ಕನಸವಾಡಿ ಶಾಲಾ ಮಕ್ಕಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸ್ಕೂಲ್ ಬ್ಯಾಗ್, ನೋಟ್ ಬುಕ್, ಶೂ ವಿತರಣೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕು
ಮಧುರೆ ಹೋಬಳಿ ಕನಸವಾಡಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ 1993ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ನೋಟ್ ಬುಕ್, ಸ್ಕೂಲ್‌ಬ್ಯಾಗ್,ಶೂ, ಮಧ್ಯಾಹ್ನದ ಬಿಸಿ ಊಟಕ್ಕೆ
ಅಗತ್ಯ ಇರುವ ತಟ್ಟೆ, ನೀರಿನ ಲೋಟ ವಿತರಣೆ ಹಾಗೂ 2024ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕಾರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಟಿ.ವಿಜಯ್ ಕುಮಾರ್, ಗ್ರಾಮೀಣ ಪ್ರದೇಶದಲ್ಲೂ ಸರ್ಕಾರಿ ಪ್ರೌಢ ಶಾಲೆ ಆರಂಭವಾಗಿದ್ದರಿAದಲೇ ಈ ಭಾಗದ ಸಾವಿರಾರು ಜನ
ವಿದ್ಯಾವಂತರಾಗಿ ಇಂದು ಉತ್ತಮ ಸ್ಥಿತಿಗೆ ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕನಸವಾಡಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿರುವ ನೂರಾರು ವಿದ್ಯಾರ್ಥಿಗಳು ಲೋಕಾಯುಕ್ತ, ಸರಕಾರಿ ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಇದ್ದಾರೆ
ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಜಿ.ಚುಂಚೆಗೌಡ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನಪ್ರಾಂಶುಪಾಲ ಉಪೇಂದ್ರ, ಪ್ರೌಢಶಾಲೆಯ ಮುಖ್ಯಶಿಕ್ಷಕ, ನಾಗೇಂದ್ರ,ಪ್ರಕಾಶ್, ಮೂರ್ತಿ, ಶಿವಕುಮಾರ್‌ಆರ್.ವಿ.ಗೌಡ, ವಿಶ್ವನಾಥ್, ಶ್ರೀಕಾಂತ್,ನಾಗೇಂದ್ರರಾವ್, ನಾಗರಾಜರಾವ್ ಇದ್ದರು.