ಬಿಜೆಪಿ ಕಾಂಗ್ರೆಸ್ ಕಿತ್ತಾಟದಿಂದ ದೊಡ್ಡತುಮಕೂರು ವಿ. ಎಸ್. ಎಸ್. ಎನ್ ಚುನಾವಣಾ ಮತ ಎಣಿಕೆ ಮುಂದೂಡಿಕೆ
ದೊಡ್ಡಬಳ್ಳಾಪುರ:ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣಾ ಫಲಿತಾಂಶಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳಿಂದ ತೀವ್ರ ಗುದ್ದಾಟ ನಡೆದವು.
ಫಳಿತಾಂಶ ಹೊರ ಬಿಡಬಾರದು ಎಂದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದರೆ. ಇಂದೇ ಫಲಿತಾಂಶ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಫಲಿತಾಂಶ ಪ್ರಕಟಿಸುವಂತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಪಟ್ಟು ಹಿಡಿದಿದ್ದರು.
ಬಿಜೆಪಿ ಕಾರ್ಯಕರ್ತರು ಸಂಘದ ಕಚೇರಿ ಮುಂದೆ ಕುಳಿತು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಶಾಸಕ ಧೀರಜ್ ಮುನಿರಾಜ್ ವಿರುದ್ಧ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ
ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘವನ್ನು ಉಳಿಸುವ ಸಲುವಾಗಿ ಚುನಾವಣೆ ನಡೆಸಬಾರದು ಎಂದು ಸಾಕಷ್ಟು ಪ್ರಯತ್ನ ಪಟ್ಟಿದ್ದೇವು. ಆದರೆ, ತಾಲೂಕಿನ ಹಾಲಿ ಶಾಸಕರ ದುರಾಹಂಕಾರದ ವರ್ತನೆ, ಎಲ್ಲಾ ಕಡೆ ನನ್ನದೆ ನಡೆಯಬೇಕು ಎಂಬ ಸರ್ವಾಧಿಕಾರತ್ವದ ಧೋರಣೆಯಿಂದಾಗಿ ಇಲ್ಲಿ ಚುನಾವಣೆ ನಡೆಯುವ ಹಾಗೇ ಆಗಿದೆ. ಈಗಾಗಲೇ ಈ ಸೊಸೈಟಿ 3 ಲಕ್ಷ ನಷ್ಟದಲ್ಲಿದೆ. ಟಿ.ವೆಂಕಟರಮಣಯ್ಯ ಶಾಸಕರಾಗಿದ್ದಾಗ ಹಾಗೂ ಚುಂಚೇಗೌಡರು ಬಿಡಿಸಿಸಿ ನಿರ್ದೇಶಕರಾಗಿದ್ದಾಗ ಮುಚ್ಚುವ ಹಂತದಲ್ಲಿದ್ದ ಸುಮಾರು 8 ಸೊಸೈಟಿಗಳನ್ನು ಪುನಃಶ್ಚೇತನಗೊಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಹಕಾರ ಇರಬೇಕು ಎಂಬ ಉದ್ದೇಶದಿಂದ ಒಮ್ಮತದಿಂದ ಮೂರು ಪಕ್ಷಗಳಿಗೂ ನಾಲ್ಕು ಸ್ಥಾನಗಳನ್ನು ನೀಡುವ ಅಭಿಪ್ರಾಯ ಇತ್ತು. ಆದರೆ, ಹಾಲಿ ಶಾಸಕರ ದುರಾಸೆ ಹಾಗೂ ದುರಾಡಳಿತದ ಪರಮಾವಧಿ ಕಾರಣದಿಂದ ಚುನಾವಣೆ ನಡೆಯುವ ಹಾಗೇ ಆಗಿದೆ. ತಾಲೂಕಿನಲ್ಲಿ ಹಿಟ್ಲರ್ ಆಡಳಿತ ನಡೆಸಲು ಇವರು ಬಂದಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಇಂತಹ ಸನ್ನಿವೇಶ ಬಂದಾಗ ಯಾವ ರೀತಿ ವಾತಾವರಣ ತಿಳಿಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲ’ ಎಂದು ಶಾಸಕ ಧೀರಜ್ ಮುನಿರಾಜ್ ವಿರುದ್ಧ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಗುಡುಗಿದ್ದಾರೆ
‘ಮೊನ್ನೆ ಏನೋ ಪ್ರೆಸ್ ಅಲ್ಲಿ ಮಾತಾಡಿದ್ದೀಯಲ್ಲಪ್ಪಾ… ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಂತಾ…ನಿನ್ನ ಯೋಗ್ಯತೆಗೆ ಒಂದು ಹೊಸ ಸೊಸೈಟಿ ತಗೋಬಾ..ಐದು ವರ್ಷದ ಅಧಿಕಾರಾವಧಿಯಲ್ಲಿ ಒಂದು ಹೊಸ ಸೊಸೈಟಿ ತಾಲೂಕಿಗೆ ತಂದುಕೊಡು…ಇವತ್ತು ರಾಮಾಯಣ ಕ್ರಿಯೇಟ್ ಮಾಡೊದಕ್ಕೆ ಬಂದಿದ್ದೀಯ ಅಲ್ವಾ.. ಇವತ್ತಿಂದ ಶುರುವಾಗತ್ತದೆ ನೋಡಿಕೊ… ನಮ್ಮ ಮಧುರೆ ಹೋಬಳಿಯಲ್ಲಿ ಹೇಗೆ ಆಟವಾಡುತ್ತಿಯಾ… ಇನ್ನು ಮುಂದೆ ಡೈರಿ ಚುನಾವಣೆಗೂ ನೀನು ಬಂದು ಕುತ್ಕೋಬೇಕು…. ಆ ರೀತಿಯ ಪರಿಸ್ಥಿತಿ ನೀನೇ ತಂದುಕೊಳ್ಳುತ್ತಿದ್ದೀಯಾ…ನೀನು ಜನಗಳಿಗೆ ನ್ಯಾಯ ಕೊಡಿಸುವುದು ಬೇಡ, ಶೋ ತೋರಿಸಬೇಕಷ್ಟೆ, ನೀನು ಶೋಗಷ್ಟೇ ನಮ್ಮ ತಾಲೂಕಿಗೆ ಬಂದಿರೋದು… ಯಾವೋ ಎರಡು ಪುಡಿಗಾಸು ಇಟ್ಟಿಕೊಂಡು ಬಂದಿದ್ದೀಯಾ..ಅದು ಎಷ್ಟು ದಿನ ನಡೀತದೋ ನಡೀಲಿ’ ಎಂದು ಕಿಡಿಕಾರಿದ್ದಾರೆ.
