ರೈತರ ಭೂಮಿಗೆ ಸೂಕ್ತ ಧರ ಸಿಗದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ–ಎಂ. ಆನಂದ್
ದೊಡ್ಡಬಳ್ಳಾಪುರ : ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸೂಕ್ತ ಪರಿಹಾರ ನೀಡದ ಹೊರತು ಭೂಮಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಏಳು ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ನಮ್ಮ ಸೂಕ್ತ ದರ ನಿಗದಿ ಮಾಡಿದ ಪಕ್ಷದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆಯ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರ ಧರಣಿ ಕಳೆದ 69 ದಿನಗಳಿಂದ ನಡೆಯುತ್ತಿದ್ದು. ಈ ಕುರಿತು ಇಂದು ಧರಣಿ ಸ್ಥಳದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 4-5 ಬಾರಿ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿದ್ದೇವೆ. ಪ್ರತಿಭಾರಿಯೂ ಅಧಿಕಾರಿಗಳು ರೈತರ ಭೂಮಿಗೆ ಸೂಕ್ತ ಪರಿಹಾರ ದರ ನಿಗದಿಪಡಿಸುವಲ್ಲಿ ವಿಫಲರಾಗಿದ್ದು. ಇದು ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಅವಕಾಶವಾಗಿದೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಸೂಕ್ತ ಪರಿಹಾರ ಧನ (1:4) ನಿಗದಿಪಡಿಸದೆ ಇದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಸರ್ವಾನುಮತದಿಂದ ಬಹಿಷ್ಕರಿಸಲಾಗುವುದು ಎಂದರು.
ನಮ್ಮ ಗ್ರಾಮಗಳಲ್ಲಿ ಈಗಾಗಲೇ ಎತ್ತಿನಹೊಳೆ ಕಾಮಗಾರಿ ನೆಡೆಯುತ್ತಿದ್ದು. ಕಾಮಗಾರಿ ಪ್ರಕ್ರಿಯೆಗೆ ಒಳಪಟ್ಟ ರೈತರ ಭೂಮಿಗೆ 1:4ದರ ನಿಗದಿ ಪಡಿಸಿದ್ದಾರೆ. ಅಂತೆಯೇ ಕೆಐಎಡಿಬಿ ಸಹ ನಮ್ಮ ರೈತರ ಭೂಮಿಗೆ ಸೂಕ್ತ ದರ ನಿಗದಿ ಮಾಡಲಿ ಎಂದು ತಿಳಿಸಿದರು.
ರೈತ ಮುಖಂಡರಾದ ರಾಮಾಂಜಿನಪ್ಪ ಮಾತನಾಡಿ ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಗ್ರಾಮಗಳ ರೈತರ 971-00 ಎಕರೆ ಭೂಮಿಯ ಸ್ವಾದಿನಕ್ಕೆ ಕೆಐಎಡಿಬಿ ಮುಂದಾಗಿದ್ದು 2013 ರ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ, ರೈತರ ಪಾಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ ಕೆಐಎಡಿಬಿ ಅಧಿಕಾರಿಗಳಿಗೆ ಸೂಕ್ತ ದರ ನಿಗದಿ ಪಡಿಸಲು ಸಾಧ್ಯವಗುತ್ತಿಲ್ಲ. ಅಧಿಕಾರಿಗಳು ಕೆಲ ಏಜೇಂಟ್ ಗಳ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಕೆಲ ಎಜೇಂಟ್ ಗಳ ಸಮಸ್ಯೆಯಿಂದಾಗಿ 704 ರೈತರ ಜೀವನ ಹಾಳಾಗುತ್ತಿದೆ. ಸರ್ಕಾರ ರೈತರ ಪರ ನಿಲುವು ತೆಗೆದುಕೊಳ್ಳಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ ಕೆಐಎಡಿಬಿ ಅಧಿಕಾರಿಗಳು ಕೆಲ ಎಜೇಂಟ್ ಮೂಲಕ ರೈತರ ಭೂ ದಾಖಲಾತಿಗಳನ್ನು ಸಂಗ್ರಹ ಮಾಡಿಸಿದ್ದು. ಈ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆ ಅಂತಹ ರೈತರಿಗೆ ಸೂಕ್ತ ದರ ನಿಗದಿ ಮಾಡದೇ ಹಣ ಬಿಡುಗಡೆ ಮಾಡದಂತೆ ಒತ್ತಾಯ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಮಾರ್ಚ್ 7ರವರೆಗೂ ಗಡುವು ಪಡೆದಿದ್ದರೆ.ರೈತರ ಭೂಮಿಗೆ ದರ ನಿಗದಿ ಕುರಿತು ಇನ್ನೂ 7 ದಿನಗಳಲ್ಲಿ ಮತ್ತೊಂದು ಸಭೆ ಕರೆ ಕರೆದಿದ್ದು. ಅಧಿಕಾರಿಗಳು ರೈತರ ಪರ ಉತ್ತಮ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರಾದ
ನರಸಿಂಹ ಮೂರ್ತಿ, ರಾಮಾಂಜಿನಪ್ಪ, ವೆಂಕಟೇಶ್, ರಮೇಶ್, ಮಹೇಶ್,ನಾಗರಾಜು,ಕೃಷ್ಣಪ್ಪ ಕೋಡಿಹಳ್ಳಿ,ಬೈರೇಗೌಡ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.