ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ : ಶುಭ ಕೋರಿದ ಗಣ್ಯ ವರ್ಗ
ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿ ಯು ದಾನಿಗಳ ನೆರವಿನಿಂದ ಶ್ರೀ ಮುನೇಶ್ವರ ಸ್ವಾಮಿ ದೇವಾಲಯವನ್ನು ನಿರ್ಮಿಸಿ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತ 1675ದಿನಗಳಿಂದ ನಿರಂತರ ಅನ್ನ ದಾಸೋಹ ಕಾರ್ಯಕ್ರಮವನ್ನು ಮಲ್ಲೇಶ್ ನೆಡೆಸಿಕೊಂಡು ಬರುತ್ತಿದ್ದು. ಅವರ ಸೇವೆ ಕೇವಲ ಅನ್ನದಾಸೋಹಕ್ಕೆ ಸೀಮಿತವಾಗದೆ ನೂತನ ದೇವಾಲಯಕ್ಕೆ ಮುಂದಾಗಿದ್ದಾರೆ. ಹೌದು ಪಂಚಾಯತಿ ವ್ಯಾಪ್ತಿಯಲಿದ್ದ ಶ್ರೀ ಮುನೇಶ್ವರ ದೇವರ ಹೇಳೆಯ ದೇವಾಲಯವನ್ನು ಹೊಸದಾಗಿ ನಿರ್ಮಿಸಿ ನೂತನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯವನ್ನು ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಅದ್ದೂರಿಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಮಾತನಾಡಿ ಅನ್ನದಾಸೋಹ ಮಾಡುವುದು ಸಾಮಾನ್ಯವಾದ ವಿಷಯವಲ್ಲ, ಇಂತಹ ಕಾರ್ಯವನ್ನು ಮಲ್ಲೇಶ್ 1675 ದಿನಗಳಿಂದ ನಿರಂತರ ಅನ್ನದಾಸೋಹ ಮಾಡುತ್ತಿದ್ದು ಇಂದು ಮುನೇಶ್ವರ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಲಾಗುತ್ತಿದ್ದು ಮಲ್ಲೇಶ್ ರವರಿಗೆ ಶುಭವಾಗಲಿ ಮಲ್ಲೇಶ್ ರವರು ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು.
ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ ನಾಗರಾಜು ಮಾತನಾಡಿ ಮಲ್ಲೇಶ್ ಸದಾ ದಾನಿಗಳ ನೆರವಿನಿಂದ ನೂರಾರು ವೃದ್ಧರಿಗೆ, ಕಡುಬಡವರಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ, ಒಳ್ಳೆ ಕಾರ್ಯಗಳಿಗೆ ವಿಘ್ನಗಳು ಹೆಚ್ಚು ಛಲ ಬಿಡದೆ ಸದಾ ದಾನಿಗಳ ಹುಡುಕಾಟದಲ್ಲಿ ತೊಡಗುವ ಮೂಲಕ ಸೇವೆಯನ್ನು ಸಲ್ಲಿಸುತ್ತಿರುವ ಮಲ್ಲೇಶ್ ರವರಿಗೆ ಶುಭವಾಗಲಿ, ಇಂದು ಮತ್ತೊಂದು ಕಾರ್ಯಕ್ಕೆ ಮುಂದಾಗಿದ್ದು ದೇವರು ಒಳ್ಳೇದು ಮಾಡಲಿ ಅವರ ಸಮಾಜ ಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇದ್ದೆ ಇರುತ್ತದೆ ಎಂದರು.
ನಗರಸಭಾ ಉಪಾಧ್ಯಕ್ಷ ಎಂ. ಮಲ್ಲೇಶ್ ಮಾತನಾಡಿ ನೂರಾರು ವೃದ್ಧರಿಗೆ, ಬಡವರಿಗೆ, ಶಾಲಾ ಮಕ್ಕಳಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಮಲ್ಲೇಶ್ ಇಂದು ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ಕೆ ಮುಂದಾಗಿದ್ದಾರೆ. ದಾನಿಗಳ ನೆರವಿನಿಂದ ಇಂತಹ ದೊಡ್ಡ ಕಾರ್ಯಕ್ರಮ ರೂಪಿಸಿದ್ದು, ಸಮಾಜಕ್ಕೆ ಮಾದರಿಯಾಗಿದೆ, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಚಿತ್ರನಟ ಶಿವಕುಮಾರ್ ಆರಾಧ್ಯ,
ಸಮಾಜ ಸೇವಕ ಸೆಲ್ವಂ,ಜೆ.ಎಸ್.ನಾಗಭೂಷಣ,
ಪ್ರೊಫೆಸರ್ ಸುನಿಲ್, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸುಬ್ರಮಣಿ, ಮಾಹಿತಿ ಹಕ್ಕು ಹನುಮಂತ ರಾಯಪ್ಪ,ಮಾಜಿ ನಗರಸಭಾ ಸದಸ್ಯ ಪಿ.ಸಿ ಲಕ್ಷ್ಮಿ ನಾರಾಯಣ್,ಕಿರುತೆರೆ ಕಲಾವಿದರು,
ಗಾಯಕ ಗಾಯಕಿಯರು, ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.