ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವವನ್ನು ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ .ಡಿ.ಉಪ್ಪಾರ್ ಮಾತನಾಡುತ್ತಾ ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭುವಿಗೆ ತಂದ ಮಹಾತ್ಮರ ಸಮುದಾಯದಲ್ಲಿ ಜನಿಸಿದ ನಾವೇ ಧನ್ಯರು. ಭೂಮಿಯ ಮೇಲಿನ ಕೋಟ್ಯಾಂತರ ಜೀವರಾಶಿಗಳಿಗೆ ಅತ್ಯಗತ್ಯತೆಯ ಜೀವಜಲ ತಂದುಕೊಟ್ಟಂತಹ ಮಹರ್ಷಿ ಶ್ರೀ ಭಗೀರಥರ ಜಯಂತೋತ್ಸವನ್ನು ರಾಜ್ಯಾದ್ಯಂತ ಆಚರಿಸುವ ಭಾಗ್ಯ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಚರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ತಾಲ್ಲೂಕು ದಂಡಾಧಿಕಾರಿ ವಿಧ್ಯಾವಿಭಾ ರಾಥೋಡ್ ಭಗೀರಥ ಉಪ್ಪಾರ ಸಮುದಾಯ ದವರಿಗೆ ಶುಭಾಶಯಕೋರುತ್ತಾ,ರಾಜ್ಯಾದ್ಯಂತ ನೆಲೆಸಿರುವ ಉಪ್ಪಾರ ಸಮುದಾಯ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರೆಯ ಬೇಕಿದೆ ಪೋಷಕರು ಮಕ್ಕಳಿಗೆ ಉನ್ನದ ಶಿಕ್ಷಣ ಕೊಡಿಸುವುದರೊಂದಿಗೆ ಸರ್ಕಾರಿ ಅಧಿಕಾರಿ ಗಳನ್ನಾಗಿ ರೂಪಿಸಿ ಸಮಾಜದಲ್ಲಿ ಗೌರವವನ್ನು ಪಡೆದು ಸಮುದಾಯದ ಏಲ್ಗೆಗೆ ಮುಂದಾಗ ಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ವಿಧ್ಯಾವಿಭಾ ರಾಥೋಡ್, ಬೆಂ‌ ಗ್ರಾ ಜಿಲ್ಲಾ ಭಗೀರಥ ಸಂಘದ ಅಧ್ಯಕ್ಷರು ಚಂದ್ರಶೇಖರ್. ಡಿ.ಉಪ್ಪಾರ್,ಜಿಲ್ಲಾ ಯುವ ಘಟಕ ಅಧ್ಯಕ್ಷ ಕೆ.ಪ್ರಕಾಶ್ ,ತಾಲ್ಲೂಕು ಅಧ್ಯಕ್ಷ ಪಿ.ಎಂ.ಪ್ರಕಾಶ್ ಕುಮಾರ್, ಉಪಾಧ್ಯಕ್ಷರಾದ ಲಕ್ಷಿನಾರಾಯಣ್, ಶ್ರೀನಿವಾಸ ಬಾಬು,ಚಂದ್ರಶೇಖರ್,ಕೃಷ್ಣ ಮೂರ್ತಿ,ರಾಮರಾಜ್,ಪಂಚಾಯ್ತಿ ಸದಸ್ಯರಾದ ಉಮೇಶ್,ಸುರೇಶ್ ಸೇರಿದಂತೆ ಸಮುದಾಯದ ಮುಖಂಡರು ಅನೇಕೆಉ ಹಾಜರಿದ್ದರು.