ಟಿಪ್ಪರ್ ಲಾರಿ ಹರಿದು ಯುವಕ ಸಾವು

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ನಗರದ ಹೊರವಲಯದ
ರೈಲ್ವೆ ಸ್ಟೇಷನ್ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಟಿಪ್ಪರ್ ಲಾರಿ ದ್ವಿ ಚಕ್ರ ವಾಹನಕ್ಕೆ ಹಿಂಬದಿ ಹಿಂದ ಡಿಕ್ಕಿ ಹೊಡೆದು ಪರಿಣಾಮ ದ್ವಿ ಚಕ್ರ ವಾಹನ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿರುವ ಘಟನೆ ನೆಡೆದಿದೆ.
ಮೃತ ಪಟ್ಟ ಬೈಕ್ ಸವಾರ ದೊಡ್ಡಬಳ್ಳಾಪುರ ಕೆಂಪೇಗೌಡ ನಗರದ ಅರ್ಜುನ ರವರ ಮಗ ಕುಶಾಲ (19) ಎರಡು ವಾಹನಗಳು ರೈಲ್ವೇ ಸ್ಟೇಷನ್ ನಿಂದ ಸ್ಕೌಟ್ ರಸ್ತೆಯ ಮೂಲಕ ಹೋಗುವ ಸಂದರ್ಭದಲ್ಲಿ ಕೆಂಪೇಗೌಡ ಅಸ್ಪತ್ರೆ ಮುಂದೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಲಾರಿಯ ಹಿಂಬದಿಯ ಚಕ್ರ ತಲೆಯಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೋಲೀಸ್ ಮೂಲಗಳು ತಿಳಿಸಿದ್ದಾರೆ
ನಗರದ ಠಾಣೆಯ ಪೋಲೀಸರು ಘಟನಾ ಸ್ಥಳಕ್ಕೆ ದಾವಿಸಿ  ಪ್ರಕರಣ ದಾಖಲಿಸಿ ಕೊಂಡಿದ್ದಾರೆ