‘ಹೊಸ ವೋಟ್ ಗೆ ಅಧಿಕಾರ ಬಂದ ಮೇಲೆ ಬರೀ 185 ವೋಟ್ ಎಣಿಸಿ ಏನು ಪ್ರಯೋಜನ. ಅದರಲ್ಲೇನು ಉಪ್ಪು ಹುಳಿ ಖಾರ ಹಾಕೋದು. ಆಗಲಿ ಬಿಡಿ ಕೋರ್ಟ್ ಆದೇಶ ಬಂದ ಮೇಲೆ ಎಲ್ಲಾ ಬಂದೇ ಬರುತ್ತಲ್ಲಾ.. ಅಲ್ಲಿನವರೆಗೆ ತಾಳ್ಮೆಯಿಂದ ಇರೊದಕ್ಕೆ ಆಗಲ್ಲ ಇವರಿಗೆ. ಕೋರ್ಟ್ ಆದೇಶ ಬರುವವರೆಗೂ ಚುನಾವಣಾ ಅಧಿಕಾರಿಗಳು ಏನೂ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿನವರೆಗೂ ಮತ ಪೆಟ್ಟಿಗೆ ಸ್ಟ್ರಾಂಗ್ ರೂಮಿನಲ್ಲಿರುತ್ತದೆ. ಏನು ಅಷ್ಟೋಂದು ಆತುರ ನಿಮಗೆ ಅದಕ್ಕೆ ಇಲ್ಲಿಗೆ ಬಂದು ನೀನು ಕುಳಿತಿದ್ದೀಯಾ…? ಮೊದಲು ಇವೆಲ್ಲಾ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡು ಅದಕ್ಕೆ ನಾವು ಸಹಕಾರ ಕೊಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
‘ನಮ್ಮ ಜೆಡಿಎಸ್ ಪಾರ್ಟಿಯನ್ನ ಒಡೆಯುವುದಕ್ಕೆ ಬಂದಿದ್ದೀಯಾ… ? ನಾವು ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಈ ಸೊಸೈಟಿ ಚುನಾವಣೆ ಮಾಡಿರುವುದು. ನಾವು ಒಳ್ಳೆ ಕೆಲಸಗಳಿಗೆ ಯಾರು ಸಹಕಾರ ಕೊಡ್ತಾತರೋ ಅಂತವರ ಜೊತೆ ಕೈಜೋಡಿಸುವುದು ನಿಜ. ನಿಮ್ಮ ಜೊತೆ ಯಾವುದೇ ಮುಲಾಜಿಗೆ ಒಳಗಾಗದೇ ಕೈ ಜೋಡಿಸುವುದಿಲ್ಲ. ನಿಮಗೆ ತಕ್ಕ ಪಾಠವನ್ನು ನಮ್ಮ ಜೆಡಿಎಸ್ ಕಾರ್ಯಕರ್ತರೇ ಕಲಿಸುತ್ತಾರೆ….ಮೊನ್ನೆ ನಗರಸಭೆಯಲ್ಲಿ ಆಡಿದ ಆಟವನ್ನು ಇಲ್ಲಿಯೂ ಆಡೋದಕ್ಕೆ ಬಂದಿದ್ದೀಯಾ ಇಲ್ಲೂ ಸಹ ನಮ್ಮ ಜೆಡಿಎಸ್ ಕಾರ್ಯಕರ್ತರನ್ನ ಒಡೆಯುವುದಕ್ಕೆ ಬಂದಿದ್ದೀಯಾ ಇದನ್ನೇ ನೀನು ಮುಂದುವರಿಸಿದರೆ ನಾವು ಬೇರೆ ರೀತಿನೇ ತೋರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ
ಈ ದುರಾಡಳಿತವನ್ನ ತಾಲೂಕಿನ ಜನತೆ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ
ಕೇಂದ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಟ್ಟೊಟ್ಟಿಗೆ ರಾಜಕಾರಣ ಮಾಡುತ್ತಿದ್ದಾರೆ… ಆದರೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶಾಸಕ ಧೀರಜ್ ಮುನಿರಾಜ್ ವಿರುದ್ಧ ಜೆಡಿಎಸ್ ರಾ.ಪ್ರ.ಕಾ ಹರೀಶ್ ಗೌಡರು ರಾಜಕೀಯವಾಗಿ ಗುದ್ದಾಟ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