ಕನ್ನಡಿಗರ ಮೀಸಲಾತಿ ಉದ್ಯೋಗಕ್ಕಾಗಿ ಫ್ರೀಡಂ ಪಾರ್ಕ್ ನಲ್ಲಿ ಜುಲೈ ೧ ರಂದು ಬೃಹತ್ ಪ್ರತಿಭಟನೆ

ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಕನ್ನಡಿಗರ ಏಳಿಗೆಗಾಗಿ ಈ ನಾಡಿನ ಭಾಷೆ ಜಲ ಗಡಿ ವಿದ್ಯಾರ್ಥಿ ಇನ್ನು ಹಲವಾರು ವಿಚಾರಗಳಲ್ಲಿ ಕನ್ನಡರಿಗೋಸ್ಕರ ದುಡಿಯುತ್ತಿದ್ದು ಇದೀಗ “ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಇರಬೇಕು ಕನ್ನಡರೀಗೆ ಮೊದಲ ಆದ್ಯತೆ ಕೊಡಬೇಕು ಕರ್ನಾಟಕದಲ್ಲಿ ಲಕ್ಷಾಂತರ ಯುವ ನಿರುದ್ಯೋಗಿಗಳು ಕೆಲಸಗಳಿಲ್ಲದೆ ಒಂದು ದಿನ ಊಟಕ್ಕೂ ಕೂಡ ಪರದಾಡುತ್ತಿದ್ದಾರೆ ಆದ್ದರಿಂದ ಡಾ.ಸರೋಜಿನಿ ಮಹಿಷಿ ವರದಿಯನ್ನು ಈ ಕೂಡಲೇ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿ ಸೋಮವಾರ ಇಡಿ ರಾಜ್ಯದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹಕ್ಕೆ” ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ್ ಗೌಡ್ರು ಬೃಹತ್ ಮಟ್ಟದಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ದೇವನಹಳ್ಳಿ ನೆಲಮಂಗಲ ಹೊಸಕೋಟೆ ವತಿಯಿಂದ ಕರವೇ ಸೇನಾನಿಗಳು ಬಹು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ಸು ಗಳಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ್ರರವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

Post Views: 99