--ಜಾಹೀರಾತು--

ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕೆ.ಆರ್.ಪೇಟೆಯಲ್ಲಿ ಶ್ರದ್ದಾಂಜಲಿ ಸಭೆ.

On: December 15, 2025 8:24 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕೆ.ಆರ್.ಪೇಟೆಯಲ್ಲಿ ಶ್ರದ್ದಾಂಜಲಿ ಸಭೆ

ಕೆ.ಆರ್.ಪೇಟೆ,ಡಿ.15:ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಘಟಕದ ವತಿಯಿಂದ ಭಾನುವಾರ ರಾತ್ರಿ ನಿಧನರಾದ ದಾವಣಗೆರೆ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ದಾಂಜಲಿ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು.
ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಳೆದ ಆರು ದಶಕಗಳಿಂದ ತೊಡಗಿಸಿಕೊಂಡಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು 6ಭಾರಿ ಶಾಸಕರಾಗಿ, ಸಚಿವರಾಗಿ, ಒಮ್ಮೆ ಸಂಸದರಾಗಿ ವಿಧಾನಪರಿಷತ್ ಸದಸ್ಯರಾಗಿ, ನಗರಸಭೆ ಸದಸ್ಯರಾಗಿ, ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ಯಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಲಿಂಗಾಯಿತ ಸಮುದಾಯದ ಸಂಘಟನೆಯನ್ನು ಮಾಡುತ್ತಿದ್ದರು. ವೀರಶೈವ ಬೇರೆಯಲ್ಲ ಲಿಂಗಾಯಿತಿ ಬೇರೆಯಲ್ಲ ಎಂಬ ಧ್ಯೇಯದೊಂದಿಗೆ ಲಿಂಗಾಯಿತ ಒಳಪಂಗಡಗಳನ್ನು ಒಗ್ಗೂಡಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಸಾಮಾಜಿಕ ಕಳಕಳಿಯುಳ್ಳ ಇವರು ಸುಮಾರು 95ವರ್ಷಗಳ ಸಾರ್ಥಕ ಜೀವನ ನಡೆಸುವ ಮೂಲಕ ಒಬ್ಬ ರಾಜಕಾರಣ ಏನೆಲ್ಲ ಮಾಡುಬಹುದು ಎಂಬುದನ್ನು ದಾವಣಗೆರೆ ಜಿಲ್ಲೆಯ ಅಬಿವೃದ್ದಿಯನ್ನು ನೋಡಿದರೆ ತಿಳಿದು ಬರುತ್ತದೆ. ಕೈಗಾರಿಕೆಗಳನ್ನು ಸ್ಥಾಪಿಸಿ ಲಕ್ಷಾಂತೆರ ಮಂದಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಂಡಿದ್ದಾರೆ. ಕೃಷಿ ಅಭಿವೃದ್ಧಿಗೆ ಸಾಕಷ್ಟು ಅನುಧಾನ ಕೊಡಿಸುವ ಮೂಲಕ ಕೃಷಿ ಅಭಿವೃದ್ಧಿ ಕೈಜೋಡಿಸಿದ್ದಾರೆ. ಹೈಟೆಲ್ ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ಜನರಿಗೆ ಉತ್ತಮ ಆರೋಗ್ಯ ಸಿಗುವಂತೆ ಮಾಡಿದ್ದಾರೆ. ದಾವಣಗೆರೆ ಅಂದರೆ ಜವಳಿ ವ್ಯಾಪಾರದ ಕೇಂದ್ರ ಎಂದೇ ಪ್ರಖ್ಯಾತಿಯಾಗಿದ್ದು ಇದು ಶ್ಯಾಮನೂರು ಶಿವಶಂಕರಪ್ಪ ಅವರ ಹೋರಾಟದ ಪ್ರತಿಫಲವಾಗಿ ಸಾಧ್ಯವಾಗಿದೆ ಎಂದು ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಮುಖಂಡರು ಅಭಿಪ್ರಾಯಪಟ್ಟರು.
ತಾಲ್ಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರಾದ ತೋಟಪ್ಪಶೆಟ್ಟಿ, ಸಾಸಲು ಈರಪ್ಪ, ಬ್ಯಾಂಕ್ ಪರಮೇಶ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ತಾಲ್ಲೂಕು ವೀರಶೈವ ಮಹಾಸಭಾ ಮುಖಂಡರಾದ ಬ್ಯಾಂಕ್ ಪರಮೇಶ್ವರ್, ಮಹಾಸಭಾ ಉಪಾಧ್ಯಕ್ಷ ಎಂ.ಪಿ.ಪ್ರಕಾಶ್, ಎಸ್.ಇ.ಚನ್ನರಾಜು, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ವಕೀಲರಾದ ಪುರ ಪಿ.ಬಿ.ಮಂಜುನಾಥ್, ಪ್ರತಾಪ್, ಅಪ್ಪಾಜಿ, ನವೀನ್, ಶಿವಪ್ಪ, ಕುಮಾರ್, ರಾಕೇಶ್, ವಸಂತಪ್ಪ, ಕೇಬಲ್ ಕುಮಾರ್, ದಲಿತ ಮುಖಂಡರಾದ ಚೌಡೇನಹಳ್ಳಿ ದೇವರಾಜು, ಎನ್.ಜೆ.ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.