ಪರಿಸರ ಸಂರಕ್ಷಿಸೋಣಾ ಗಣಪನ ಪೂಜಿಸೋಣ ಮಹರ್ಷಿ ಡಾ.ಆನಂದ ಗುರೂಜಿ
ದೇವನಹಳ್ಳಿ: ಕಲಾವಿದನ ಕೈಯಲ್ಲಿ ಅರಳುವ ಗಣಪನ ಮೂರ್ತಿಗಳ ಕಲೆ ಬಹಳ ಅದ್ಭುತ ಎಂದು ಮಹರ್ಷಿ ಮಂದಿರದ ಖ್ಯಾತ ಜ್ಯೋತಿಷಿ ಡಾ.ಆನಂದ ಗುರೂಜಿ ತಿಳಿಸಿದರು.
ಇವರು ಪಟ್ಟಣದ ಮಹೇಶ್ ಗಣಪತಿ ಸ್ಟಾಲ್ ಗೆ ಭೇಟಿ ನೀಡಿ ಗಣಪತಿ ಹಬ್ಬದ ಪ್ರಯುಕ್ತ ಗೌರಿ ಗಣೇಶ ಮಣ್ಣಿನ ವಿಗ್ರಹಗಳನ್ನು ಮಹರ್ಷಿ ಮಂದಿರ ಆಶ್ರಮಕ್ಕೆ ಕೊಂಡಯುವ ಸಂದರ್ಭದಲ್ಲಿ ಮಾತನಾಡಿ ಗಣಪತಿ ಹಬ್ಬವನ್ನು ಗಣೇಶ ಚತುರ್ಥಿ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಗಣೇಶನ ಜನ್ಮ ದಿನವಾಗಿ ಆಚರಿಸುವ ಒಂದು ಬಹಳ ವಿಜೃಂಭಣೆಯ ಸಡಗರ ಸಂಭ್ರಮದ ಹಬ್ಬವಾಗಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಮಣ್ಣಿನ ಗೌರಿ ಗಣೇಶನ ಮೂರ್ತಿಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಪ್ರತಿಷ್ಠಾಪಿಸಿ ಪೂಜಿಸಿ ಗಣಪತಿಗೆ ಪ್ರಿಯವಾದ ಮೋದಕ,ಕಡುಬು ಮುಂತಾದ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ವರ್ಷಕ್ಕೆ ಒಂದು ಬಾರಿ ಬರುವ ಭಾದ್ರಪದ ಮಾಸದ ಗೌರಿ ಗಣೇಶ ಹಬ್ಬವುನ್ನು ತಮ್ಮ ಬಂಧು ಮಿತ್ರ ಪರಿವಾರದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮತನಾಡಿ ಗಣೇಶೋತ್ಸವದ ಇತಿಹಾಸವು 1893 ರಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವ ವನ್ನು ಕುಟುಂಬದ ಆಚರಣೆಯಿಂದ ರಾಷ್ಟ್ರೀಯ ಮತ್ತು ಸಾರ್ವಜನಿಕ ಉತ್ಸವವಾಗಿ ಪರಿವರ್ತಿಸಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭಾರತೀಯರೆಲ್ಲರೂ ಒಂದು ಗೂಡುವಂತೆ ಮಾಡಿ ಪ್ರತಿಯೊಬ್ಬರಿಗೂ ದೇವರು ಎಂಬ ಆಚರಣೆಯೊಂದಿಗೆ ಸಾರ್ವಜನಿಕವಾಗಿ ಮಣ್ಣಿನ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿ ಪೂಜೆಸಿ ಉತ್ಸವದ ಕೊನೆಯಲ್ಲಿ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಸುವ ಸಂಪ್ರದಾಯವನ್ನು ಪ್ರಾರಂಭಿಸಿದಾರೆಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಮಹೇಶ್ ಗಣೇಶ್ ಸ್ಟಾಲ್ ನ ಎಂ.ನಾರಾಯಣಸ್ವಾಮ, ಲಕ್ಷ್ಮಮ್ಮ, ಎನ್. ಮಹೇಶ್,ಜ್ಯೋತಿ,ಎನ್.ಮಹೇಂದ್ರ ಯೋಗಿತ ಹಾಗೂ ನಿಹಾರಿಕಾ ಮೊದ ಲಾದವರು ಹಾಜರಿದ್ದರು.