ಮೆಳೇಕೋಟೆ ಶಾಲೆಯಲ್ಲಿ ಯುವ ಸಂಪತ್ತು ಚುನಾವಣೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೊಕು ತೂಬಗೆರೆ ಹೋಬಳಿ
ಮೆಳೇಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮೇಳೇ ಕೋಟೆ ಶಾಲೆಯಲ್ಲಿ ಯುವ ಸಂಸತ್ತಿನ ಚುನಾವಣೆ ನಡೆಸಲಾಯಿತು
ಈ ವೇಳೆ ಶಾಲಾ ಮುಖ್ಯ ಶಿಕ್ಷಕರು ಮಾತನಾಡಿ,ಕೆ.ವಿ. ವೆಂಕಟೇಶ ರೆಡ್ಡಿ ಮಕ್ಕಳಿಗೆ ಸಂಸತ್ತಿನ ಕಲ್ಪನೆ ಅಡಿಯಲ್ಲಿ ನಾಯಕತ್ವ ರೂಪಿಸುವ ನಿಟ್ಟಿನಲ್ಲಿ ಯುವ ಸಂಸತ್ತು ಚುನಾವಣೆಯನ್ನು ನಡೆಸಲಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆ ಮಹತ್ತರವಾದುದು. ಮಕ್ಕಳಲ್ಲಿ ಪ್ರೌಢಶಾಲೆ ಹಂತದಲ್ಲಿಯೆ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರದ ನಿಯಮದಂತೆ ಚುನಾವಣೆ ನಡೆಸಲಾಗುತ್ತಿದೆ ಎಂದು ಹೇಳಿದರು
ಶಾಲೆಯ ಮುಖ್ಯಶಿಕ್ಷಕರಾದ ಮುಖ್ಯ ಕೆ.ವಿ. ವೆಂಕಟೇಶ ರೆಡ್ಡಿ ಚುನಾವಣಾಧಿಕಾರಿಯಾಗಿ, ಸಮಾಜ ವಿಜ್ಞಾನ ಶಿಕ್ಷಕ ರಾಮಚಂದ್ರಯ್ಯ ಸಹಾಯಕ ಚುನಾವಣಾಧಿಕಾರಿಯಾಗಿ, ಶಿಕ್ಷಕರುಗಳಾ ಎಂ.ಬಸವರಾಜು, ಬಿ.ಸುಶೀಲ, ಪಿ.ಎನ್.ಸ್ವಾತಿ, ಡಿ.ಎಂ.ಮೋಹನ್ ಕುಮಾರ್, ಎಂ.ಸಿ.ಗಿರಿರAಗಯ್ಯ ಮತ್ತು ಕೆ.ಎನ್.ಸಂತೋಷ. ತರಗತಿಯ ಚುನಾವಣಾ ಅಧಿಕಾಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ಶಾಲಾ ಯುವ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
ಚುನಾವಣೆಯಲ್ಲಿ ೧೦ನೇ ತರಗತಿಗೆ ಭವಿಷ್ ಗೌಡ, ಎನ್.ನಿಶಾಂಕ್, ಮೋನಿಶಾ, ಜಾಹ್ನವಿ, ೯ನೇ ತರಗತಿ ಎ.ವಿಭಾಗಕ್ಕೆ ಅಜಯ್ ಕುಮಾರ್, ಸಿ.ಎ.ಅಂಕಿತ್ ಕುಮಾರ್, ಟಿ.ಎ.ಅಮಿತಾ, ಎಸ್.ಬಿ.ತ್ರಿಶಾ ಮತ್ತು ೯ನೇ ತರಗತಿ ಬಿ ವಿಭಾಗಕ್ಕೆ ಎಚ್.ಭುವನ್ ಗೌಡ, ಎನ್.ಅಪೂರ್ವ, ೮ನೇ ತರಗತಿ ಎ ವಿಭಾಗಕ್ಕೆ ಎಸ್.ನಿತಿನ್ ಕುಮಾರ್, ಸಿ.ಜಿ.ಲಕ್ಷ್ಮಿ, ೮ ನೇ ತರಗತಿ ಬಿ ವಿಭಾಗಕ್ಕೆ ಅಭಿಲಾಷ್, ಸಿ.ವಿ.ಬಿಂದು ಆಯ್ಕೆಯಾಗಿದ್ದಾರೆ.
ಶಾಲಾ ಯುವ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿಯವರು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿಕುಮಾರ್ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.
ಫೋಟೋ:೦೮೦೭ಡಿಬಿಪಿಹೆಚ್‌೦೨ ತಾಲೂಕಿನ ಮೇಳೆಕೋಟೆ ಶಾಲೆಯಲ್ಲಿ ಯುವ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು.