ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಸಮರ್ಥ ನಾಯಕ– ದೀರಜ್ ಮುನಿರಾಜು
ದೊಡ್ಡಬಳ್ಳಾಪುರ:ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಸಮರ್ಥ ನಾಯಕ ಹಾಗು ಜನಪರ ಅಡಳಿತ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಶಾಸಕ ದಿರೇಜ್ ಮುನಿರಾಜ್ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ
ನಾಡಪ್ರಭು ಕೆಂಪೇಗೌಡರ 515 ಜಯಂತ್ಯೋತ್ಸವ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರು ದೂರದೃಷ್ಠಿ ಸಮರ್ಥ ಹಾಗು ಜನಪರ ಅಡಳಿತ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಹಾಗು ರಾಜ್ಯ ರಾಜದಾನಿ ಬೆಂಗಳೂರು ನಿರ್ಮಾಣ ಮಾಡುವಲ್ಲಿ ಕೆಂಪೇ ಗೌಡರ ಪಾತ್ರ ಪ್ರಮುಖವಾಗಿದೆ ಇಂದು ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಎಲ್ಲಾ ರಂಗದಲ್ಲಿಯು ಬಲಿಷ್ಠವಾಗಿದೆ ಕೆಂಪಗೆ ಗೌಡರು ವೃತ್ತಿಗೆ ಅನುಗುಣವಾಗಿ ಮಾರುಕಟ್ಟೆ ನಿರ್ಮಾಣ ಹಾಗು ಕೃಷಿಕರಿಗೆ ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ನಿರ್ಮಾಣ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನಂತರ ನಾಡಪ್ರಭು ಕೆಂಪೇಗೌಡರ ಸಂಘದ ಅಧ್ಯಕ್ಷ ಟಿ. ವಿ ಲಕ್ಷ್ಮೀನಾರಾಯಣ್ ಮಾತನಾಡಿ ಕೆಂಪೇಗೌಡರ ಆಳ್ವಿಕೆಯಲ್ಲಿ ಎಲ್ಲಾ ದರ್ಮ ಎಲ್ಲಿ ಜಾತಿಯವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಹಾಗು ಸಾಮಾಜಿಕ ಪರಿಕಲ್ಪನೆ ಹೊಂದಿದ್ದರು ಎಲ್ಲಾ ರಂಗದಲ್ಲಿ ಪ್ರತಿಯೊಬ್ಬರಿಗೂ ಸರಿಸಮಾನವಾದ ಬದುಕು ಜೀವನಾದರ್ಶದ ಸ್ಪೂರ್ತಿಯಾಗಿ ಇದ್ದರು ಅವರ ತತ್ವ ಸಿದ್ದಾಂತ ನಮ್ಮಗಳ ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕಿದೆ ಎಂದರು.
ಹಿರಿಯ ಓಕ್ಕಲಿಗ ಸಮಾಜದ ಮುಖಂಡ ಕೆ ಎಂ ಹನುಮಂತರಾಯಪ್ಪ ಮಾತನಾಡಿ ಕೆಂಪೇಗೌಡ ಒಬ್ಬ ಆದರ್ಶ ಪುರುಷ ರೈತರಿ ವ್ಯವಸಾಯ ಮಾಡಲು ಬೆಂಗಳೂರಿನ ಸುತ್ತಮುತ್ತ ನೂರಾರು ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಕೃಷಿಗೆ ಆದ್ಯತೆ ಹಾಗು ವ್ಯಾಪಾರಸ್ಥರಿಗೆ ಅವರ ಕಸುಬಿಗೆ ಅನುಗುಣವಾಗಿ ಮಾರುಕಟ್ಟೆ ನಿರ್ಮಾಣ ಮಾಡುವ ಮೂಲಕ ಅಂದಿನಿಂದ ಇಂದಿನ ಸಮಾಜಕ್ಕೂ ಮಾದರಿಯಾಗಿದ್ದಾರೆ ಎಂದರು
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ವಿದ್ಯಾ ವಿಭಾ ರಾಥೋಡ್ ನಿಕಟಾ ಪೂರ್ಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೇ ಪ್ರಮೀಳ ಮಹದೇವ್ ರಾಜಘಟ್ಟ ರವಿ. ಅಶ್ವಥ್ ರಂಗಭೂಮಿ ಕಲಾವಿದ ಮುನಿ ಪಾಪಯ್ಯ ಓಕ್ಕಲಿಗ ಸಂಘದ ಪದಾಧಿಕಾರಿಗಳು ಕನ್ನಡಪರ ರೈತಪರ ಸಾರ್ವಜನಿಕರು ಭಾಗವಹಿಸಿದ್ದರು.
Post Views: 888