರು ಮಂದಿಯ ಜೀವನಕ್ಕೆ ದಾರಿದೀಪವಾಗಿದ್ದಾರೆ. ಸಾವಿರಾರು ಮಂದಿ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ಉಚಿತ ಕೊಳವೆ ಬಾವಿ ಕೊರೆಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಕೇವಲ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡದೇ ಎಲ್ಲಾ ವರ್ಗದ ಜನರಿಗೂ ತಮ್ಮದೇ ಆದ ಜನ ಸೇವೆಯನ್ನು ಅಧಿಕಾರ ಇದ್ದಾಗ, ನಿವೃತ್ತಿಯ ನಂತರವೂ ಮಾಡಿದ್ದಾರೆ. ಜೊತೆಗೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಪರಿಕಲ್ಪನೆಯಿಂದ ಛಲವಾದಿ ಮಹಾಸಭಾ ಸಂಘಟನೆಯನ್ನು ಹುಟ್ಟು ಹಾಕಿ ದಲಿತ ಬಂಧುಗಳನ್ನು ಸಂಘಟಿಸಿ ಅವರ ಅಭಿವೃದ್ಧಿಗೂ ಶ್ರಮಿಸುತ್ತಿದ್ದರು. ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಕೆಲಸ ಮಾಡಿದ್ದು ಕೆ.ಶಿವರಾಮ್ ಅವರು ಶಾಸಕರಾಗಿ ಅಥವಾ ಸಂಸದರಾಗಿ ರಾಜ್ಯದ ಎಲ್ಲಾ ಜನತೆಯ ಅಭಿವೃದ್ಧಿಗೆ ಶ್ರಮಿಸುವ ಮಹದಾಸೆಯನ್ನು ಇಟ್ಟುಕೊಂಡಿದ್ದರು. ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಕೆ.ಶಿವರಾಂ ಅವರನ್ನು ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರು ಅಪಾರವಾಗಿ ಇಷ್ಟ ಪಡುತ್ತಿದ್ದರು ಏಕೆಂದರೆ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜಾತಿ, ಧರ್ಮ ಮೀರಿ ಒಳ್ಳೆಯ ಸೇವೆ ನೀಡಿದ್ದರಿಂಗಾಗಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇಂತಹ ಉತ್ತಮ ಸಂಘಟಕ, ಉತ್ತಮ ಸಮಾಜ ಸೇವಕ, ಉತ್ತಮ ಅಧಿಕಾರಿ, ಉತ್ತಮ ರಾಜಕಾರಣಿ ಇಷ್ಟು ಬೇಗ ನಮ್ಮನ್ನು ಅಗಲಿದ್ದು ಕನ್ನಡ ನಾಡಿಗೆ ಹಾಗೂ ಅಹಿಂದ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಛಲವಾದಿ ಮಹಾಸಭಾ ರಾಜ್ಯ ಸಮತಿ ಸದಸ್ಯರು ಹಾಗೂ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ವೈದ್ಯಾಧಿಕಾರಿ ಡಾ.ಶ್ರೀಕಾಂತ್, ಜಿ.ಪಂ.ಮಾಜಿ ಸದಸ್ಯ ರಾಮದಾಸ್, ಛಲವಾದಿ ಮಹಾಸಭಾ ಜಿಲ್ಲಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ಕಾರ್ಯದರ್ಶಿ ಜೈನ್ನಹಳ್ಳಿ ಹರೀಶ್, ಸಹಕಾರ್ಯದರ್ಶಿ ಹರಿಹರಪುರ ನರಸಿಂಹ, ಖಜಾಂಚಿ ವಿವೇಕ್, ಲಕ್ಷ್ಮೀಪುರ ರಂಗಸ್ವಾಮಿ, ತೆಂಡೇಕೆರೆ ನಿಂಗಯ್ಯ, ನಾಟನಹಳ್ಳಿ ಎನ್.ಜೆ.ಮಂಜು, ಚೌಡೇನಹಳ್ಳಿ ದೇವರಾಜು, ಬಿ.ಎಸ್.ಪಿ.ಗಂಗಾಧರ್, ಕಾಗೆಪುರ ರವಿ, ಅಕ್ಕಿಹೆಬ್ಬಾಳು ಗಣೇಶ್, ಕಬ್ಬಲಗೆರೆಪುರ ಪುಟ್ಟರಾಜು, ಹರಿಹರಪುರ ರಂಗರಾಮು, ನಗರೂರು ಮಂಜಯ್ಯ, ಲಿಂಗಾಪುರ ಬಸವರಾಜು, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಮಾತೃಭೂಮಿ ಅನಾಥಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.





