ಹಾವು ಕಡಿದು ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಶಾಸಕ ಧೀರಜ್ ಮುನಿರಾಜು ಆರ್ಥಿಕ ನೆರವು

ದೊಡ್ಡಬಳ್ಳಾಪುರ:ದೊಡ್ಡಬೆಳವಂಗಲ ಹೋಬಳಿಯ ಐಯ್ಯನಹಳ್ಳಿ ಗ್ರಾಮದ ದೇವರಾಜ ಎಂಬ ಬಾಲಕನು ಪುರುಷನಹಳ್ಳಿ ಶ್ರೀ ಸಿದ್ಧಗಂಗಾ ಮಠದ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಹಾವು ಕಡಿತದಿಂದ ಆಕಸ್ಮಿಕವಾಗಿ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ದೊಡ್ಡಬಳ್ಳಾಪುರದ ಶಾಸಕ ದೀರಜ್ ಮುನಿರಾಜ್ ರವರಿಂದ ಮೂರು ಲಕ್ಷದ ಚೆಕ್ ನೀಡಿ ದೇವರು ನಿಮ್ಮ ಕುಟುಂಬಕ್ಕೆ ದು:ಖ ಭರಿಸುವಂತೆ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು.

ಶ್ರೀ ಸಿದ್ದಗಂಗಾ ಮಠದವರು ಮೃತ ಬಾಲಕನ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದನ್ನು ಅರಿತ ಶಾಸಕರು ಸಿದ್ದಗಂಗಾ ಮಠದ ಹಣವು ಮಠದ ವಿವಿಧ ಕಾರ್ಯಗಳಿಗೆ ವಿನಿಯೋಗ ವಾಗಲಿ
ಎಂಬ ಆಶಯದಿಂದ ಮಠದ ಪರವಾಗಿ ಶಾಸಕರು ಮೂರು ಲಕ್ಷ ಹಣ ನೀಡಿದರು ಹಾಗು ಮೃತ ಬಾಲಕನ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ ಸೂರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ಕೇಶವಮೂರ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಮ್ಯಾನೇಜರ್ ಜಗದೀಶ್ ಸೂಪರ್ ವೈಜರ್ ವನ್ನೇಶ್ ಕುಮಾರ್ ದೊಡ್ಡಬೆಳವಂಗಲ ಗ್ರಾಪಂ ಅಧ್ಯಕ್ಷ ಮಂಜುನಾಥ್ ,ಅಂಚೆಮನೆ ಪ್ರಕಾಶ್ ಲಲಿತಮ್ಮ, ಹೈನಹಳ್ಳಿ ಗ್ರಾಮದ ಮುಖಂಡ ರಾಮಣ್ಣ , ಗ್ರಾಮ. ಪಂಚಾಯ್ತಿ ಸದಸ್ಯ ನರಸಿಂಹಯ್ಯ ಹೈನಹಳ್ಳಿ ಗ್ರಾಮಸ್ಥರಾದ ನಾಗರಾಜು , ನವೀನ್, ಅಂಜನ್ ಕುಮಾರ್, ಹಾಜರಿದ್ದರು‌.