ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಗೆ  ನೂತನ ಅಧ್ಯಕ್ಷರಾಗಿ ಶ್ರೀಮತಿ ಮಂಗಳ ಗೌರಿ ಪರ್ವತಯ್ಯ ನೇಮಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಲಯನ್ಸ್ ಕ್ಲಬ್ ನಲ್ಲಿ  ಸುಮಾರು ವರ್ಷಗಳಿಂದ ಸದಸ್ಯನಿಯಾಗಿ  ಸೇವೆ ಸಲ್ಲಿಸಿದ್ದ   ಶ್ರೀ ಮತಿ ಮಂಗಳಗೌರಿ ಪರ್ವತಯ್ಯ ಅವರು 2024-25ನೇ ಸಾಲಿನ   ನೂತನ ಅಧ್ಯಕ್ಷೆನಿಯಾಗಿ ಅಧಿಕಾರ ಸ್ವೀಕರಿಸಿದರು  
ದೊಡ್ಡಬಳ್ಳಾಪುರದ ಹೊರವಲಯದ ಬಾಶೆಟ್ಟಿಹಳ್ಳಿ ಯಲ್ಲಿರುವ ಅನ್ನಪೂರ್ಣೆಶ್ವರಿ ಕನ್ವೆಷನ್ ಪಾರ್ಟಿ ಹಾಲ್ ನಲ್ಲಿ  ನೆಡೆದ ಕಾರ್ಯಕ್ರಮದಲ್ಲಿ   ಅಂತರ ರಾಷ್ಟ್ರೀಯ ನಿರ್ದೆಶಕ ಕೆ.ವಂಶಿಧರಬಾಬು  2024-2025ನೇ ನೂತನ ಅಧ್ಯಕ್ಷ ಹಾಗು ಪದಾಧಿಕಾರಿಗಳಿಗೆ  ನೇಮಕ ಮಾಡಿ ಪ್ರಮಾಣ ಬೋಧಿಸಿದರು
 ನಂತರ ಮಾತನಾಡಿ ಲಯನ್ಸ್ ಕ್ಲಬ್ 50 ವರ್ಷ ಗಳು ಪೂರೈಸಿದ್ದು  ಎಲ್ಲಾ ಕ್ಲಬ್ ಗಳಿಗಿಂತ ಮಾದರಿಯಾಗಿದೆ ಹೆಚ್ಚು ಆಧ್ಯತೆ ಕೊಟ್ಟು ಸೇವೆ ಮಾಡಿದವರಿಗೆ  ಗೌರವ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
2024-25 ನೇ    ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕೆ ಪಿ ಲಕ್ಷ್ಮೀನಾರಾಯಣ್  (ಕಾರ್ಯದರ್ಶಿಗಳು)
ಕೆ ಜೆ ಗೋಪಾಲ್ (ಖಜಾಂಚಿ)ಬಿ ಭಾರತಿ ಮಂಜುನಾಥ (ಜಂಟಿ ಕಾರ್ಯದರ್ಶಿ ) ಎಸ್.ವಿ.ನಂಜುಂಡಸ್ವಾಮಿ ವಸುಂಧರರಡ್ಡಿ ( ಉಪಾಧ್ಯಕ್ಷ) ಆರ್ ಎಸ್ ಮಂಜುನಾಥ( ಸದಸ್ಯತ್ವ ಸಮಿತಿಯ ಛೇರ್ಪರ್ಸನ್ ) ಸಿ ಎನ್ ರಾಜಶೇಖರ (ಎಲ್ ಸಿ ಐ ಎಷ್   ಸಂಯೋಜಕ) ಬಿ ಪಿ ಪ್ರಿಯಾಂಕ(ಸೇವಾ ಕಮಿಟಿಯ ಛೇರ್ಮೆನ್)  ಹೆಚ್ ಕೆ ನಟರಾಜ್ (ಮಾರ್ಕೆಟ್ ಮತ್ತು ಸಂವಹನ) ರೇಖಾ ವೆಂಕಟೇಶ (ಸಾರ್ವಜನಿಕ ಸಂಪರ್ಕಾಧಿಕಾರಿ) ಕೆ ವಿ ಪ್ರಭುಸ್ವಾಮಿ (ಆಡಳಿತ) ಕೆ ವಿ ಮಂಜುನಾಥ (ಸುದ್ದಿ ಪತ್ರ ಸಂಪಾದಕರು) ಎಸ್ ಡಿ.ಪರ್ವತಯ್ಯ ( ಕಾರ್ಯಕಾರಿ ಸಮಿತಿ ಛೇರ್ಮೆನ್) ಕೆ .ಮೋಹನಕುಮಾರ್ ( ಭದ್ರತೆ ಆಧಿಕಾರಿ)ಎಂ. ಆರ್.ವೆಂಕಟೇಶ (ಟೇಲ್ ಟ್ವಿಸ್ಟರ್) ಎಸ್.ಪಿ.ವೈಢೂರ್ಯ( ಟೇಮರ್) ಹಾಗು 18 ಸದಸ್ಯರು ಅಯ್ಕೆ ಮಾಡಲಾಯಿತು.