ಯಳಂದೂರು: ನಡೆಯಲು ಯೋಗ್ಯವಲ್ಲದ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿ ಊತಿಕೊಂಡು ಎರಡು ಗಂಟೆಗಳ ಕಾಲ ರಸ್ತೆಯ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಕಬ್ಬುತುಂಬಿದ ಲಾರಿ ಹಾಗೂ ಲಗೇಜ್ ತುಂಬಿದ ಆಟೋ ವಾಹನಗಳು ರಸ್ತೆಯ ಗುಂಡಿಯಲ್ಲಿ ಊತುಕೊಂಡಿರುವ ಘಟನೆ ಕಂಡುಬಂದಿದ್ದು ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಕೊಮಾರನಪುರ ಗ್ರಾಮದಿಂದ ಯಳಂದೂರು ಪಟ್ಟಣಕ್ಕೆ ಹಾದುಹೋಗಿರುವ ಗ್ರಾಮದ ಮುಖ್ಯರಸ್ತೆಯು ತುಂಬಾ ಹಾಳಾಗಿ ಹೋಗಿದೆ . ರಸ್ತೆಯಲ್ಲಿ ಬಾರಿ ಬಾರಿ ಗುಂಡಿಗಳೆ ಸೃಷ್ಠಿಯಾಗಿದ್ದು ನಡೆದುಕೊಂಡು ಓಡಾಡು ಕಷ್ಟವಾಗಿರುವ ಸನ್ನಿವೇಶ ನಿರ್ಮಾಣವಾಗಿದ್ದು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯು ಸುಮಾರು ಆರುವರ್ಷಗಳಿಂದಲೂ ಹಾಳಾಗಿದ್ದು ಯಾವೋಬ್ಬ ಜನಪ್ರತಿನಧಿಯು ಇತ್ತ ಗಮನಹರಿಸದೆ ನಿರ್ಲಕ್ಷ್ಯ ಮಾಡಿರುವುದೇ ಈ ರಸ್ತೆ ತುಂಬಾ ಹಾಳಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಈ ರಸ್ತೆಯನ್ನು ದುರಸ್ಥಿ ಮಾಡಿಸುತ್ತೇವೆ ಎಂದು ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ ಜನಪ್ರತಿನಿಧಿಗಳು ಆರೇಳು ವರ್ಷಗಳು ಕಳೆದರು ಇತ್ತ ಗಮನಹರಿಸದೆ ಕೇವಲ ಚುನಾವಣೆಯಲ್ಲಿ ಮಾತ್ರ ನಮ್ಮ ಗ್ರಾಮಕ್ಕೆ ಬರುತ್ತಾರೆ ಇಂತಹ ಜನಪ್ರತಿನಿಧಿಗಳಿಗೆ ದಿಕ್ಕಾರ ಎಂದು ಗ್ರಾಮಸ್ಥರ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಕೊಮಾರನಪುರ ಗ್ರಾಮದಿಂದ ಕೃಷ್ಣಾಪುರ ಗ್ರಾಮದವರೆಗಿರುವ ರಸ್ತೆಯು ದೊಡ್ಡದೊಡ್ಡ ಗುಂಡಿಗಳೇ ನಿರ್ಮಾಣವಾಗಿದ್ದು ನಾವು ಓಡಾಡುವುದಾದರು ಹೇಗೆ. ಈ ರಸ್ತೆಯ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಣ್ಣಿಲ್ಲವೇ ಇವರು ನಿಜವಾಗಿಯು ಜನಸೇವೆ ಮಾಡೋಕೆ ಬಂದಿದ್ದಾರಾ? ಎಂಬ ಅನುಮಾನ ಕಾಡುತ್ತದೆ ಎಂದು ಗ್ರಾಮಸ್ಥರಾದ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ನಮ್ಮೂರ ರಸ್ತೆಯು ತೀರ ಹದಗೆಟ್ಟಿದ್ದು ಇದೇ ರಸ್ತೆಯಲ್ಲಿ ನಮ್ಮೂರಿನಿಂದ ಯಳಂದೂರಿಗೆ ತೆರಳಬೇಕು. ಈ ರಸ್ತೆಯಲ್ಲಿ ನಾವು ಆಟೋ ಓಡಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿದೆ. ಈಗಾಗಲೇ ನಮ್ಮ ಶಾಸಕರಿಗೆ ಮೂರು ಭಾರಿ ಮನವಿ ಪತ್ರ ಸಲ್ಲಿಸಿದ್ದರು ನಮ್ಮ ಮನವಿಗೆ ಸ್ಪಂದಿಸಲೆ ಇಲ್ಲಾ . ಜನರ ಕಷ್ಟಗಳಿಗೆ ಸ್ಪಂದಿಸದ ಇಂತಹ ಶಾಸಕರು ನಮಗೆ ಬೇಕಾ? ಎಂದು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ನಾನೊಬ್ಬ ಟ್ರಾಕ್ಟರ್ ಡ್ರೈವರ್ ನಮ್ಮೂರು ರಸ್ತೆಯಲ್ಲಿ ವಾಹನವನ್ನು ಓಡಿಸಲು ಯೋಗ್ಯವಲ್ಲದ ರಸ್ತೆಯಾಗಿದೆ. ಕೇವಲ ಚುನಾವಣೆಗಳಲ್ಲಿ ಮಾತ್ರ ಬಂದು ಆಶ್ವಾಸನೆ ನೀಡುತ್ತಾರೆ ಗೆದ್ದಮೇಲೆ ಇತ್ತಕಡೆ ತಿರುಗುನೋಡುವುದಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ವರದಿ ಆರ್ ಉಮೇಶ್ ಮಲಾರಪಾಳ್ಯ